ಆಹಾರ ಸಚಿವ ಯು.ಟಿ.ಖಾದರ್ ಅವರ ರಾಜೀನಾಮೆ ಒತ್ತಾಯಿಸಿ ಬಂಟ್ವಾಳ ತಾಲೂಕಿನ ವಿಶ್ವ ಹಿಂದೂ ಪರಿಷತ್, ಬಜರಂಗ ದಳ ರಾಜ್ಯಪಾಲರ ಮೂಲಕ ಬಂಟ್ವಾಳ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿತು.
ಈ ಸಂದರ್ಭ ಬಂಟ್ವಾಳ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಜಿಲ್ಲಾ ಪ್ರಮುಖ ಸರಪಾಡಿ ಅಶೋಕ ಶೆಟ್ಟಿ ಸರಪಾಡಿ, ವಿಟ್ಲ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಕೃಷ್ಣಪ್ಪ ಕಲ್ಲಡ್ಕ, ಬಜರಂಗದಳದ ಜಿಲ್ಲಾ ಸಂಯೋಜಕ ಗುರುರಾಜ್ ಬಂಟ್ವಾಳ, ಬಂಟ್ವಾಳ ಬ*ಜರಂಗ ದಳದ ಸಂಯೋಜಕ ಪ್ರಕಾಶ್ ಬೆಳ್ಳೂರು, ಸಹ ಸಂಯೋಜಕ ಭುವಿತ್ ಶೆಟ್ಟಿ, ಪ್ರಮುಖರಾದ ಲೋಹಿತ್ ಪಣೋಲಿಬಲು, ಪ್ರಸನ್ನ ಮೆಲ್ಕಾರ್, ರಾಜೇಶ್ ಪಣೋಲಿಬಲು, ರಾಜ ಕಲ್ಲಡ್ಕ, ರಾಜೇಶ್ ಗೋಳ್ತಮಜಲು ಉಪಸ್ಥಿತರಿದ್ದರು.