ಮೆಂತೆ ಅಥವಾ ಮೆಂತ್ಯ ಅಥವಾ ಮೆತ್ತೆ.. ಇದು ಕಹಿಯಾದರೂ ಪರಿಣಾಮಕಾರಿ.

  • ಡಾ.ರವಿಶಂಕರ್ ಎ.ಜಿ.
  • ಅಂಕಣ: ಪಾಕಶಾಲೆಯೇ ವೈದ್ಯಶಾಲೆ
  • www.bantwalnews.com

 

ಜಾಹೀರಾತು

  1. ಮೆತ್ತೆಯು ವಾತ ಮತ್ತು ಕಪ ಶಾಮಕವಾಗಿದ್ದು ,ಪಿತ್ತವನ್ನು ಅಧಿಕ ಮಾಡುತ್ತದೆ.
  2. ಮೆತ್ತೆಯು ಪಿತ್ತಜನಕಾಂಗ ಹಾಗು ಮೇದೋಜೀರಕ ಗ್ರಂಥಿಗೆ ಬಲದಾಯಕವಾಗಿದ್ದು, ಅಮೂಲಕ ಜೀರ್ಣಾಂಗ ವ್ಯೂಹದ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗು ತಿಂದ ಆಹಾರ ಸರಿಯಾಗಿ ಪಚನವಾಗುತ್ತದೆ.
  3. ಮೆತ್ತೆಯನ್ನು ಕಷಾಯ ಮಾಡಿ ಕುಡಿಯುವುದರಿಂದ ದೇಹದ ಸಂಧು ಮತ್ತು ಮಾಂಸಖಂಡಗಳ ನೋವು ನಿವಾರಣೆಯಾಗುತ್ತದೆ. ವಾತ ರೋಗದಲ್ಲಿ ಇದು ಬಹು ಪ್ರಯೋಜನಕಾರಿಯಾಗಿದೆ.
  4. ಶರೀರದ ನರಗಳಿಗೆ ಮೆತ್ತೆಯು ಬಲದಾಯಕವಾಗಿದ್ದು ಇದರ ಸೇವನೆಯಿಂದ ನರಗಳ ದುರ್ಬಲತೆ ಕಡಿಮೆಯಾಗುತ್ತದೆ.
  5. ಜೊಲ್ಲು ರಸದ ಕೊರತೆಯಿಂದ ಬಾಯಿ ಒಣಗಿದಾಗ ಮೆತ್ತೆಯನ್ನು ಬಾಯಲ್ಲಿ ಜಗಿಯಬೇಕು., ಇದರಿಂದ ಸರಿಯಾಗಿ ಜೊಲ್ಲುರಸ ಸ್ರವಿಸುತ್ತದೆ.
  6. ಹೊಟ್ಟೆ ಹಾಗು ಕರುಳಿನಲ್ಲಿ ವಾಯು ತುಂಬಿ ಉಬ್ಬರಿಸಿದಂತಾಗಿ ಉಸಿರಾಡಲು ಕಷ್ಟವಾಗುತ್ತಿದ್ದರೆ ಮೆತ್ತೆಯನ್ನು ಬೆಲ್ಲದೊಂದಿಗೆ ಸೇರಿಸಿ ಜಗಿಯಬೇಕು ಅಥವಾ ಕಷಾಯ ಮಾಡಿ ಕುಡಿಯಬೇಕು.
  7. ಬಾಣಂತಿಯರು ಮೆತ್ತೆಯನ್ನು ಉಪಯೋಗಿಸುವುದರಿಂದ ಆಯಾಸ ,ಜಡತ್ವ, ನೋವು ಇತ್ಯಾದಿಗಳು ಕಡಿಮೆಯಾಗುತ್ತದೆ.
  8. ಬಾಣಂತಿಯರಲ್ಲಿ ಎದೆಹಾಲು ಕಡಿಮೆ ಇದ್ದಲ್ಲಿ ಮೆತ್ತೆಯ ಹಾಲು ಕಷಾಯ ಮಾಡಿ ಕುಡಿಯಬೇಕು. ಬೆಲ್ಲದೊಂದಿಗೆ ಸೇರಿಸಿ ಜಗಿದರೂ ಆದೀತು.
  9. ಮಲಬದ್ದತೆ ಇದ್ದಾಗ ಮೆತ್ತೆ ಮತ್ತು ಬೆಲ್ಲದ ಮಿಶ್ರಣವನ್ನು ಸೇವಿಸಬೇಕು.
  10. ಮೆತ್ತೆಯ ಕಷಾಯ ಕುಡಿಯುವುದರಿಂದ ಸ್ತ್ರೀಯರ ಕೆಲವು ವಿಧದ ಬಿಳುಪು ರೋಗವು ವಾಸಿಯಾಗುತ್ತದೆ.
  11. ಮೆತ್ತೆಯನ್ನು ನೀರಿನಲ್ಲಿ ಅರೆದು ತಲೆಗೆ ಹಾಕುವುದರಿಂದ ತಲೆ ಕೂದಲು ಬೆಳ್ಳಗಾಗುವುದು ಮತ್ತು ಅಧಿಕವಾಗಿ ಉದುರುವುದು ಕಡಿಮೆಯಾಗುತ್ತದೆ.
  12. ಮೆತ್ತೆಯನ್ನು ಗೋಮೂತ್ರದಲ್ಲಿ ಅರೆದು ಹಚ್ಚುವುದರಿಂದ ಕುರ, ಗುಳ್ಳೆ, ಊತ, ಸಂಧು ನೋವು ಇತ್ಯಾದಿಗಳು ಕಡಿಮೆಯಾಗುತ್ತದೆ.
  13. ಮೆತ್ತೆಯನ್ನು ಹಾಲಿನ ಕೆನೆಯಲ್ಲಿ ಅರೆದು ಕಣ್ಣಿನ ಸುತ್ತಲು ಲೇಪಿಸುವುದರಿಂದ ಕಣ್ಣಿನ ಸುತ್ತಲು ಕಾಣಿಸಿಕೊಳ್ಳುವ ವೈವರ್ಣ್ಯತೆ ಮಾಯವಾಗುತ್ತದೆ ಮತ್ತು ಕಣ್ಣಿನ ಕಾಂತಿ ವ್ರದ್ಧಿಯಾಗುತ್ತದೆ.
  14. ಮೆತ್ತೆಯನ್ನು ಮೊಳಕೆ ಬರಿಸಿ ತಿನ್ನುವುದರಿಂದ ಮಧುಮೇಹ ರೋಗವು ಹತೋಟಿಗೆ ಬರುತ್ತದೆ ಮತ್ತು ಶರೀರೆದ ಬಲ ವ್ರದ್ಧಿಯಾಗುತ್ತದೆ
  15. ಮೂತ್ರ ಸರಿಯಾಗಿ ವಿಸರ್ಜನೆಯಾಗದಿದ್ದಲ್ಲಿ ಮೆತ್ತೆಯ ಕಷಾಯ ಮಾಡಿ ಕುಡಿಯಬೇಕು. ಇದರಿಂದ ಮೂತ್ರ ಪ್ರವೃತ್ತಿ ಸರಾಗವಾಗಿ ಆಗುತ್ತದೆ.
  16. ಗಂಟಲು ನೋವು(Tonsillitis) ಇದ್ದಾಗ ಮೆತ್ತೆ ಕಷಾಯಕ್ಕೆ ಸ್ವಲ್ಪ ಉಪ್ಪು ಹಾಕಿ ದಿನಕ್ಕೆರಡು ಬಾರಿ ಬಾಯಿ ಹಾಗು ಗಂಟಲು ಮುಕ್ಕಳಿಸ ಬೇಕು.
  17. ಮೆತ್ತೆಯನ್ನು ನಿತ್ಯ ಸೇವಿಸುವುದರಿಂದ ಶರೀರದಲ್ಲಿರುವ ಅಧಿಕ ಕೊಬ್ಬಿನ ಅಂಶ (cholesterol ) ಕಡಿಮೆಯಾಗುತ್ತದೆ.
  18. ಕಪ ಪೂರಿತ ಕೆಮ್ಮಿನಲ್ಲಿ ಮೆತ್ತೆಯನ್ನು ಸೇವಿಸಿದರೆ ಕಪವು ಸರಾಗವಾಗಿ ಕೆಮ್ಮಿನ ಜೊತೆ ಹೊರಬರುತ್ತದೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Dr. Ravishankar A G

ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಎಂ.ಎಸ್. (ಸ್ನಾತಕೋತ್ತರ) ಪದವೀಧರರಾಗಿರುವ ಡಾ.ರವಿಶಂಕರ ಎ.ಜಿ, ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮಹಾವಿದ್ಯಾಲಯ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕರು. ವಿಟ್ಲದಲ್ಲಿ ಚಿಕಿತ್ಸಾಲಯವನ್ನೂ ಹೊಂದಿದ್ದಾರೆ. ಮೂಲವ್ಯಾಧಿ, ಭಗಂಧರ, ಸೊಂಟನೋವು, ವಾತರೋಗ, ಶಿರಶೂಲ ಇತ್ಯಾದಿಗಳಲ್ಲಿ ಕ್ಷಾರಕರ್ಮ, ಅಗ್ನಿಕರ್ಮ, ರಕ್ತಮೋಕ್ಷಣ ಮೊದಲಾದ ವಿಶೇಷ ಚಿಕಿತ್ಸೆ ನೀಡುವುದರಲ್ಲಿ ಪರಿಣತರು.