ಮನೆ ಮುಂದೆ ಚರಂಡಿಯಲ್ಲಿ ನೀರು ಹೆಪ್ಪುಗಟ್ಟಿ ಹರಿದುಹೋಗದಿದ್ದರೆ ಏನಾಗುತ್ತದೆ?
ಕೊಳಚೆ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಅದರ ನೇರ ಪರಿಣಾಮ ಆಸುಪಾಸಿನಲ್ಲಿರುವ ಮನೆಗಳಿಗೆ ತಗಲುತ್ತದೆ. ಯಾವುದಾದರೂ ಮಾರಕ ರೋಗ ಬಂತು ಎಂದಾದರೆ ಮತ್ತೆ ಆಸ್ಪತ್ರೆಗೆ ಎಡತಾಕಬೇಕು. ಹೀಗಾಗಬಾರದು ಎಂದಿದ್ದರೆ ಚರಂಡಿಯಲ್ಲಿ ಕೊಳಚೆ ನೀರು ನಿಲ್ಲಬಾರದು.
ಆದರೆ ಇಲ್ಲಿ ಮನೆ ಎದುರೇ ಕೊಳಚೆ ನೀರು ನಿಂತಿದೆ. ಮಳೆ ನೀರು ಹರಿದು ಹೋಗಬೇಕಾದ ಜಾಗದಲ್ಲಿ ಕೊಳಚೆ. ಅದೂ ಮಾಣಿ ಗ್ರಾಮ ಪಂಚಾಯಿತಿ ಎದುರು.
ಸ್ಥಳೀಯ ನಿವಾಸಿ ಗೋಪಾಲ ಪೈ ಮಾಣಿ ಈ ಕುರಿತು ಫೇಸ್ ಬುಕ್ ನಲ್ಲಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಆಡಳಿತಕ್ಕೆ ಮನವಿ ಮಾಡಿದ್ದಾರೆ.
ನಮ್ಮ ಮನೆ ಮುಂದೆ ಈ ರೀತಿಯಾಗಿ ಕೊಳಚೆ ನೀರು ನಿಲ್ಲುತ್ತದೆ. ಮಾಣಿ ಗ್ರಾಮ ಪಂಚಾಯಿತಿ ಎದುರೇ ಮನೆ ಇದೆ. ಪರಿಹರಿಸಿ . ಇದು ನಮ್ಮ ಮನೆಯಿಂದ ಹೊರಬರುವ ನೀರೇನಲ್ಲ, ಹೊರಗಿನಿಂದ ಬರುವ ಕೊಳಚೆ ನಮ್ಮ ಮನೆಯ ಮುಂದೆ ಸೇರಿ ಗಬ್ಬು ನಾತ ಎದ್ದಿರುವುದಲ್ಲದೆ, ಸೊಳ್ಳೆಗಳು ಗಿಜಿಗುಟ್ಟುತ್ತಿವೆ. ಇದರಿಂದ ತೊಂದರೆಯಾಗುತ್ತಿದೆ ಈ ಕುರಿತು ಅವರು ಪಂಚಾಯಿತಿಗೆ ಈ ಮೊದಲೇ ದೂರು ನೀಡಿದ್ದರೂ ಶಾಶ್ವತ ಪರಿಹಾರ ಸಿಗಲಿಲ್ಲ. ಹೀಗಾಗಿ ಮನೆ ಮುಂದೆ ಕೊಳಚೆ ನೀರು ನಿಲ್ಲುವುದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.