ಬಂಟ್ವಾಳ

ಗೆಲುವು ಬಿಜೆಪಿಗೆ, ಅಧಿಕಾರ ಕಾಂಗ್ರೆಸ್ ಗೆ

  • ಬಂಟ್ವಾಳ ಎಪಿಎಂಸಿ ಚುನಾವಣೆ
  • ಬಿಜೆಪಿ ಬೆಂಬಲಿತ 7, ಕಾಂಗ್ರೆಸ್ ಬೆಂಬಲಿತ 6
  • ಅಧಿಕಾರ ಹಿಡಿಯಬೇಕಾದರೆ ನಾಮನಿರ್ದೇಶಿತರ ಬೆಂಬಲ ಬೇಕುbantwalnews.com report

ಬಂಟ್ವಾಳ ಎಪಿಎಂಸಿಯ 13 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ 7 ಮಂದಿ ಜಯಗಳಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತರು ಆರು ಸ್ಥಾನಗಳಲ್ಲಿ ವಿಜಯ ಸಾಧಿಸಿದ್ದಾರೆ. ನಾಮನಿರ್ದೇಶಿತ ಸದಸ್ಯರನ್ನು ಸರಕಾರವೇ ನೇಮಿಸುವ ಕಾರಣ ಅಧಿಕಾರ ಕಾಂಗ್ರೆಸ್ ಪಾಲಾಗಲಿರುವುದು ನಿಶ್ಚಿತ. ಒಟ್ಟು 12 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಒಂದು ಸ್ಥಾನಕ್ಕೆ ಚುನಾವಣೆ ನಡೆದಿರಲಿಲ್ಲ. ಕಳೆದ ಬಾರಿ ಬಿಜೆಪಿ 8 ಸದಸ್ಯರನ್ನು ಹೊಂದಿತ್ತು.

ಜಾಹೀರಾತು

ಜಿಲ್ಲೆಯ ಮೂರು ಎಪಿಎಂಸಿಗಳೂ ಕಾಂಗ್ರೆಸ್ ಪಾಲಾಗಿವೆ. ಬೆಳ್ತಂಗಡಿ ಕಾಂಗ್ರೆಸ್ – 13ರಲ್ಲಿ 8 ಕಾಂಗ್ರೆಸ್ 5 ಬಿಜೆಪಿ, ಮಂಗಳೂರು ಕಾಂಗ್ರೆಸ್ 7 ಬಿಜೆಪಿ 7, ಬಂಟ್ವಾಳ ಬಿಜೆಪಿ 7, ಕಾಂಗ್ರೆಸ್ 6 ಸ್ಥಾನಗಳನ್ನು ಗಳಿಸಿದೆ. ನಾಮನಿರ್ದೇಶಿತ ಸದಸ್ಯರ ನೇಮಿಸುವ ಅಧಿಕಾರ ಆಡಳಿತಾರೂಢ ಸರಕಾರಕ್ಕಿರುವ ಕಾರಣ, ಹೇಗಿದ್ದರೂ ಅಲ್ಲಿ ಕಾಂಗ್ರೆಸ್ ಬೆಂಬಲಿತರು ಆಯ್ಕೆಯಾಗುತ್ತಾರೆ. ಸಹಜವಾಗಿಯೇ ಕಾಂಗ್ರೆಸ್ ಅಧಿಕಾರ ಹಿಡಿದುಕೊಳ್ಳಲಿದೆ.

ಬಂಟ್ವಾಳ ಎಪಿಎಂಸಿ ಚುನಾವಣೆಯಲ್ಲಿ ಇದುವರೆಗೆ ದೊರೆತ ಮಾಹಿತಿಯಂತೆ ಗೆದ್ದವರು ಇವರು.

  1. ಸಂಗಬೆಟ್ಟು (ಸಾಮಾನ್ಯ ಕ್ಷೇತ್ರ) ಪದ್ಮರಾಜ ಬಲ್ಲಾಳ ಮಾವಂತೂರು (ಕಾಂಗ್ರೆಸ್ ಬೆಂಬಲಿತರು)
  2. ಚನ್ನೈತೋಡಿ (ಸಾಮಾನ್ಯ ಮಹಿಳೆ), ಭಾರತಿ ಎಸ್. ರೈ ಪಡಂತರಕೋಡಿ (ಕಾಂಗ್ರೆಸ್ ಬೆಂಬಲಿತರು)
  3. ಅಮ್ಟಾಡಿ (ಹಿ.ವ.ಅ) ದಿವಾಕರ ಪಂಬದಬೆಟ್ಟು (ಕಾಂಗ್ರೆಸ್ ಬೆಂಬಲಿತರು)
  4. ಕಾವಳಮೂಡೂರು (ಸಾಮಾನ್ಯ) ಅಭ್ಯರ್ಥಿಗಳು: ಹರಿಶ್ಚಂದ್ರ ಪೂಜಾರಿ ಕಜೆಕಾರು. (ಬಿಜೆಪಿ ಬೆಂಬಲಿತ)
  5. ಕೊಳ್ನಾಡು (ಹಿ.ವ.ಬಿ) ಬಿ.ಚಂದ್ರಶೇಖರ ರೈ, (ಕಾಂಗ್ರೆಸ್ ಬೆಂಬಲಿತರು)
  6. ಅಳಕೆ(ಹಿ.ವ.ಬಿ.ಮಹಿಳೆ) ಗೀತಾಲತಾ ಟಿ.ಶೆಟ್ಟಿ, (ಬಿಜೆಪಿ ಬೆಂಬಲಿತ)
  7. ಕೆದಿಲ(ಅನುಸೂಚಿತ ಪಂಗಡ) ಜಗದೀಶ ಡಿ, (ಬಿಜೆಪಿ ಬೆಂಬಲಿತ)
  8. ಮಾಣಿ(ಸಾಮಾನ್ಯ) ಬಿ.ನೇಮಿರಾಜ ರೈ, (ಬಿಜೆಪಿ ಬೆಂಬಲಿತ)
  9. ಕಡೇಶ್ವಾಲ್ಯ (ಸಾಮಾನ್ಯ) ಚಂದ್ರಶೇಖರ ಪೂಜಾರಿ (ಕಾಂಗ್ರೆಸ್ ಬೆಂಬಲಿತರು)
  10. ಪಾಣೆಮಂಗಳೂರು (ಸಾಮಾನ್ಯ), ಕೆ. ಪದ್ಮನಾಭ ರೈ. (ಕಾಂಗ್ರೆಸ್ ಬೆಂಬಲಿತರು)
  11. ತುಂಬೆ (ಅನುಸೂಚಿತ ಜಾತಿ, ಅಭ್ಯರ್ಥಿಗಳು: ವಿಠಲ ಸಾಲ್ಯಾನ್. (ಬಿಜೆಪಿ ಬೆಂಬಲಿತ)
  12. ವರ್ತಕರ ಕ್ಷೇತ್ರ – : ಬಾಲಕೃಷ್ಣ ಆಳ್ವ. (ಬಿಜೆಪಿ ಬೆಂಬಲಿತ)
  13. ಸಹಕಾರಿ ಕ್ಷೇತ್ರಕ್ಕೆ ಚುನಾವಣೆ ನಡೆದಿರಲಿಲ್ಲ. ನಾಮಪತ್ರ ಸಲ್ಲಿಸಿದ್ದ ಬಿಜೆಪಿ ಬೆಂಬಲಿತ ರವೀಂದ್ರ ಕಂಬಳಿ ಸಹಜವಾಗಿಯೇ ಗೆಲುವು ಸಾಧಿಸಿದ್ದಾರೆ.

 

ಜಾಹೀರಾತು

 

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ