ಬಂಟ್ವಾಳ ತಾಲೂಕಿನ ನೀರಪಾದೆ ಕಾಂದಿಲ ಎಂಬಲ್ಲಿ ಪಿಕಪ್ ವಾಹನದಲ್ಲಿ ದನ ಸಾಗಾಟ ಮಾಡುವುದನ್ನು ಸ್ಥಳೀಯ ಯುವಕರು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಇದು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದು ಆರೋಪಿಸಿ, ಅಡ್ಯಾರಿನ ಸಾದಿಕ್ (31), ನೀರುಮಾರ್ಗ ನೇರ್ಲಪದವಿನ ಸಂಜಯ್ ಡಿಸೋಜ(27) ಎಂಬವರನ್ನು ಸ್ಥಳೀಯರು ಬುಧವಾರ ಬೆಳಗ್ಗೆ ಹಿಡಿದು ಒಪ್ಪಿಸಿದರು.
ಈ ಸಂಬಂಧ ಎರಡು ಕರುಗಳ ಸಹಿತ ನಾಲ್ಕು ಜಾನವಾರುಗಳು ಹಾಗೂ ಸಾಗಾಟಕ್ಕೆ ಬಳಸಲಾದ ಪಿಕಪ್ ನ್ನು ಪೊಲೀಸರು ವಶಕ್ಕೆ ಪಡೆದುಕೊಂಡು, ದನ ಅಕ್ರಮ ಸಾಗಾಟದ ಪ್ರಕರಣ ದಾಖಲಿಸಿದರು.
ಘಟನೆಯಿಂದ ಸ್ಥಳದಲ್ಲಿ ಕೆಲ ಹೊತ್ತುಗಳ ಕಾಲ ಗೊಂದಲದ ವಾತವರಣ ನಿರ್ಮಾಣವಾಗಿತ್ತು. ಈ ಸಂಬಂಧ ಎರಡೂ ಕಡೆ ಪ್ರಕರಣ ದಾಖಲಾಗಿದೆ. ತಮ್ಮನ್ನು ಥಳಿಸಲಾಗಿದೆ ಎಂದು ಸಾದಿಕ್ ಮತ್ತು ಸಂಜಯ್ ಪ್ರತಿದೂರು ದಾಖಲಿಸಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…