www.bantwalnews.com BREAKING NEWS
ವಿಟ್ಲ ಸಮೀಪ ನೆಕ್ಕರೆಕಾಡು ಎಂಬಲ್ಲಿ ಶುಕ್ರವಾರ ಕೃಷಿಕ ಇಂದ್ರಕುಮಾರ್ ಮನೆಯಲ್ಲಿ ರಾತ್ರಿಯ ವೇಳೆಗೆ ಶೂಟೌಟ್ ನಡೆದಿದೆ. ಘಟನೆಯಲ್ಲಿ ಇಂದ್ರಕುಮಾರ್ (64) ಸಾವನ್ನಪ್ಪಿದ್ದಾರೆ.
ಅವರ ಮಗ ಚಂದ್ರಹಾಸ (30) ಎಂಬವರು ತೀವ್ರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶುಕ್ರವಾರ ರಾತ್ರಿ ಗುಂಡು ಹಾರಿದ ಸದ್ದು ಕೇಳಿ ಬಂದಾಗ ಇಂದ್ರಕುಮಾರ್ ಶವ ಮನೆ ಸಮೀಪ ಬಿದ್ದುಕೊಂಡಿತ್ತು, ಗುಂಡೇಟು ತಿಂದು ಗಾಯಗೊಂಡ ಚಂದ್ರಹಾಸನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಘಟನೆಗೆ ಕಾರಣ ಏನೆಂದು ತಿಳಿದುಬಂದಿಲ್ಲ, ತನಿಖೆಯಿಂದಲಷ್ಟೇ ಗೊತ್ತಾಗಬೇಕು ಎಂದು ಪೊಲೀಸರು ಬಂಟ್ವಾಳನ್ಯೂಸ್ ಗೆ ಮಾಹಿತಿ ನೀಡಿದ್ದಾರೆ. ವಿಟ್ಲ ಠಾಣೆಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಉನ್ನತ ಪೊಲೀಸ್ ಅಧಿಕಾರಿಗಳು ದೌಡಾಯಿಸಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…