ನಮ್ಮ ಭಾಷೆ

ತುಳು ಲಿಪಿ ಎಂದರೆ ಯಾಕಷ್ಟು ಕೀಳರಿಮೆ?

 

ಲಿಪಿ ಇದ್ದಾಗಲೂ ಕೆಲ ವಿದ್ವಾಂಸರು ತುಳುವಿಗೆ ಲಿಪಿಯ ಅಗತ್ಯವೇ ಇಲ್ಲ ಎಂದು ವಾದಿಸುತ್ತಾರೆ. ಇದು ಸರಿಯೇ?

  • ಬಿ.ತಮ್ಮಯ್ಯ

www.bantwalnews.com ಅಂಕಣನಮ್ಮ ಭಾಷೆ

ಒಂದು ಭಾಷೆಗೆ ಒಂದು ಸಂಸ್ಕೃತಿ ಇದೆ. ಆ ಸಂಸ್ಕೃತಿಯನ್ನು ಹೇಳುವುದಕ್ಕೆ ಆ ಭಾಷೆಯಲ್ಲದೆ ಬೇರೆ ಭಾಷೆ ಸಮರ್ಥವಾಗಲಾರದು. ಒಂದು ಭಾಷೆಗೆ ಅದರದ್ದೇ ಆದ ಲಿಪಿ ಇರಬೇಕು. ಇದ್ದರೆ ಚೆನ್ನ.

ಲಿಪಿ ಇಲ್ಲದ ಭಾಷೆಗಳು ಅನೇಕ ವೆ. ಅವೆಲ್ಲ ಬೇರೆ ಭಾಷೆಯ ಲಿಪಿಯನ್ನು ಬಳಸಿ ಸಾಹಿತ್ಯ ರಚನೆ ಮಾಡುತ್ತವೆ.ಒಂದು ಭಾಷೆಗೆ ಲಿಪಿಯೂ ಇದ್ದರೆ ಅದು ಪರಿಪೂರ್ಣ ಭಾಷೆ ಆಗುತ್ತದೆ. ಅಂಥಹ ಪರಿಪೂರ್ಣ ಭಾಷೆ ತುಳು. ಅದಕ್ಕೆ ಲಿಪಿಯೂ ಇದೆ.

ಅದರದ್ದೇ ಆದ ಸಂಸ್ಕೃತಿಯೂ ಇದೆ.

ಭೂತಾರಾಧನೆಯ ವಿವರಗಳನ್ನಾಗಲೀ, ಮದು ಹೇಳುವದನ್ನಾಗಲಿ ಬೇರೆ ಭಾಷೆಯಲ್ಲಿ ಹೇಳಲು ಸಾಧ್ಯವಿಲ್ಲ. ಇದ್ದರೂ ಅದು ಪರಿಣಾಮಕಾರಿಯಾಗದು. ಲಿಪಿ ಭಾಷೆಗೆಎ ತಂದೆ ಇದ್ದ ಹಾಗೆ. ಅದು ಭಾಷೆಯ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಭಾಷೆಗೆ ಲಿಪಿ ಅಗತ್ಯ ಇಲ್ಲ ಎಂಬುದು ಮಗುವಿಗೆ ತಂದೆ ಅಗತ್ಯ ಇಲ್ಲ ಎಂದ ಹಾಗೆ.

ಹಾಗಂತ ಎಲ್ಲರಿಗೂ ತಂದೆ ಇರಲು ಸಾಧ್ಯವೇ, ಕೆಲವರಿಗೆ ತಂದೆ ಇಲ್ಲ ಎಂದು ಇದ್ದ ತಂದೆಗಳನ್ನು ನಾಶ ಮಾಡುವುದು ಸರಿಯೇ ಇದನ್ನು ನಾವು ಚಿಂತಿಸಬೇಕಿದೆ.

ಜಗತ್ತಿನ ದಿನ ಪ್ರಸಿದ್ಧ ಭಾಷೆ ಇಂಗ್ಲೀಷ್ ಗೆ ಸ್ವಂತ ಲಿಪಿ ಇಲ್ಲ. ಅದನ್ನು ರೋಮನ್ ಲಿಪಿಯಲ್ಲಿ ಬರೆಯಲಾಗಿದೆ. ದೇವಭಾಷೆಯಾದ ಸಂಸ್ಕೃತವನ್ನು ದೇವನಾಗರಿ ಲಿಪಿಯಲ್ಲಿ ಬರೆಯಲಾಗುತ್ತದೆ. ಹಾಗೆಯೇ ತುಳುವಿಗೂ ಲಿಪಿಯ ಅಗತ್ಯವಿಲ್ಲ, ಕನ್ನಡದ ಲಿಪಿಯಲ್ಲೇ ಬರೆಯಬಹುದು ಎಂದು ತುಳು ವಿದ್ವಾಂಸರೇ ತುಳು ಸಮ್ಮೇಳನಗಳಲ್ಲಿ ಭಾಷಣ ಬಿಗಿಯುತ್ತಾರೆ. ಮೊನ್ನೆ ನಡೆದ ತುಳು ಆಯನ ಕಾರ್ಯಕ್ರಮವೊಂದರಲ್ಲಿ ತುಳುರತ್ನರೊಬ್ಬರು ತುಳು ಲಿಪಿ ಕಲಿಯಲು ಕಷ್ಟ, ಕನ್ನಡ ಲಿಪಿಯನ್ನೇ ಬಳಸಿ ಎಂದು ಕರೆ ನೀಡಿದರು. ಅವರು ತುಳುವಿನ ವಿದ್ವಾಂಸರು. ತುಳು ಅವರಿಗೆ ಎಲ್ಲವನ್ನೂ ಕೊಟ್ಟಿದೆ. ಅವರು ತುಳುವಿಗೆ ಏನೂ ಕೊಡುವವರಲ್ಲ. ಆರು-ಏಳನೆ ಕ್ಲಾಸಿನ ಮ್ಕಳು 12 ಗಂಟೆಯಲ್ಲಿ ತುಳು ಓದಲು ಬರೆಯಲು ಕಲಿಯುತ್ತಾರೆ. ಕಾಲೇಜಿನ ಮಕ್ಕಳು ನಾಲ್ಕೈದು ಗಂಟೆಯಲ್ಲಿ ತುಳು ಪಾಠ ಕೇಳಿ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಪಡೆಯುತ್ತಾರೆ. ನಾನು 65ನೇ  ವರ್ಷದಲ್ಲಿ ತುಳು ಲಿಪಿ ಕಲಿತಿದ್ದೇನೆ. ಮೊನ್ನೆ ಮೊನ್ನೆ 87 ವರ್ಷದ ಹಿರಿಯರು ತುಳು ಲಿಪಿಯ ಪರೀಕ್ಷೆ ಬರೆದು ನೂರಕ್ಕೆ ನೂರು ಅಂಕ ಪಡೆದರು. ಮನೆಯಲ್ಲೇ ಕುಳಿತು ತುಳು ಲಿಪಿ ಕಲಿತು ಪರೀಕ್ಷೆ ಬರೆದು ಎ ಗ್ರೇಡ್ ನಲ್ಲಿ ಪಾಸಾದ ಅದೆಷ್ಟೋ ಗೃಹಿಣಿಯರು ಬಂಟ್ವಾಳ ತಾಲೂಕಿನಲ್ಲಿ ಇದ್ದಾರೆ. ಮೊನ್ನೆ ಮೊನ್ನೆ ವಿಟ್ಲದಲ್ಲಿ ತುಳು ಲಿಪಿ ಶಿಲಾಶಾಸನವೊಂದು ಸಿಕ್ಕಿತು. ಅದು ಎಲ್ಲ ಪತ್ರಿಕೆಗಳಲ್ಲೂ ಬಂತು. ಆದರೂ ಕೆಲ ವಿದ್ವಾಂಸರು ತುಳು ಲಿಪಿಯೇ ಇಲ್ಲ ಎಂದು ವಾದಿಸುತ್ತಾರೆ. ಇವರಿಗೆಲ್ಲ ನಾವು ಏನು ಹೇಳಲಿ?

(ಲೇಖಕರು ತುಳು ಲಿಪಿ ಶಿಕ್ಷಕರೂ ಆಗಿದ್ದಾರೆ. ಅವರ ಸಂಪರ್ಕ ಸಂಖ್ಯೆ: 9886819771)

 ನಿಮ್ಮ ಅಭಿಪ್ರಾಯವನ್ನು ಬಂಟ್ವಾಳನ್ಯೂಸ್ ಗೆ ಬರೆದು ಕಳುಹಿಸಿ. ಈ ಮೈಲ್ ವಿಳಾಸ: bantwalnews@gmail.com

B Thammayya

ತುಳು ಭಾಷೆ ಮಾತಾಡೋದು ಸುಲಭ. ಲಿಪಿ ವಿಚಾರ ಬಂದಾಗ ಹಿಂದೇಟು ಹಾಕುತ್ತೇವೆ. ಕಂದಾಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿದ್ದು ನಿವೃತ್ತರಾಗಿರುವ ಬಿ.ಸಿ.ರೋಡಿನ ಬಿ.ತಮ್ಮಯ್ಯ, ತುಳು ಲಿಪಿಯನ್ನು ಸರಳವಾಗಿಸುತ್ತಾರೆ. ಹಿಂದಿರುಗಿ ನೋಡಿದಾಗ ಸಹಿತ ಹಲವು ಪುಸ್ತಕಗಳನ್ನು ಬರೆದಿರುವ ಅವರು ಕಸಾಪ ತಾಲೂಕು ಘಟಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

Recent Posts