ವಿಶೇಷ ವರದಿ

ನಾವೆಲ್ಲ ಒಂದು ಎಂದು ಸಾರಿದ ಮನೆಯಂಗಳದ ಭಜನೆ

https://bantwalnews.com

ಶೋಷಿತ ಜನಸಮುದಾಯದ ಮನೆಯಂಗಳದಲ್ಲಿ ಭಜನೆ ನಡೆಸಿ, ಅವರ ಮನೆಯಲ್ಲೇ ಊಟ ಸೇವಿಸಿ ನಾವೆಲ್ಲ ಒಂದು ಎಂದು ಸಾರುವ ಕಾರ್ಯವನ್ನು ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಭಜನಾ ಮಂಡಳಿ ನಡೆಸಿತು.

ಕಜೆಕಾರುವಿನ ದಲಿತ ಕಾಲೊನಿಯಲ್ಲಿ ಅಲಂಕೃತ ತುಳಸೀಕಟ್ಟೆ ಮುಂಭಾಗ ಎರಡು ಗಂಟೆ ಭಜನಾ ಸೇವೆ ನೀಡಿದ ತಂಡ ಬಳಿಕ ಪೂಜೆ ನಡೆಸಿತು. ಇದರ ನೇತೃತ್ವವನ್ನು ಮನೆ ಯಜಮಾನ ದಂಪತಿಯಾದ ರಾಜೇಶ್ ಮತ್ತು ಲೀಲಾವತಿ ನಡೆಸಿದರು.

ಜಾಹೀರಾತು

ಭಜನಾ ಮಂಡಳಿಯ ಆಶಯದಂತೆ ಹೊರಗೆ ಊಟ ತಯಾರಿಸದೆ , ಕಾಲೋನಿಯ ಬಂಧುಗಳೇ ತಮ್ಮ ತಮ್ಮ ಮನೆಯಲ್ಲಿ ತಾವೇ ತಯಾರಿಸಿದ ಸಿಹಿ ಊಟವನ್ನೇ ಅನ್ನ ಪ್ರಸಾದವನ್ನಾಗಿ ಭಜನಾ ಮಂಡಳಿಯ ಸರ್ವ ಸದಸ್ಯರು ಸ್ವೀಕರಿಸುವುದರೊಂದಿಗೆ ನಡೆ – ನುಡಿ ಪರಿಶುದ್ದತೆಯನ್ನು ಸಾದರ ಪಡಿಸಿದರು. ಸಮಾಜದ ಎಲ್ಲ ವರ್ಗದ ಜನರೂ ಈ ತಂಡದಲ್ಲಿದ್ದುದು ಗಮನಾರ್ಹ.

ಮನೆಯಂಗಳದಲ್ಲಿ ಭಜನೆ ಎಂಬ ಈ ಕಾರ್ಯಕ್ರಮದ ಕೊನೆಗೆ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಉಪ್ಪಿನಂಗಡಿ ಶ್ರೀ ರಾಮ ಶಾಲಾ ಸಂಚಾಲಕ ಹಾಗೂ ಶಾಂತಿನಗರ ಶ್ರೀ ಮಹಾವಿಷ್ಣು ದೇವಾಲಯದ ಆಡಳಿತ ಮಂಡಳಿ ಮೊಕ್ತೇಸರ ಯು ಜಿ ಪರಕೀಯರ ಆಕ್ರಮಣದ ಬಳಿಕ ದಾಸ್ಯಕ್ಕೆ ಸಿಲುಕಿದ ನಮ್ಮ ದೇಶದ ಜನತೆ ಹುಟ್ಟಿನಿಂದ ಜಾತಿ ಎನ್ನಲು ಪ್ರಾರಂಭಿಸಿತು. ಎಂದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರೇರಣೆಯನ್ನು ಪಡೆದ ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಭಜನಾ ಮಂಡಳಿಯು ದೇವಾಲಯದಲ್ಲಿ ನಡೆಯುವ ಭಜನೆಯನ್ನು ನಮ್ಮ ನಮ್ಮ ಮನೆಯಂಗಳದಲ್ಲಿ ನಡೆಸುವ ಮೂಲಕ ದೇವರ ಸಾನಿಧ್ಯ ಜಾತಿಯಾಧರಿತವಾಗಿರುವುದಲ್ಲ ಬದಲಾಗಿ ಅದು ಎಲ್ಲರ ಮನೆ ಮನ ಹೃದಯದಲ್ಲಿ ನೆಲೆಸಿದೆ ಎನ್ನುವುದನ್ನು ಸಾಕ್ಷೀಕರಿಸಿದ್ದಾರೆ ಎಂದರು.

ಭಜನಾ ಮಂಡಳಿಯ ಮಾಜಿ ಅಧ್ಯಕ್ಷ ಕೆ ಜಗದೀಶ್ ಶೆಟ್ಟಿ , ಅಂಬೇಡ್ಕರ್ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾದ ಶೀನಾ ನೆಡ್ಚಿಲ್ ಮಾತನಾಡಿದರು. ಕಾಳಿಕಾಂಬಾ ಭಜನಾ ಮಂಡಳಿಯ ಅಧ್ಯಕ್ಷ ಕೆ ಸುಧಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿಗಳಾದ ಎನ್ ರಾಘವೇಂದ್ರ ನಾಯಕ್,  ರವಿಕಿರಣ್ ಭಟ್, ಅನಿಲ್ ಕುಮಾರ್, ಸಂದೇಶ್ ನಟ್ಟಿಬೈಲ್ , ಗಣ್ಯರಾದ ಮಹಾಲಿಂಗ, ಶರತ್ ಕೋಟೆ, ಚಂದ್ರಶೇಖರ್, ಹರೀಶ್ ನಾಯಕ್,   ಐ ಪುರುಷೋತ್ತಮ ನಾಯಕ್,  ಸುಂದರ ಆದರ್ಶ ನಗರ, ಆದರ್ಶ ಶೆಟ್ಟಿ, ಅನೂಪ್ ಸಿಂಗ್ ಮೊದಲಾದ ಹಲವಾರು ಮಂದಿ ಭಾಗವಹಿಸಿದ್ದರು.

ಜಾಹೀರಾತು

click www.bantwalnews.com to read more news

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ