ದಕ್ಷಿಣ ಕನ್ನಡ ಜಿಲ್ಲಾ ಎಸ್.ಕೆ.ಎಸ್.ಎಸ್.ಎಫ್ ವತಿಯಿಂದ ಜ.26 ರಂದು ಉಪ್ಪಿನಂಗಡಿಯಲ್ಲಿ ನಡೆಯಲಿರುವ ಮಾನವ ಸರಪಳಿ ಕಾರ್ಯಕ್ರಮವನ್ನು ಯಶಸ್ಸಿಗೊಳಿಸಬೇಕೆಂದು ವಿಟ್ಲ ವಲಯ ಎಸ್.ಕೆ.ಎಸ್.ಎಸ್.ಎಫ್ ಪ್ರಧಾನ ಕಾರ್ಯದರ್ಶಿ ಸಿ.ಎಚ್ ಇಬ್ರಾಹಿಂ ಮುಸ್ಲಿಯಾರ್ ಕರೆ ನೀಡಿದ್ದಾರೆ.
ವಿಟ್ಲದ ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪ ಎಂಬ ಧ್ಯೇಯ ವಾಕ್ಯದಡಿ ಪ್ರತಿವರ್ಷ ಜ.26 ಪ್ರಜಾಪ್ರಭುತ್ವ ದಿನವನ್ನು ಮಾನವ ಸರಪಳಿ ಎಂಬ ವಿಶಿಷ್ಟ ಕಾರ್ಯಕ್ರಮದ ಮೂಲಕ ಎಸ್.ಕೆ.ಎಸ್.ಎಸ್.ಎಫ್ ವಿವಿಧ ಕೇಂದ್ರಗಳಲ್ಲಿ ಆಚರಿಸಿಕೊಂಡು ಬರುತ್ತಿದೆ. ಈ ಕಾರ್ಯಕ್ರಮವನ್ನು ಈ ಬಾರಿ ಉಪ್ಪಿನಂಗಡಿಯಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಎಲ್ಲಾರೂ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಹೇಳಿದರು.
ಎಸ್‌ವೈಎಸ್ ಕೇಂದ್ರ ಸಮಿತಿಯ ಪಿ.ಎಂ ಅಬ್ದುಲ್ ಹಕೀಂ, ಎಸ್.ಕೆ.ಎಸ್.ಎಸ್.ಎಫ್ ವಿಟ್ಲ ವಲಯಾಧ್ಯಕ್ಷ ಅಶ್ರಫ್ ಕಬಕ, ಶಮೀರ್ ಪಳಿಕೆ, ವಿ.ಎಸ್ ಇಬ್ರಾಹಿಂ ಒಕ್ಕೆತ್ತೂರು, ವಿಟ್ಲ ಕ್ಲಸ್ಟರ್ ಅಧ್ಯಕ್ಷ ಇಬ್ರಾಹಿಂ ಝೈನಿ ಮೊದಲಾದವರು ಉಪಸ್ಥಿತರಿದ್ದರು.
ಕಲ್ಲಡ್ಕ ವಲಯದ 7 ಒಕ್ಕೂಟಗಳ ಪದಗ್ರಹಣ ಸಮಾರಂಭ | ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಕಾರ್ಯಕ್ರಮ (more…)