ಸಜೀಪನಡು ಗ್ರಾಮದ ಹೊಳೆ ಬದಿಯಲ್ಲಿ ಸುಮಾರು 40 ಲಕ್ಷ ರುಪಾಯಿ ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಆಹಾರ ಮತ್ತು ನಾಗರೀಕ ಪೂರೈಕೆ ಖಾತೆ ಸಚಿವ ಯು.ಟಿ.ಖಾದರ್ ಶಿಲಾನ್ಯಾಸ ನೆರವೇರಿಸಿದರು.
ಈ ಹಿಂದೆ ಜಟ್ಟಿ ವೀಕ್ಷಣೆಗೆ ಬಂದಿದ್ದ ವೇಳೆ ತಡೆಗೋಡೆ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ನಡೆಸುವ ಭರವಸೆಯನ್ನು ಯು.ಟಿ.ಖಾದರ್ ನೀಡಿದ್ದರು. ಅದರಂತೆ ಈ ಎಲ್ಲಾ ಅಭಿವೃದ್ದಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಈ ಸಂದರ್ಭ ಅವರು ಮಾತನಾಡಿ ಹೊಳೆಬದಿ ತಡೆಗೋಡೆ ನಿರ್ಮಾಣಕ್ಕೆ 15 ಲಕ್ಷ ರುಪಾಯಿ, ಬೊಳಮೆ ರಸ್ತೆ ಕಾಂಕ್ರೀಟಿಕರಣಕ್ಕೆ 10 ಲಕ್ಷ ರುಪಾಯಿ, ತಂಚಿಬೆಟ್ಟು ರಸ್ತೆ ಅಭಿವೃದ್ದಿಗೆ 3 ಲಕ್ಷ ರುಪಾಯಿ ಸೇರಿದಂತೆ ಕೋಣೆಮಾರು ಕಿರು ಸೇತುವೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ತಡೆಗೋಡೆ ನಿರ್ಮಾಣ ಹಾಗೂ ಬೊಳಮೆ ರಸ್ತೆ ಕಾರ್ಯ ಆರಂಭಗೊಂಡಿರುವುದಾಗಿ ತಿಳಿಸಿದರು.
ಈ ಸಂದರ್ಭ ಜಿ.ಪಂ.ಮಾಜಿ ಸದಸ್ಯರಾದ ಉಮ್ಮರ್ ಫಾರೂಕ್, ಎಸ್.ಅಬ್ಬಾಸ್, ಸಜೀಪನಡು ಗ್ರಾ.ಪಂ.ಮಾಜಿ ಅಧ್ಯಕ್ಷ ಸೋಮನಾಥಸದಸ್ಯರಾದ ರಫೀಕ್ ಗೋಳಿಪಡ್ಪು, ಸತ್ತಾರ್ ಹಾಜಿ, ಬಶೀರ್ ಬೊಳಾಮೆ, ಎಸ್.ಇಬ್ರಾಹಿಂ, ಯುವ ಕಾಂಗ್ರೆಸ್‌ನ ನಿಸಾರ್ ಸಜೀಪ, ಫಯಾಝ್, ಆಸೀಪ್, ಸಿರಾಜ್ ಕಿನ್ಯ, ರಮ್ಲಾನ್, ಮುಸ್ತಾಕ್, ಮಹಮ್ಮದ್ ಮೋನು ಮತ್ತಿತರರು ಹಾಜರಿದ್ದರು.