ಫಖ್ರುದ್ದೀನ್ ಜುಮ್ಮಾ ಮಸ್ಜಿದ್ ಮಾವಿನಕಟ್ಟೆ ಅಜಿಲಮೊಗರುವಿನಲ್ಲಿ ಎಸ್.ವೈ.ಎಸ್, ಎಸ್.ಎಸ್.ಎಫ್. ಮಾವಿನಕಟ್ಟೆ ಆಶ್ರಯದಲ್ಲಿ ತಾಜುಲ್ ಉಲಮಾ ಅನುಸ್ಮರಣೆ 11ರಂದು ಸಂಜೆ 6 ಕ್ಕೆ ಮಾವಿನಕಟ್ಟೆ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.
www.bantwalnews.com report
ಸುದ್ದಿಗೋಷ್ಠಿಯಲ್ಲಿ ಈ ವಿವರ ನೀಡಿದ ಎಸ್.ಎಸ್.ಎಫ್. ಬಂಟ್ವಾಳ ಡಿವಿಜನ್ ಅಧ್ಯಕ್ಷ ಅಬ್ದುಲ್ ರಶೀದ್ ವಗ್ಗ, ಈ ಸಂದರ್ಭ ಮುಖ್ಯ ಭಾಷಣಕಾರರಾಗಿ ಸಿರಾಜುಲ್ ಹುದಾ ಕುಟ್ಯಾಡಿಯ ಮೌಲಾನಾ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಸಯ್ಯಿದ್ ಹಂಝ ತಂಞಳ್ ಕರ್ಪಾಡಿ ಆಶೀರ್ವಚನ ನೀಡಲಿದ್ದು, ಸಭೆಯ ಅಧ್ಯಕ್ಷತೆಯನ್ನು ಮಾಜಿ ಖತೀಬರಾದ ಅಬ್ದುಲ್ ಹಮೀದ್ ಮದನಿ. ಕಾರ್ಯಕ್ರಮವನ್ನು ಎಎಂಇಸಿ ಮಾಡಡ್ಕ ಮ್ಯಾನೇಜರ್ ಕೆ.ಎ.ಅಶ್ರಫ್ ಸಖಾಫಿ ಮಾಡಾವು ಉದ್ಘಾಟಿಸುವರು. ಖಾದಿಸಿಯ ಇಸ್ಲಾಮಿಕ್ ಮತ್ತು ವಿಜ್ಞಾನ ಅಕಾಡಮಿ ಕಾವಳಕಟ್ಟೆಯ ಪ್ರಾಂಶುಪಾಲ ಹಾಫಿಲ್ ಸುಫಿಯಾನ್ ಸಖಾಫಿ ಮತ್ತು ಮಲ್ಲೂರು ಅಲ್ ಅಸಾಸ್ ಅಧ್ಯಕ್ಷ ಎಂಪಿಎಂ ಅಶ್ರಫ್ ಸಅದಿ ಭಾಷಣಗೈಯುವರು. ಈ ಸಂದರ್ಭ ಮಾಜಿ ಖತೀಬ ಅಬ್ದುಲ್ ಹಮೀದ್ ಮದನಿ ಗೌರವಾರ್ಪಣೆ ನಡೆಯಲಿದೆ ಕಾರ್ಯಕ್ರಮದ ಕೊನೆಯಲ್ಲಿ ತಬರ್ರುಕ್ ವಿತರಣೆ ನಡೆಯಲಿದ್ದು, ಸ್ತ್ರೀಯರಿಗೆ ಪ್ರತ್ಯೇಕ ಸ್ಥಳ ಏರ್ಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಎಫ್ ಜೆಎಂ ಮಾವಿನಕಟ್ಟೆ ಖತೀಬ ಅಬ್ದುಲ್ ಜಬ್ಬಾರ್ ಸಅದಿ, ಎಸ್ ಎಸ್‌ಎಫ್ ಮಾವಿನಕಟ್ಟೆ ಅಧ್ಯಕ್ಷ ಮಹಮ್ಮದ್ ಶರೀಫ್, ಎಸ್ ವೈಎಸ್ ಮಾವಿನಕಟ್ಟೆ ಅಧ್ಯಕ್ಷ ಹುಸೈನ್ ಎಚ್, ಮಾವಿನಕಟ್ಟೆ ಸ್ವಲಾತ್ ಕಮಿಟಿ ಅಧ್ಯಕ್ಷ ಅಬ್ಬಾಸ್ ಕೆ, ಎಫ್ ಜೆಎಂ ಮಾವಿನಕಟ್ಟೆ ಅಧ್ಯಕ್ಷ ಅಬ್ಬಾಸ್ ಅಂತಾರ ಉಪಸ್ಥಿತರಿದ್ದರು.
Rs.5 ಲಕ್ಷ ಬಡ್ಡಿರಹಿತ ಬೆಳೆ ಸಾಲ | ಅಡಿಕೆಯ ಪರ್ಯಾಯ ಬಳಕೆ ಸಂಶೋಧನೆಗೆ ಒತ್ತು | ‘ಅಡಿಕೆ ಜೈವಿಕ ಆರ್ಥಿಕತೆ…