ಪರಿಸರವು ನಮಗೆ ಏನೆಲ್ಲಾ ಕೊಡುತ್ತದೆಯೋ, ಅದರ ಅರ್ಧದಷ್ಟಾದರೂ ನಾವು ಪರಿಸರದೊಡನೆ ಬೆರೆತು ಬಾಳಬೇಕು. ಅದನ್ನು ಆಸ್ವಾದಿಸಬೇಕು. ಇಂದಿನ ಮಕ್ಕಳು ಹೆಚ್ಚಾಗಿ ಔದ್ಯೋಗಿಕ ವಿದ್ಯಾಭ್ಯಾಸದತ್ತ ಮುಖ ಮಾಡುವ ಕಾರಣ, ಕೃಷಿ ಚಟುವಟಿಕೆ, ಮಣ್ಣಿನ ಸೊಗಡು ಅವರು ತಿಳಿಯುತ್ತಿಲ್ಲ. ಒಬ್ಬ ಕೃಷಿಕ ಪರಿಸರದಲ್ಲಿಯೇ ತನ್ನ ಬದುಕನ್ನು ಕಂಡುಕೊಳ್ಳುತ್ತಾನೆ ಎಂದು ಪ್ರಗತಿಪರ ಕೃಷಿಕ, ಸಮಾಜ ಸೇವಕ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ಹೇಳಿದರು.
www.bantwalnews.com report
ಬಂಟ್ವಾಳದ ವಿದ್ಯಾಗಿರಿಯ ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಅವರ ಕೃಷಿ ಕುರಿತ ಚಟುವಟಿಕೆಗಳ ವೀಕ್ಷಣೆಗಾಗಿ ಅವರ ತೋಟಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹೇಳಿದರು.
ವಿದ್ಯಾರ್ಥಿಗಳು ಅಲ್ಲಿನ ನೀರಾವರಿ ವ್ಯವಸ್ಥೆ, ಹೈನುಗಾರಿಕೆ, ವಿದ್ಯುತ್ ಉತ್ಪಾದನಾ ರೀತಿಯನ್ನು ವೀಕ್ಷಿಸಿದರು. ಶಾಲಾ ಆಡಳಿತ ಮಂಡಳಿ ಸದಸ್ಯ , ಪತ್ರಕರ್ತ ಹರೀಶ್ ಮಾಂಬಾಡಿ ಜೊತೆಗೂಡಿದರು. ದೈಹಿಕ ಶಿಕ್ಷಕ ಜಗನ್ನಾಥ್ ಅಡಪ, ಶಿಕ್ಷಕಿಯರಾದ ಸುರೇಖಾ ರೈ, ಉಷಾ ಬಿ, ರಮಿತಾ ವಿದ್ಯಾರ್ಥಿಗಳಿಗೆ ಸಹಕರಿಸಿದರು.