ಸತ್ತಿರ ಪುತ್ತಿರ ನಾಡು ತುಳುನಾಡು

ಬಿ.ತಮ್ಮಯ್ಯ

ಅಂಕಣ: ನಮ್ಮ ಭಾಷೆ

www.bantwalnews.com

 

ಕ್ರಿ.ಪೂ. 3ನೇ ಶತಮಾನದಲ್ಲಿ ಅಶೋಕ ಚಕ್ರವರ್ತಿ ಕಾಲದಲ್ಲಿ ತುಳುನಾಡನ್ನು ಸತ್ಯಪುತ್ರನಾಡು (ಸತ್ತಿರ ಪುತ್ತಿರ ನಾಡು) ಎಂದೇ ಕರೆಯುತ್ತಿದ್ದರು.  ತುಳು ಎಂದರೆ ಹೋರಾಡು, ಎದುರಿಸು ಎಂಬ ಅರ್ಥ ಹಳೇ ಕನ್ನಡದಲ್ಲಿದೆ. ಆದುದರಿಂದ ತುಳುವರು ವೀರರು, ಶೂರರು. ಸೈನ್ಯದಲ್ಲಿ ಹೆಸರು ಮಾಡಿದ ಹೋರಾಟಗಾರರು.

ಚೋಳರ ಕಾಲದಲ್ಲಿ ಕುಡಮಲೈನಾಡು ಎಂಬ ಹೆಸರಿತ್ತು. ಕುಡಮಲೈ ಎಂದರೆ ಕಾವೇರಿ ಹುಟ್ಟುವ ತಾಣ ಎಂದು ಇತಿಹಾಸಕಾರರು ಹೇಳುತ್ತಾರೆ. ವೇಳ್ ವಂಶದ ನದ್ನನ್ ಕೊಂಕಣವನ್ನು ಆಳಿದರು. ಆಗ ಕೊಂಕಣನಾಡು ಕೊನಕಾನನಾಡು ಕೊಣ್ ಪೆರುಂಗಾನ ಎಂದು ಕರೆಯುತ್ತಿದ್ದರು. ಬೌದ್ಧರ ಕಾಲದಲ್ಲಿ ಮಂಗಳಾದೇವಿ ಮತ್ತು ಕದ್ರಿ ದೇಗುಲಗಳು ಇದ್ದೂ ಮಂಗಳಾಪುರ ಎಂದಾಗಲು ಮುಂದೆ ಮಂಗಳೂರು ಆಯಿತು.

ತುಳುನಾಡಿನ ದಕ್ಷಿಣಕ್ಕೆ ಚೇರನಾಡು (ಕೇರಳ) ಪೂರ್ವಕ್ಕೆ ಕೊಂಗನಾಡು (ಕನ್ನಡನಾಡು) ಮತ್ತು ಕೊಡಗು, ಉತ್ತರಪೂರ್ವಕ್ಕೆ ಶತವಾಹನರು ಆಳುತ್ತಿದ್ದರು. ನನ್ನರು ಶತಮಾನ 100ರಿಂದ 180ರವರೆಗೆ ಆಳಿದರು. ಉತ್ತರದ ಬನವಾಸಿಯ ಕದಂಬರು ಮಯೂರಶರ್ಮ ಹೀಗೆ ಸುತ್ತುವರಿದ ಮೂರು ರಾಜರು ಪಶ್ಚಿಮದಲ್ಲಿ ಅರಬಿ ಸಮುದ್ರ ತುಳುನಾಡಿನ ಗಡಿಗಳು. ತುಳುನಾಡಿನಲ್ಲಿ ಅನೇಕ ರೇವುಗಳು ಇದ್ದವು. ಈ ರೇವುಗಳ ಮೂಲಕ ವಿದೇಶದ ಜನರು ಹಡಗುಗಳ ಮೂಲಕ ಬಂದು ವ್ಯಾಪಾರ ಮಾಡುತ್ತಿದ್ದರು.

(ಮುಂದಿನ ವಾರ: ತುಳುವಿನ ಹಿರಿಮೆ)

 

B Thammayya

ತುಳು ಭಾಷೆ ಮಾತಾಡೋದು ಸುಲಭ. ಲಿಪಿ ವಿಚಾರ ಬಂದಾಗ ಹಿಂದೇಟು ಹಾಕುತ್ತೇವೆ. ಕಂದಾಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿದ್ದು ನಿವೃತ್ತರಾಗಿರುವ ಬಿ.ಸಿ.ರೋಡಿನ ಬಿ.ತಮ್ಮಯ್ಯ, ತುಳು ಲಿಪಿಯನ್ನು ಸರಳವಾಗಿಸುತ್ತಾರೆ. ಹಿಂದಿರುಗಿ ನೋಡಿದಾಗ ಸಹಿತ ಹಲವು ಪುಸ್ತಕಗಳನ್ನು ಬರೆದಿರುವ ಅವರು ಕಸಾಪ ತಾಲೂಕು ಘಟಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

Recent Posts