ವಿಟ್ಲ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಅಯ್ಯಪ್ಪ ಸ್ವಾಮಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಗುರುಸ್ವಾಮಿ ನಾಯಾಯಣ ಯಾನೆ ಬಟ್ಟು ಸ್ವಾಮಿ ನೇತೃತ್ವದಲ್ಲಿ ಅಯ್ಯಪ್ಪ ಸ್ವಾಮಿ ವೃತಧಾರಿಗಳಿಂದ ಸಾಮೂಹಿಕವಾಗಿ 18 ಬಗೆಯ ವಿಶೇಷ ಭಕ್ಷಗಳೊಂದಿಗೆ ಗೋಸೇವೆ ಮತ್ತು ಗೋವು ಪೂಜೆ ಸಂತರ್ಪಣೆ ಶ್ರೀ ಕ್ಷೇತ್ರದಲ್ಲಿ ನಡೆಸಲಾಯಿತು.
ಅಯ್ಯಪ್ಪ ಸ್ವಾಮಿಯ ಪ್ರೀಯವಾದ ಅನ್ನಸಂತರ್ಪಣೆ ಪ್ರತಿ ಸಂಕ್ರಮಣದಂದು ಶ್ರೀಕ್ಷೇತ್ರದಲ್ಲಿ ನಡೆಯುತ್ತಿದ್ದು ಪ್ರತಿ ತಿಂಗಳು ಇಲ್ಲಿಂದ ಅಯ್ಯಪ್ಪ ಸ್ವಾಮಿಯ ಭಕ್ತಾದಿಗಳಿಂದ ಶಬರಿಮಲೆ ಯಾತ್ರೆ ನಡೆಯುತ್ತದೆ. ವೃತಾಚರಣೆಯೊಂದಿಗೆ ಹಿಂದೂ ಸಂಸ್ಕೃತಿ ಬಿಂಬಿಸುವ ಗೋಸೇವೆಯನ್ನು ವೃತದಾರಿಗಳು ನಡೆಸುತ್ತಿರುವುದು ಕ್ಷೇತ್ರದ ವಿಶೇಷತೆಯಾಗಿದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…