೨೦೧೭-೧೮ನೇ ಸಾಲಿನ ಆರ್.ಟಿ.ಇ. ಆನ್‌ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭಗೊಂಡಿರುವುದಾಗಿ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.
೨೦೧೭-೧೮ನೇ ಸಾಲಿನ ಶಿಕ್ಷಣ ಹಕ್ಕು ಕಾಯಿದೆ ೧೨(೧)(ಸಿ) ಅಡಿ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ (ಆರ್.ಟಿ.ಇ.) ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಸಲು ಇಚ್ಛಿಸುವವರು ಮಾ.೩೧ರೊಳಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕೈಕುಂಜೆ, ಬಿ.ಸಿ. ರೋಡ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವವರು (೧) ಮಗುವಿನ ಭಾವಚಿತ್ರ (೨) ಜನನ ಪ್ರಮಾಣ ಪತ್ರ (ಮಗುವಿನ ಜನ್ಮ ದಿನಾಂಕವು ೨೦೧೦ ಆ.೧ರಿಂದ ೨೦೧೧ ಜು.೩೧ರೊಳಗೆ ಇರಬೇಕು.) (೩) ಮಗುವಿನ ಮತ್ತು ಪೋಷಕರ ಆಧಾರ್ ಕಾರ್ಡ್ (೪) ಹಿಂದುಳಿದ ವರ್ಗಗಳಾಗಿದ್ದಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ (೫) ಪ.ಜಾತಿ/ಪ.ವರ್ಗ ಮತ್ತು ಪ್ರವರ್ಗ(೧) ಆಗಿದ್ದಲ್ಲಿ ಜಾತಿ ದೃಢೀಕರಣ ಪತ್ರ ಇವುಗಳನ್ನು ತರಬೇಕು. ಹೆಚ್ಚಿನ ಮಾಹಿತಿಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ದೂರವಾಣಿ ಸಂಖ್ಯೆ: ೦೮೨೫೫-೨೩೨೫೭೯ ನ್ನು ಕಛೇರಿ ಅವಽಯಲ್ಲಿ ಸಂಪರ್ಕಿಸಬಹುದಾಗಿದೆ.