ಕನ್ಯಾನ ಶ್ರೀ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮಕ್ಕಳ ಲೋಕ ನೇತೃತ್ವದಲ್ಲಿ ತಾಲೂಕು ಮಟ್ಟದ ವಿದ್ಯಾರ್ಥಿ ಕವಿಗೋಷ್ಠಿ ಭಾನುವಾರ ನಡೆಯಿತು.
www.bantwalnews.com report
ಸ್ವರಚಿತ ಕವನ ವಾಚಿಸುವ ಮೂಲಕ ವಿಠಲ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಶಿವಪ್ರಸಾದ್ ಉದ್ಘಾಟಿಸಿದರು.
ಕಾಸರಗೋಡು ಬಿಇಎಂ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಮೇಘಾ ಶಿವರಾಜ್ ಬರೆದ ಒಂದು ಕ್ಷಣ ಯೋಚಿಸಿ ಪುಸ್ತಕವನ್ನು ಡಾ.ವಿಶ್ವೇಶ್ವರ ಭಟ್ ಈ ಸಂದರ್ಭ ಬಿಡುಗಡೆಗೊಳಿಸಿದರು.
ಮುಖ್ಯ ಅತಿಥಿಗಳಾಗಿದ್ದ ವಾಣಿವಿಜಯ ಹಿರಿಯ ಪ್ರಾಥಮಿಕ ಶಾಲೆ ದೈಗೋಳಿ ಶಿಕ್ಷಕ ಸೇರಾಜೆ ಶ್ರೀನಿವಾಸ ಭಟ್ ಮಾತನಾಡಿ, ನಿರಂತರ ಸಾಧನೆಗೆ ಹಿರಿಯರ ಮಾರ್ಗದರ್ಶನ ಅಗತ್ಯ ಎಂದರು.
ಮಕ್ಕಳ ಸಾಹಿತ್ಯ ಲೋಕದ ಕಾರ್ಯದರ್ಶಿ ರಾಜಾರಾಮ ವರ್ಮ ವಿಟ್ಲ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಶ್ರೀ ಸರಸ್ವತಿ ವಿದ್ಯಾಲಯದ ಶಾಲಾ ನಾಯಕಿ ಸೋನಲ್ ಅಡಪ್ಪ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಕವಿಗಳಿಗೆ ಗುರು ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ವಿಘ್ನರಾಜ ಭಟ್ ಮತ್ತು ಶಾಲಾ ಸಂಚಾಲಕ ಈಶ್ವರ ಪ್ರಸಾದ್ ಶುಭ ಹಾರೈಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಅಶೋಕ್ ಕುಮಾರ್ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳಾದ ಸನ್ಮಯಾ ಐ.ಕೆ. ಸ್ವಾಗತಿಸಿದರು. ಶ್ರೀಶ ಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಸಿಂಚನಾ ವಂದಿಸಿದರು.
ಕವಿಗೋಷ್ಠಿ
ಹಚ್ಚೇವು ಕನ್ನಡದ ದೀಪ ಎಂಬ ಹಾಡಿನೊಂದಿಗೆ ಕವಿಗೋಷ್ಠಿ ಆರಂಭಗೊಂಡಿತು. ತಾಲೂಕಿನ ವಿವಿಧ ಶಾಲಾವಿದ್ಯಾರ್ಥಿಗಳು ಕವನ ವಾಚನ ಮಾಡಿದರು. ಅಧ್ಯಕ್ಷತೆಯನ್ನು ಶ್ರೀ ಸರಸ್ವತಿ ವಿದ್ಯಾಲಯದ ಏಳನೇ ತರಗತಿ ವಿದ್ಯಾರ್ಥಿನಿ ಅಮೃತವರ್ಷಿಣಿ ಕವನ ವಾಚನ ಮೂಲಕ ಅಧ್ಯಕ್ಷೀಯ ಭಾಷಣ ನೆರವೇರಿಸಿದರು. ಶಾಲಾ ವಿದ್ಯಾರ್ಥಿನಿಯರಾದ ಆಯಿಷತ್ ಶಮ್ನಾ ಸ್ವಾಗತಿಸಿದರು. ಪ್ರೀತಂ ಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಶ್ರಾವ್ಯಾ ವಂದಿಸಿದರು.
ವಿದ್ಯಾರ್ಥಿ ಕವಿಗೋಷ್ಠಿ ಸಮಾರೋಪದಲ್ಲಿ ಶ್ರೀ ಕ್ಷೇತ್ರ ಬಾಳೆಕೋಡಿಯ ಶ್ರೀ ಶಶಿಕಾಂತ ಮಣಿ ಸ್ವಾಮೀಜಿ ಆಶೀರ್ವಚನ ನೀಡಿದರು. ಸಾಹಿತ್ಯವೆಂದರೆ ಬೇಡವಾದುದನ್ನು ದೂರವಾಗಿಸಿ, ಬೇಕಾದುದನ್ನು ಹೆಕ್ಕಿ ಸುಸಂಸ್ಕೃತ ಸಮಾಜ ನಿರ್ಮಿಸುವುದು ಎಂದರು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಅಶೋಕ್ ಕುಮಾರ್ ಕಾಸರಗೋಡು, ಬಂಟ್ವಾಳ ಬಿಆರ್ ಸಿ ನಾರಾಯಣ ಗೌಡ ಅತಿಥಿಗಳಾಗಿದ್ದರು.
ದಿವ್ಯಭಾರತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತ್ಯ ಸೃಷ್ಟಿಯ ವೇದಿಕೆ ಹಳ್ಳಿಗಳಲ್ಲಿ ಸಿದ್ಧವಾಗುತ್ತಿದೆ ಎಂದರು. ಸಮಾರೋಪ ಕಾರ್ಯಕ್ರಮದಲ್ಲಿ ಸರಸ್ವತಿ ವಿದ್ಯಾಲಯ ಮುಖ್ಯೋಪಾಧ್ಯಾಯಿನಿ ಮಧುರಾ ಈಶ್ವರ ಪ್ರಸಾದ್ ಮತ್ತು ಲವೀನಾ ಮೊಂತೇರೋ ಶುಭ ಹಾರೈಸಿದರು.
ಪ್ರಿಯಾಂಕಾ ನಾಯಕ್ ಸ್ವಾಗತಿಸಿದರು. ಯಾಸ್ಮೀನ್ ನಿರೂಪಿಸಿದರು. ಫಾತಿಮಾ ವಂದಿಸಿದರು. ಶೇಖ್ ಮಹಮ್ಮದ್ ಇರ್ಷಾದ್ ನಿರೂಪಿಸಿದರು.