ವಿಟ್ಲ

ಯುವಶಕ್ತಿ ಜಾಗೃತಿಗೆ ತುಳುವೆರೆ ತುಲಿಪು, ತುಳನಾಡ್ದ ಜಾತ್ರೆ

https://bantwalnews.com report

ನೆಲ, ಜಲ ಉಳಿಯದಿದ್ದರೆ ಸಂಸ್ಕೃತಿ ಉಳಿಸಲು ಅಸಾಧ್ಯ. ತುಲಿಪು ಎಂದರೆ ಹರಿವು. ಇಂದು ಯುವಜನತೆಯತ್ತ ಸಂಸ್ಕೃತಿಯ ಹರಿವು ಆಗಬೇಕು. ಹೀಗಾಗಿ ಈ ಬಾರಿಯ ತುಳುನಾಡ ಜಾತ್ರೆ  ಯುವಜನರಿಗಾಗಿ, ಯುವಶಕ್ತಿ ಜಾಗೃತಿಗಾಗಿ, ಆಧ್ಯಾತ್ಮಿಕ ಸಾಧನೆಗೆ.

ಜಾಹೀರಾತು

ಹೀಗೆಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‌ನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಒಡಿಯೂರು ಶ್ರೀ ಗುರುದೇವಜ್ಞಾನಮಂದಿರದಲ್ಲಿ ಫೆ.5 ಮತ್ತು 6 ರಂದು ನಡೆಯಲಿರುವ ಯುವ ಸಮುದಾಯದ ತುಳುವೆರೆ ತುಳಿಪು ಹಾಗೂ ಒಡಿಯೂರು ರಥೋತ್ಸವ- ತುಳುನಾಡ ಜಾತ್ರೆ ಕಾರ್ಯಕ್ರಮದ ಕುರಿತು ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ಕಾರ್ಯಕ್ರಮಗಳ ನಿರ್ವಹಣೆಗೆ 20 ಸಮಿತಿಗಳನ್ನು ರಚಿಸಲಾಗಿದೆ. ಪ್ರತಿಷ್ಠಾ ಮಹೋತ್ಸವದಲ್ಲಿ ಸುಮಾರು 50 ಸಾವಿರ ಭಕ್ತರು ಸೇರುವ ನಿರೀಕ್ಷೆ ಇದೆ. ವಿವಿಧ ಸಂಘ ಸಂಸ್ಥೆಗಳ 3 ಸಾವಿರ ಕಾರ್ಯಕರ್ತರು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಲಿದ್ದಾರೆ. ರಥಯಾತ್ರೆ ಸುಮಾರು 12 ಕಿಮೀ ಚಲಿಸಲಿದ್ದು, ಎರಡು ಗ್ರಾಮಗಳಲ್ಲಿ ಸಂಪರ್ಕಿಸುತ್ತದೆ

ಜಾಹೀರಾತು

ತುಳುನಾಡಿನ ನೆಲ – ಜಲ ಉಳಿಯದಿದ್ದರೆ ನಮ್ಮ ಸಂಸ್ಕೃತಿ ಉಳಿಯಲು ಸಾಧ್ಯವಿಲ್ಲ. ಸಂಸ್ಕೃತಿಯ ಉಳಿವಿಗೆ ಯುವ ಶಕ್ತಿಯ ಬೆಂಬಲ ಅಗತ್ಯವಿದೆ. ತುಳುವರಿಗೆ ತುಳುವಿನ ಬಗ್ಗೆ ಉದಾಸೀನತೆ ಹಾಗೂ ಕೀಳರಿಮೆ ಇದ್ದು, ಅದನ್ನು ಬಿಟ್ಟು ಎದೆಯೊಡ್ಡಿ ನಿಲ್ಲುವ ಕಾರ್ಯವಾಗಬೇಕು. ಸಂಸ್ಕೃತಿ – ಧರ್ಮ – ಬದುಕು ಚಲನಶೀಲವಾಗಿದ್ದಾಗ ಒಳಿತಾಗುತ್ತದೆ. ಯುವ ಶಕ್ತಿಗೆ ಭಾಷೆ ಸಂಸ್ಕೃತಿಯ ಬಗ್ಗೆ ಆಸಕ್ತಿ ಮೂಡಿಸುವ ಕಾರ್ಯವಾಗಬೇಕು. ಶಿಸ್ತು, ಸಂಯಮವನ್ನು ಕಾಪಾಡಿಕೊಂಡು ಸ್ವಚ್ಛತೆಯ ಕಡೆಗೆ ಗಮನ ನೀಡೂವ ಕಾರ್ಯಕ್ಕೆ ಒತ್ತು ನೀಡಬೇಕು. ಶಾಲೆಗಳಲ್ಲಿ ತುಳುವಿನ ಜಾಗೃತಿ ಮಾಡಬೇಕಾದ ಅನಿವಾರ್ಯತೆ ಇದೆ. ಫೆ.5ರಂದು ತುಳುವೆರೆ ತುಳಿಪು ಕಾರ್ಯಕ್ರಮ ನಡೆಯಲಿದ್ದು, ತುಳು ನಡಕೆ ಬೊಕ್ಕ ಜವನೆರ್ ಬಗ್ಗೆ ವಿಚಾರಗೋಷ್ಠಿ, ತುಳು ಸಾಧಕರಿಗೆ ತುಳು ಸಿರಿ ಪ್ರಶಸ್ತಿ ಪ್ರಧಾನ, ಫೆ.೬ರಂದು ನಿವೃತ್ತ ಯೋಧರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಒಡಿಯೂರ್‍ದ ತುಳುಕೂಟದ ಪ್ರಧಾನ ಸಂಚಾಲಕ ಡಾ. ವಸಂತಕುಮಾರ ಪೆರ್ಲ ಮಾತನಾಡಿ ಗ್ರಾಮೀಣ ಭಾಗದಲ್ಲಿನ ಜನರು ಕೃಷಿ ಸಂಸ್ಕೃತಿಯನ್ನು ಬಿಟ್ಟುಹೋಗಿ ಭೂಮಿಯನ್ನು ಹಡೀಲು ಬೀಳಿಸುತ್ತಿದ್ದಾರೆ. ಯುವಕರು ಅಲ್ಪ ಸಂಪಾದನೆಯ ಆಕರ್ಷಣೆಗೆ ಒಳಗಾಗದೆ ಕೃಷಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಂತಾಗಬೇಕೆಂದು ತಿಳಿಸಿದರು.

ಬಾಲಚಂದ್ರ ಎಂ. ಬೆಂಗಳೂರು, ಸ್ವಾಗತ ಸಮಿತಿಯ ಸಂಚಾಲಕ ಜಯಂತ್ ಜೆ ಕೋಟ್ಯಾನ್, ಆರ್ಥಿಕ ಸಮಿತಿ ಸಂಚಾಲಕ ಎ. ಅಶೋಕ್ ಕುಮಾರ್ ಬಿಜೈ, ವೇದಿಕೆ ಮತ್ತು ಸಭೆ ಸಂತೋಷ್ ಭಂಡಾರಿ, ಹಸಿರುವಾಣಿ ಹೊರೆಕಾಣಿಕೆ ಸಂಚಾಲಕ ದೇವಿಪ್ರಸಾದ್ ಶೆಟ್ಟಿ ಅನಂತಾಡಿ, ಮಾಹಿತಿ ಕೇಂದ್ರದ ಸಂಚಾಲಕ ಬಾಲಕೃಷ್ಣ ಮೇಲಂಟ ಅನೆಯಾಲಮಂಟಮೆ, ಕ್ಷೇತ್ರದ ಕಾರ್ಯನಿರ್ವಾಹಕ ಉಗ್ಗಪ್ಪ ಶೆಟ್ಟಿ ಕೊಂಬಿಲ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಸರ್ವಾಣಿ ಪಿ ಶೆಟ್ಟಿ ಒಡಿಯೂರ್‍ದ ತುಳುಕೂಟದ ಸಂಚಾಲಕ ಟಿ. ತಾರಾನಾಥ ಕೊಟ್ಟಾರಿ, ಸ್ವಚ್ಛತೆಯ ಸಂಚಾಲಕ ಮೇಲ್ವಿಚಾರಕ ಸದಾಶಿವ ಅಳಿಕೆ, ಪ್ರಚಾರ ಸಮಿತಿ ಸಂಚಾಲಕ ಅಜಿತ್‌ನಾಥ್ ಶೆಟ್ಟಿ ಒಡಿಯೂರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ