www.bantwalnews.com report
ಕಂಬಳ ಜಾನಪದೀಯ ಕ್ರೀಡೆಯಾಗಿದ್ದು, ಕೋರ್ಟಿನಲ್ಲಿ ಪರವಾದ ತೀರ್ಪು ಬರಲಿ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶಯ ವ್ಯಕ್ತಪಡಿಸಿದ್ದಾರೆ.
ಒಡಿಯೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಲ್ಲಿಕಟ್ಟು ಎಂಬ ಕಾರ್ಯಕ್ರಮದಲ್ಲಿ ಪ್ರಾಣ ಹೋಗುತ್ತದೆ. ಆದರೆ ಕಂಬಳ ಹಾಗಲ್ಲ, ಅದೊಂದು ಜಾನಪದೀಯ ಕ್ರೀಡೆ. ಹಿಂಸೆರಹಿತವಾದ ಕಂಬಳ ನಡೆಯಬೇಕು. ಕಂಬಳ ಕೃಷಿಕನಲ್ಲಿ ಉತ್ಸಾಹ ಮೂಡಿಸುತ್ತದೆ. ನಮ್ಮ ಸಂಸ್ಕೃತಿಯ ಭಾಗವಾಗಿ ಕಂಬಳ ಆಚರಣೆ ನಡೆಯುತ್ತಿದೆ. ನಂಬಿಕೆಗೆ ಧಕ್ಕೆ ಬಾರದಂತೆ ಕಂಬಳ ಆಚರಣೆಯಾಗುವಂತಾಗಬೇಕು. ಹಿಂಸಾರಹಿತ ಕಂಬಳ ನಮ್ಮವರು ಮಾಡಿ ಯಶಸ್ವಿಯಾಗಿದ್ದಾರೆ. ಜನಬಲ, ಪ್ರೋತ್ಸಾಹ ಕಂಬಳಕ್ಕೆ ಬೇಕು. ಕೋರ್ಟಿನಲ್ಲಿಯೂ ಕಂಬಳದ ಪರವಾಗಿಯೇ ತೀರ್ಪು ಬರಲಿ ಎಂದು ಹೇಳಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…