ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಂಟ್ವಾಳ ಆಶ್ರಯದಲ್ಲಿ ಜ. ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ ಇವರ ಸಹಯೋಗದೊಂದಿಗೆ ದಿ. ಸರಸ್ವತಿ ಕೆ. ಪೂಂಜಾ ಮತ್ತು ಕೆ. ಕಾಂತಪ್ಪ ಪೂಂಜಾ ಫರಂಗಿಪೇಟೆ ಸ್ಮರಣಾರ್ಥ ಉಚಿತ ಹೃದಯ ಹಾಗೂ ಕ್ಯಾನ್ಸರ್ ತಪಸಣಾ ಶಿಬಿರ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ನಡೆಯಿತು.
www.bantwalnews.com report
ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಶಿಬಿರ ಉದ್ಘಾಟಿಸಿದರು, ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಎ.ಸಿ.ಭಂಡಾರಿ, ಜ.ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಹೃದಯ ತಜ್ಞ ಡಾ. ಸುಬ್ರಹ್ಮಣ್ಯ ಕೆ., ಕ್ಯಾನ್ಸರ್ ರೋಗ ತಜ್ಞರಾದ ಡಾ. ವಿಶ್ವನಾಥ ಹಾಗೂ ಡಾ. ಜಯರಾಮ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸೇವಾಂಜಲಿಯ ಟ್ರಸ್ಟಿಗಳಾದ ದೇವದಾಸ ಶೆಟಟಿ ಕೊಡ್ಮಾನ್, ಸುಕೇಶ್ ಶೆಟ್ಟಿ ತೇವು, ಸುಕುಮಾರ್ ಎಂ.ಮೋನಪ್ಪ ಹಾಜರಿದ್ದರು. ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ ಶಿಬಿರವನ್ನು ಸಂಯೋಜಿಸಿದರು. 150 ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…