ಜಿಲ್ಲಾ ಸುದ್ದಿ

ಸಮಾಜದಲ್ಲಿ ಯುವಜನತೆ ಪಾತ್ರ: ಇ-ಫ್ರೆಂಡ್ಸ್ ಆಶ್ರಯದಲ್ಲಿ ಕಾರ್ಯಾಗಾರ

ಪುತ್ತೂರು ನಗರದಲ್ಲಿ ಇಲ್ಲಿನ ಇ-ಫ್ರೆಂಡ್ಸ್ ಆಶ್ರಯದಲ್ಲಿ ಸಮಾಜದಲ್ಲಿ ಯುವ ಪಾತ್ರ ಜಾಗೃತಿ ಕಾರ್ಯಾಗಾರ ಶಿಬಿರ ನಡೆಯಿತು.
ದೇಶದ ಅಭಿವೃದ್ಧಿ ಯುವ ಜನತೆಯ ನ್ನು ಅವಲಂಭಿಸಿದೆ. ಯಾವುದೇ ಸಮಾಜ, ಸಮುದಾಯ ಬದಲಾವಣೆಯಾಗಲು ಸಾಂಘಿಕ ಆಂದೋಲನ ನಡೆಯಬೇಕು ಎಂದು  ಕರ್ನಾಟಕ ಮುಸ್ಲಿಂ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಎಚ್.ಅವರು ಹೇಳಿದರು.
ಸಮುದಾಯ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಸಂವಾದ ನಡೆಸಿದ ಅವರು, ಸರಕಾರೇತರ ಸಂಘಸಂಸ್ಥೆಗಳು ಸರಕಾರದ  ಗಮನ ಸೆಳೆಯಬೇಕಿದೆ ಎಂದರು‌. ಸಮಾಜದಲ್ಲಿ ಸಂವಹನ ಮಾಧ್ಯಮ, ಮಹಿಳೆಯರ ಪಾತ್ರ, ನೈತಿಕ ಶಿಕ್ಷಣ, ರಾಜಕೀಯ ಪ್ರಜ್ಞೆ, ನಾಗರಿಕ ಹಕ್ಕು, ಆಡಳಿತ ವರ್ಗ ಮೊದಲಾದ ವಿಚಾರಗಳ ವಿವರಿಸಿದರು.
ಇ-ಫ್ರೆಂಡ್ಸ್ ಅಧ್ಯಕ್ಷ ಇಂತಿಯಾಜ್, ಕಾರ್ಯದರ್ಶಿ ಅಝೀಝ್, ಸದಸ್ಯರಾದ ಡಾ. ಸಪ್ರಾಝ್, ಅಶ್ಪಾಕ್ ಬಪ್ಪಳಿಕೆ, ರಫೀಕ್ ರೋಯಲ್, ರಝಾಕ್, ಶಮೀರ್, ಮುಝಂಬಿಲ್, ಝುಬೈರ್ ಯು.ಕೆ.  ಮತ್ತಿತರರು ಚರ್ಚೆ ಯಲ್ಲಿ ಭಾಗವಹಿಸಿದರು. ಆಸೀಫ್ ಬಪ್ಪಳಿಕೆ, ಮುಕ್ತಾರ್, ಶುಕೂರ್, ಇಕ್ಬಾಲ್, ಶಾಕೀರ್, ರಿಯಾಝ್, ಆಸೀಫ್ ಐಡಿಯ ಉಪಸ್ಥಿತರಿದ್ದರು.
ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts