bantwalnews.com report
ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಆಶ್ರಯದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ 125ನೇ ಜನ್ಮದದಿನಾಚರಣೆ ಪ್ರಯುಕ್ತ ಶಿವಾಜಿ ಫ್ರೆಂಡ್ಸ್ ಸಹಯೋಗದಲ್ಲಿ ಬಿಜೆಪಿ ಪ.ಜಾತಿ ಮೋರ್ಚಾ ಜಿಲ್ಲಾಧ್ಯಕ್ಷ ದಿನೇಶ್ ಅಮ್ಟೂರು ನೇತೃತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಅಮ್ಟೂರಿನ ಶ್ರೀಕೃಷ್ಣ ಭಜನಾ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಬಿಜೆಪಿ ಮುಖಂಡ ರಾಜೇಶ್ ನಾಯಕ್ ಉಳಿಪಾಡಿಗುತ್ತು ಮಾತನಾಡಿ, ಸಾಧನೆಗೆ ವ್ಯಕ್ತಿಗೆ ಮನೆತನ, ಅಂತಸ್ತು ಮುಖ್ಯವಲ್ಲ ಅತನ ವ್ಯಕ್ತಿತ್ವ ಮತ್ತು ಜವಬ್ದಾರಿಯನ್ನು ಅರಿತು ನಿಷ್ಟೆಯಿಂದ ಕೆಲಸ ಮಾಡಿದಾಗ ಸಾಧ್ಯವಾಗುತ್ತದೆ ಎಂದು ಹೇಳಿದರು.
ಶೋಷಣೆಯ ವಿರುದ್ದ ಹೋರಾಟ ಮಾಡಿ ಸಮಾನತೆಯನ್ನು ತಂದುಕೊಟ್ಟ ಮಹಾನ್ ವ್ಯಕ್ತಿ ಅಂಬೇಡ್ಕರ್ ಅವರಿಗೆ ಗೌರವ ನೀಡುವುದು ಯುವ ಜನತೆಯ ಕರ್ತವ್ಯವಾಗಿದೆ ಎಂದು ಹೇಳಿದರು. ಗ್ರಾಮೀಣ ಪ್ರದೇಶದಲ್ಲಿ ಪ್ರತಿಯೋಬ್ಬ ವ್ಯಕ್ತಿಯೂ ಆರೋಗ್ಯವಂತನಾದಾಗ ಗ್ರಾಮ ಸ್ವರಾಜ್ಯವಾಗುತ್ತದೆ, ಆರೋಗ್ಯದ ಕಡೆ ಎಲ್ಲರೂ ಹೆಚ್ಚಿನ ಗಮನ ಹರಿಸಿ, ಸಾವಯವಕ್ಕೆ ಒತ್ತು ಕೊಡಿ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಉಚಿತ ಆರೋಗ್ಯ ಶಿಬಿರಗಳ ಬಗ್ಗೆ ಕೀಳರಮೆ ಬೇಡ,ಅಂತಹ ಮನೋಭಾವನೆಯನ್ನು ದೂರ ಮಾಡಿ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.
ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ವಹಿಸಿ ಶುಭ ಹಾರೈಸಿದರು. ಜಿ.ಪಂ.ಸದಸ್ಯೆ ಕಮಲಾಕ್ಷಿ ಕೆ.ಪೂಜಾರಿ, ಬಂಟ್ವಾಳ ಬಿಜೆಪಿ ಕ್ಷೇತ್ರ ಸಮಿತಿ ಪ್ರಧಾನ ಕಾರ್‍ಯದರ್ಶಿ ರಾಮ್‌ದಾಸ ಬಂಟ್ವಾಳ, ತಾಪಂ ಸದಸ್ಯ ಮಹಾಬಲ ಆಳ್ವ, ಮಾಜಿ ಜಿ.ಪಂ.ಸದಸ್ಯ ಚೆನ್ನಪ್ಪ ಆರ್ ಕೋಟ್ಯಾನ್, ಡಾ. ಶರತ್ ಆಳ್ವ, ಗೋಳ್ತಮಜಲು ಪ.ಸಮಿತಿಯ ಪ್ರಧಾನ ಕಾರ್‍ಯದರ್ಶಿ ಜಯಂತ್ ಗೌಡ, ಬಿಜೆಪಿ ಪರಿಶಿಷ್ಟ ಜಾತಿಗಳ ಮೊರ್ಚಾದ ತಾಲೂಕು ಅಧ್ಯಕ್ಷ ಗಂಗಾಧರ ಜುಮಾದಿಗುಡ್ಡೆ, ಬಂಟ್ವಾಳ ಕ್ಷೇತ್ರ ಯುವ ಮೋರ್ಚಾದ ಅಧ್ಯಕ್ಷ ವಜ್ರನಾಥ ಕಲ್ಲಡ್ಕ, ಜಿಲ್ಲಾ ವೈದ್ಯಕೀಯ ಪ್ರಕೋಷ್ಟದ ಸಹಸಂಚಾಲಕ ಡಾ. ಸುಖೇಶ್ ಕೊಟ್ಟಾರಿ, ಬಿಜೆಪಿ ನಾಯಕರಾದ ಮೋನಪ್ಪ ದೇವಸ್ಯ, ವೈದ್ಯಕೀಯ ಪ್ರಕೋಷ್ಟದ ಬಂಟ್ವಾಳ ಸಂಚಾಲಕ ಡಾ. ಬಾಲಕೃಷ್ಣ ಕುಮಾರ್, ಗೋಳ್ತಮಜಲು ಗ್ರಾ,ಪಂ ಉಪಾಧ್ಯಕ್ಷ ಮಹಮ್ಮದ್ ಮುಸ್ತಾಫ, ಅಮ್ಟೂರು ಶ್ರೀಕೃಷ್ಣ ಭಜನಾ ಮಂದಿರದ ಅಧ್ಯಕ್ಷ ದಯಾನಂದ ಪೂಜಾರಿ, ಗೋಳ್ತಮಜಲು ಗ್ರಾ,ಪಂ ಸದಸ್ಯ ಗೋಪಾಲ ಪೂಜಾರಿ, ನಂದಗೋಕುಲ ಮಹಾಬಲ ಶೆಟ್ಟಿ, ನಂದನ್ ರೈ, ನಿತಿನ್ ಕುಮಾರ್, ರಮೇಶ್ ಕುದ್ರೆಬೆಟ್ಟು, ಸುಜಾತಾ, ದೇವಕಿ ಪೂಜಾರಿ ಮೊದಲಾದವರು ಆಗಮಿಸಿ ಶುಭ ಹಾರೈಸಿದರು.
ದುರ್ಗಾಶ್ರೀ, ನವ್ಯಾ, ಹರ್ಷ, ನಿಶಾಂತ್ ಅಮ್ಟೂರು ವಂದೇ ಮಾತರಂ ಹಾಡಿದರು.
ಬಿಜೆಪಿ ಪರಿಶಿಷ್ಟ ಜಾತಿಗಳ ಮೊರ್ಚಾದ ಜಿಲ್ಲಾಧ್ಯಕ್ಷ ದಿನೇಶ್ ಅಮ್ಟೂರು ಸ್ವಾಗತಿಸಿದರು. ಶಿವಾಜಿ ಫ್ರೆಂಡ್ಸ್ ಅಧ್ಯಕ್ಷ ಜಿತೇಶ್ ಶೆಟ್ಟಿ ಬಾಲಿಕೆ ವಂದಿಸಿದರು. ಕುಶಾಲಪ್ಪ ಅಮ್ಟೂರು ಕಾರ್‍ಯಕ್ರಮ ನಿರೂಪಿಸಿದರು.
ತಜ್ಞ ವೈದ್ಯರಾದ ಡಾ. ಸಂತೋಷ್ ಪೈ, ಡಾ.ನಿಶಾಂತ್ ಶೆಟ್ಟಿಗಾರ್, ಡಾ.ಪ್ರಶಾಂತ್ ಆಚಾರ್, ಡಾ.ಬಾಲಕೃಷ್ಣ ಕುಮಾರ್, ಡಾ.ಸುಕೇಶ್ ಕೊಟ್ಟಾರಿ, ಡಾ.ಸಂತೋಷ್ ಕೆಮ್ಮಿಂಜೆ ತಪಾಸಣೆ ನಡೆಸಿದರು.