ಪಾಕಶಾಲೆಯೇ ವೈದ್ಯಶಾಲೆ

ಶೂನ್ಯ ಕೊಬ್ಬಿನಾಂಶ, ಇದು ಎಳ್ಳಿನ ವಿಶೇಷ

ಡಾ.ರವಿಶಂಕರ್ ಎ.ಜಿ.

ಅಂಕಣ: ಪಾಕಶಾಲೆಯೇ ವೈದ್ಯಶಾಲೆ

www.bantwalnews.com

ಜಾಹೀರಾತು

ಎಳ್ಳಿನ ಉಪಯೋಗವನ್ನು ತಿಳಿದುಕೊಳ್ಳುವ ಮೊದಲು ಅದರಲ್ಲಿರುವ ಅಂಶಗಳನ್ನು ತಿಳಿದುಕೊಂಡರೆ ಅದು ಎಷ್ಟು ಸತ್ವಭಾರಿತವಾದುದು ಎಂಬುದು ಮನವರಿಕೆಯಾಗುತ್ತದೆ. ಎಳ್ಳಿನಲ್ಲಿ ಕಪ್ಪು, ಬಿಳಿ ಮತ್ತು ಕೆಂಪು ಎಂಬ 3 ವಿಧಗಳಿದ್ದರೂ,ವೈದ್ಯಕೀಯ ಕ್ಷೇತ್ರದಲ್ಲಿ ಕಪ್ಪು ಎಳ್ಳು ಶ್ರೇಷ್ಟವಾದುದು.

ಎಳ್ಳಿನಲ್ಲಿ ಕಾರ್ಬೋಹೈಡ್ರೇಟ್,ಪ್ರೋಟಿನ್,ನಾರಿನ ಅಂಶ ವಿಟಮಿನ್ ಗಳಾದ ಎ,ಸಿ,ಇ,ಫೊಲೇಟ್,ನಿಯಾಸಿನ್,ಪಾಂಟೋಥೆನಿಕ್ ಏಸಿಡ್, ಪಿರಿಡೊಕ್ಸಿನ್,ರೈಬೋಫ್ಲೇವಿನ್ ಥೈಮಿನ್ ಗಳು ಯಥೇಷ್ಟವಾಗಿ ಇವೆ.ಇಷ್ಟೇ ಅಲ್ಲದೆ ಲವಣಾಂಶಗಳಾದ  ಸೋಡಿಯಂ ಮತ್ತು ಪೊಟ್ಯಾಸಿಯಂ,ಖನಿಜಾಂಶಗಳಾದ ಕ್ಯಾಲ್ಸಿಯಂ,ತಾಮ್ರ ಕಬ್ಬಿಣ ಮ್ಯಾಂಗನೀಸ್,ಮೆಗ್ನೀಶಿಯಂ ಇತ್ಯಾದಿಗಳು ಕೂಡ ಬಹುವಾಗಿ ಕಂಡುಬರುತ್ತದೆ.

ಜಾಹೀರಾತು

ಎಳ್ಳಿನಲ್ಲಿ ಶೂನ್ಯ ಕೊಬ್ಬಿನಾಂಶ (zero % cholesterol ) ಇರುವುದರಿಂದ ಇದು ವೈದ್ಯಕೀಯ ಕ್ಷೇತ್ರದಲ್ಲಿ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದಿದೆ.      

  1. ಎಳ್ಳನ್ನು ಅರೆದು ಸ್ವಲ್ಪ ಸಕ್ಕರೆ ಸೇರಿಸಿ ಅರ್ಧ ಲೋಟ ಹಾಲಿನೊಂದಿಗೆ ಸೇವಿಸಿದರೆ ರಕ್ತಯುಕ್ತ ಭೇದಿ ವಾಸಿಯಾಗುತ್ತ ದೆ.
  2. ಎಳ್ಳಿನಲ್ಲಿ ಕಬ್ಬಿಣ ಸತ್ವ ಇರುವುದರಿಂದ ಎಳ್ಳು ಮತ್ತು ಬೆಲ್ಲದ ಮಿಶ್ರಣವನ್ನು ಪ್ರತಿನಿತ್ಯ ಸೇವಿಸುವುದರಿಂದ ರಕ್ತ ಹೀನತೆ ನಿವಾರಣೆಯಾಗುತ್ತದೆ.
  3. ಎಳ್ಳನ್ನು ಸೇವಿಸುವುದರಿಂದ ಹೃದಯಕ್ಕೆ ಬಲದಾಯಕವಾಗಿದ್ದು ,ಹೃದಯದ ರಕ್ತ ನಾಳಗಳ ಶುದ್ಧಿಗೆ ಸಹಕರಿಸುತ್ತದೆ ಮತ್ತು ಆ ಮೂಲಕ ಹೃದಯಾಘಾತದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
  4. ಎಳ್ಳಿನಲ್ಲಿ ನಾರಿನ ಅಂಶ ಇರುವುದರಿಂದ ಸ್ವಲ್ಪ ಬೆಲ್ಲದೊಂದಿಗೆ ಸೇವಿಸಿದರೆ  ಮಲಬದ್ಧತೆಯನ್ನು ನಿವಾರಣೆಯಾಗುತ್ತದೆ.
  5. ಎಳ್ಳು ಉತ್ತಮ ವಾತ ಶಾಮಕವಾಗಿದ್ದು ಸಂಧುಗಳ ಹಾಗು ಮಾಂಸಖಂಡಗಳ  ನೋವು ನಿವಾರಿಸುವಲ್ಲಿ ಮಹತ್ತರ ಪಾತ್ರವಹಿಸುತ್ತದೆ. ಎಳ್ಳು ಮತ್ತು ಬೆಲ್ಲದ ಮಿಶ್ರಣವನ್ನು ಸೇವಿಸುವುದರಿಂದ ವಾತರಕ್ತ, ಸಂಧುವಾತ,ಆಮವಾತ  ಇತ್ಯಾದಿಗಳ ನೋವು  ಹಾಗು ಊತ ಕಡಿಮೆಯಾಗುತ್ತದೆ.
  6. ಎಳ್ಳನ್ನು ಹಾಲಿನಲ್ಲಿ ಅರೆದು ಲೇಪ ಹಾಕುವುದರಿಂದ ಉರಿಯುಕ್ತ ಊತವು ಶಮನವಾಗುತ್ತದೆ.
  7. ಎಳ್ಳನ್ನು ಬೆಣ್ಣೆಯಲ್ಲಿ ಕಲಸಿ ಗುದದ್ವಾರದ ಒಳಗೆ ಮತ್ತು ಹೊರಗೆ ಹಚ್ಚಿದರೆ ಮೂಲವ್ಯಾಧಿ ಕಡಿಮೆಯಾಗುತ್ತದೆ.
  8. ರಕ್ತಸ್ರಾವವಿರುವ ಮೂಲವ್ಯಾಧಿಯಲ್ಲಿ ಎಳ್ಳನ್ನು ಬೆಲ್ಲ ಮತ್ತು ತಂಪಾದ ಹಾಲಿನೊಂದಿಗೆ ಸೇವಿಸಬೇಕು.
  9. ಎಳ್ಳನ್ನು ಹುರಿದು,ಕಷಾಯ ಮಾಡಿ ಅರ್ಧ ಲೋಟದಷ್ಟು ದಿನಕ್ಕೆರಡುಬಾರಿ ಕುಡಿಯುವುದರಿಂದ ಮುಟ್ಟಿನ ರಕ್ತಸ್ರಾವ ಸರಿಯಾಗಿ ಆಗುತ್ತದೆ ಮತ್ತು ಅನಿಯಮಿತ ಮುಟ್ಟಿನ ತೊಂದರೆ ನಿವಾರಣೆಯಾಗುತ್ತದೆ.
  10. ಹಾಗೆಯೇ ಎಳ್ಳನ್ನು ಹುರಿದು ಕಷಾಯಮಾಡಿ ಕುಡಿಯುವುದರಿಂದ ಮೊಲೆ ಹಾಲು ಶುದ್ಧಿಯಾಗಿ ಮಗುವಿಗೆ ಉತ್ತಮ ಪೋಷಕಾಹಾರ ದೊರೆಯುತ್ತದೆ.
  11. ಎಳ್ಳು ಮೂಳೆಗಳಿಗೆ ಉತ್ತಮ ಬಲದಾಯಕವಾಗಿದ್ದು ಮೂಳೆ ಸವೆತ ಹಾಗು ಮೂಳೆಗಳ ಜೀರ್ಣತೆಯನ್ನು (osteoporosis) ತಡೆಕಟ್ಟುತ್ತದೆ.
  12. ಪ್ರತಿನಿತ್ಯ ಅರ್ಧ ಚಮಚದಷ್ಟು ಎಳ್ಳನ್ನು ಜಗಿಯುವುದರಿಂದ ವಸಡುಗಳಿಗೆ ಬಲದಾಯಕವಾಗಿದ್ದು ವಸಡುಗಳಿಂದ   ರಕ್ತಸ್ರಾವ, ಅಕಾಲದಲ್ಲಿ ಹಲ್ಲುಗಳ ಉದುರುವಿಕೆ ,ಬಾಯಿಯ ವಾಸನೆ ಇತ್ಯಾದಿಗಳು ನಿವಾರಣೆಯಾಗುತ್ತದೆ.
  13. ಎಳ್ಳು ಮಧ್ಯಪಾನದ  ಅಮಲನ್ನು ಇಳಿಸುತ್ತದೆ ಮತ್ತು ಪಿತ್ತ ಜನಕಾಂಗವನ್ನು ಶುದ್ಧೀಕರಿಸುತ್ತದೆ.
  14. ಏಡಿ ಕಚ್ಚಿದ ಜಾಗಕ್ಕೆ ಎಳ್ಳನ್ನು ನೀರಿನಲ್ಲಿ ಅರೆದು ಹಚ್ಚಿದರೆ ಉರಿ,ನೋವು ಹಾಗು  ಊತ ಕಡಿಮೆಯಾಗುತ್ತದೆ.
  15. ಎಳ್ಳು ತನ್ನಲ್ಲಿರುವ ಬಹುವಿಧವಾದ ಅಂಶಗಳಿಂದಾಗಿ ಗರ್ಭಿಣಿಯರಿಗೆ ಮತ್ತು ಗರ್ಭಕ್ಕೆ ಉತ್ತಮ ಪೋಷಕ ಆಹಾರವಾಗಿದೆ.

ಎಳ್ಳೆಣ್ಣೆ …..ಮುಂದಿನವಾರ …

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Dr. Ravishankar A G

ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಎಂ.ಎಸ್. (ಸ್ನಾತಕೋತ್ತರ) ಪದವೀಧರರಾಗಿರುವ ಡಾ.ರವಿಶಂಕರ ಎ.ಜಿ, ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮಹಾವಿದ್ಯಾಲಯ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕರು. ವಿಟ್ಲದಲ್ಲಿ ಚಿಕಿತ್ಸಾಲಯವನ್ನೂ ಹೊಂದಿದ್ದಾರೆ. ಮೂಲವ್ಯಾಧಿ, ಭಗಂಧರ, ಸೊಂಟನೋವು, ವಾತರೋಗ, ಶಿರಶೂಲ ಇತ್ಯಾದಿಗಳಲ್ಲಿ ಕ್ಷಾರಕರ್ಮ, ಅಗ್ನಿಕರ್ಮ, ರಕ್ತಮೋಕ್ಷಣ ಮೊದಲಾದ ವಿಶೇಷ ಚಿಕಿತ್ಸೆ ನೀಡುವುದರಲ್ಲಿ ಪರಿಣತರು.