ಜಿಲ್ಲಾ ಸುದ್ದಿ

ಚಿಮೇನಿ ಓಪನ್ ಜೈಲಿನಲ್ಲಿ ಗೋಶಾಲೆ ಉದ್ಘಾಟನೆ

  • ರಾಮಚಂದ್ರಾಪುರ ಮಠದಿಂದ 20 ಗೋವುಗಳ ಕೊಡುಗೆ
ಶ್ರೀರಾಮಚಂದ್ರಾಪುರ ಮಠದಕಾಮದುಘಾ ಯೋಜನೆಯ ಗೋಸಂರಕ್ಷಣ ಅಭಿಯಾನದ ಪರಿಣಾಮವಾಗಿ ಕಾಸರಗೋಡು ಜಿಲ್ಲೆಯ ಚಿಮೇನಿ ಓಪನ್ ಜೈಲಿನಲ್ಲಿ ದೇಸೀ ಗೋಶಾಲೆ ಆರಂಭವಾಗಿದೆ.


ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಬುಧವಾರ ಈ ಗೋಶಾಲೆಗೆ ತೆರಳಿ ೪ ಕಾಸರಗೋಡುಗಿಡ್ಡ ತಳಿಗಳನ್ನು ಜೈಲಿನ ಸುಪರಿಂಟೆಂಡೆಂಟ್ ಸುರೇಶ್‌ಎ.ಜಿ. ಅವರಿಗೆ ನೀಡಿ ಉದ್ಘಾಟಿಸಿದರು.  ಬಳಿಕ ಜೈಲಿನ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದ ರಾಘವೇಶ್ವರ ಶ್ರೀಗಳು ಇದು ಕಾರಾಗೃಹವಲ್ಲ. ಕೈದಿಗಳ ಮನಃಪರಿವರ್ತನಾ ಕೇಂದ್ರವಾಗಿದೆ. ಕೈದಿಗಳಿಗೆ ಗುರುಕುಲವಾಗಿದೆ .ಗೋವನ್ನು ನಾವು ಸಾಕಿದರೆ ಗೋವು ನಮ್ಮನ್ನು ಸಾಕುತ್ತದೆ ಎಂದು ಹಾರೈಸಿದರು.
ಈ ಜೈಲಿನಲ್ಲಿ ಅಧಿಕಾರಿಗಳು 100 ಗೋವುಗಳಿರುವ ಗೋಶಾಲೆಯನ್ನು ನಿರ್ಮಿಸಲುಯೋಜನೆ ರೂಪಿಸಿದ್ದಾರೆ. ಆ ಸಂದರ್ಭ 100 ಗೋವುಗಳನ್ನು ಮಠದಿಂದ ಒದಗಿಸಲಾಗುವುದು ಎಂದು ಶ್ರೀಗಳು ತಿಳಿಸಿದರು.
ಕಾಮದುಘಾ ಕಾರ್ಯದರ್ಶಿ ಡಾ| ವೈ.ವಿ.ಕೃಷ್ಣಮೂರ್ತಿ ಅವರು ಮಾತನಾಡಿ ಈ ಗೋಶಾಲೆಯಲ್ಲಿ 20 ಗೋವುಗಳಿಗೆ ಅವಕಾಶವಿದೆ. ಇಂದು ಮಠದಿಂದ ಸಾಂಕೇತಿವಾಗಿ ೪ ಗೋವುಗಳನ್ನು  ನೀಡಲಾಗುತ್ತಿದೆ. ಉಳಿದ 16 ಗೋವುಗಳನ್ನು ಕೆಲವೇ ದಿನಗಳಲ್ಲಿ ಒದಗಿಸಲಾಗುವುದುಎಂದು ತಿಳಿಸಿದರು.

ಅಧಿಕಾರಿಗಳಾದ ಜಗದೀಶನ್, ಪೋತಲಖಂಡ ಆನಂದಾಶ್ರಮದ ಶ್ರೀ ಕೃಷ್ಣಾನಂದ ಸ್ವಾಮೀಜಿ, ಕಾಮದುಘಾತಂಡದ ಸದಸ್ಯರು ಉಪಸ್ಥಿತರಿದ್ದರು.
ಹಿನ್ನೆಲೆ :
ಕ್ರಿಮಿನಲ್‌ಅಪರಾಧವೆಸಗಿ, ದೀರ್ಘಜೈಲುವಾಸ ಅನುಭವಿಸಿ, ಮನಃಪರಿವರ್ತನೆಗಾಗಿ ಕೈದಿಗಳು ಈ ಓಪನ್ ಜೈಲಿನಲ್ಲಿದ್ದಾರೆ, ಒಟ್ಟು ೩೦೦ ಎಕರೆ ಜಾಗವಿದ್ದು ಸುಮಾರು ೧೦ ಎಕರೆ ಭೂಮಿಯಲ್ಲಿ ಗೋಆಧಾರಿತ ಕೃಷಿ ಚಟುವಟಿಕೆ ನಡೆಸಲಿದ್ದಾರೆ. ಇಲ್ಲಿರುವ ಕೈದಿಗಳು ತರಕಾರಿ ಇನ್ನಿತರ ಕೃಷ್ಯುತ್ಪನ್ನಗಳನ್ನು ಬೆಳೆಸಲಿದ್ದಾರೆ. ಕೃಷಿಗೆ ಪೂರಕವಾಗಿ, ಶ್ರೀರಾಮಚಂದ್ರಾಪುರ ಮಠದಗೋಕ್ರಾಂತಿಯಿಂದ ಪ್ರಭಾವಿತಗೊಂಡ ಅದಿಕಾರಿಗಳು ಇಲ್ಲಿ ಗೋಶಾಲೆ ನಿರ್ಮಿಸಲು ಸಿದ್ಧರಾದರು. ಅದರಂತೆ ಕೈದಿಗಳೇ ಇಲ್ಲಿ ಗೋಶಾಲೆ ನಿರ್ಮಿಸಿದ್ದಾರೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ