ಪಾಕಶಾಲೆಯೇ ವೈದ್ಯಶಾಲೆ

ರುಚಿಯಷ್ಟೇ ಅಲ್ಲ, ಮದ್ದಿಗೂ ಬೇಕು ಉಪ್ಪು

bantwalnews.com

ಡಾ. ರವಿಶಂಕರ್ ಎ.ಜಿ.

ಅಂಕಣ ಪಾಕಶಾಲೆಯೇ ವೈದ್ಯಶಾಲೆ

ಜಾಹೀರಾತು

ನಮ್ಮ ಮನೆಯ ಅಡುಗೆ ಮನೆ ಅಥವಾ ಪಾಕಶಾಲೆಯನ್ನು  ಒಂದು ಔಷಧಾಲಯ ಎಂದರೂ ತಪ್ಪಾಗಲಾರದು. ಅಲ್ಲಿರುವ ಹೆಚ್ಹಿನ ದ್ರವ್ಯಗಳು ಒಂದಲ್ಲ ಒಂದು ರೀತಿಯಲ್ಲಿ ,ಹಲವಾರು ಸಂದರ್ಭಗಳಲ್ಲಿ ಔಷಧವಾಗಿ ಉಪಯೋಗಕ್ಕೆ ಬರುತ್ತದೆ. ಕೆಲವೊಮ್ಮೆ ಪ್ರಥಮ ಚಿಕಿತ್ಸೆಯಾಗಿ ಹಾಗೂ ಕೆಲವೊಮ್ಮೆ ರೋಗನಿವಾರಕವಾಗಿ ಕೆಲಸ ಮಾಡುತ್ತವೆ. ಇವುಗಳನ್ನು  ಏಕ ದ್ರವ್ಯವಾಗಿ ಹಾಗು ಹಲವು ದ್ರವ್ಯಗಳ ಮಿಶ್ರಣ ರೂಪದಲ್ಲಿ ,ರೋಗಾನುಸಾರವಾಗಿ ಉಪಯೋಗಿಸಬೇಕಾಗುತ್ತದೆ. ಒಟ್ಟಿನಲ್ಲಿ ನಮ್ಮ ಪಾಕಶಾಲೆಯು ಎಷ್ಟೋ ಸಂದರ್ಭಗಳಲ್ಲಿ ಸಾಂತ್ವನವನ್ನು, ನಿರಾಳತೆಯನ್ನು ನೀಡುವಂಥ ಮದ್ದಿನ ಮನೆಯಾಗಿದೆ. ಅದನ್ನು ಯುಕ್ತಿ ಪೂರ್ವಕವಾಗಿ ಉಪಯೋಗಿಸಿದಲ್ಲಿ ಖಂಡಿತವಾಗಿಯೂ ಉತ್ತಮ ಫಲವನ್ನು ನೀಡುವುದರಲ್ಲಿ ಸಂಶಯವಿಲ್ಲ. ಈ ಬಾರಿ ನಾವು ಅಡುಗೆ ಮನೆಯಲ್ಲಿ ಕಂಡುಬರುವ ಪ್ರಮುಖ ವಸ್ತು ಉಪ್ಪಿನ ಕಡೆ ಗಮನಹರಿಸೋಣ.

ಜಾಹೀರಾತು

ಉಪ್ಪು ಅಡುಗೆ ಮನೆಯಲ್ಲಿ ಎಷ್ಟು ಪ್ರಾಮುಖ್ಯತೆ ಪಡೆದಿದೆಯೋ ಅಷ್ಟೇ ಪ್ರಾಮುಖ್ಯತೆ ವೈದ್ಯಕೀಯ ಕ್ಷೇತ್ರದಲ್ಲೂ ಹೊಂದಿದೆ.

  1. ಉಪ್ಪು ಶರೀರಕ್ಕೆ ಪೋಷಕಾಂಶಗಳನ್ನು ಹೀರಿಕೊಳ್ಳಲು ಅತ್ಯಂತ ಸಹಕಾರಿಯಾಗಿದೆ .ಆದುದರಿಂದ ಯಾವುದೇ ಸತ್ವವುಳ್ಳ ದ್ರವ ಅಥವಾ ಘನ ಆಹಾರಗಳಿಗೆ  ಸ್ವಲ್ಪ ಉಪ್ಪು ಸೇರಿಸಿ ಸೇವಿಸಿದಲ್ಲಿ  ಶರೀರಕ್ಕೆ ಬೇಗನೆ ಹೀರಿಕೊಳ್ಳುತ್ತದೆ.
  2. ಶರೀರದ ಸಂಧುಗಳು ಊತ ಹಾಗು ನೋವಿನಿಂದ ಕೂಡಿದ್ದರೆ ಉಪ್ಪನ್ನ್ನು ಬಾಣಲೆಯಲ್ಲಿ  ಬಿಸಿ ಮಾಡಿ ತೆಳ್ಳಗಿನ ಬಟ್ಟೆಯಲ್ಲಿ ಕಟ್ಟಿ ಶೇಕ ಕೊಟ್ಟಲ್ಲಿ ನೋವು ಕಡಿಮೆ ಆಗುತ್ತದೆ.
  3. ಶೀತದಿಂದಾಗಿ  ಮೂಗಿನ ಮೂಲಕ ಉಸಿರಾಡಲು ಕಷ್ಟವಾದಲ್ಲಿ ಬಿಸಿ ನೀರಿಗೆ ಸ್ವಲ್ಪ ಉಪ್ಪು ಹಾಕಿ ಕರಗಿಸಿ  ಮೂಗಿನ ಎರಡು ರಂದ್ರಗಳಿಗೆ 2 ರಿಂದ 3 ಬಿಂದು ಬಿಟ್ಟಲ್ಲಿ  ಸರಾಗವಾಗಿ ಉಸಿರಾಡಲು ಸಹಕಾರಿಯಾಗುತ್ತದೆ.
  4. ಸೈನಸ್ ಗಳಲ್ಲಿ ಕಫತುಂಬಿ ತಲೆನೋವು ಬಂದರೆ ಬಿಸಿನೀರಿಗೆ ಉಪ್ಪು ಹಾಕಿ ಆವಿ ತೆಗೆದುಕೊಳ್ಳ ಬೇಕು .ಆಗ ಮೂಗು ಹಾಗು ಕಣ್ಣಿನಿಂದ ಕಫವು ಹೊರ ಬಂದು ತಲೆ ನೋವು ಕಡಿಮೆಯಾಗುತ್ತದೆ.
  5. ಎದೆಯಲ್ಲಿ ಕಫ ತುಂಬಿ ಉಸಿರಾಡಲು ಕಷ್ಟವಾದರೆ ತೆಂಗಿನ ಎಣ್ಣೆಗೆ  ಸ್ವಲ್ಪ ಉಪ್ಪು ಹಾಕಿ ಬಿಸಿ ಮಾಡಿ ಎದೆಗೆ ಹಚ್ಚ ಬೇಕು ಆವಾಗ ಗಟ್ಟಿಯಾದ ಕಫ  ಕರಗಿ ಸರಾಗವಾಗಿ ಉಸಿರಾಡಲು ಸಹಕಾರಿಯಾಗುತ್ತದೆ .
  6. ಕಾಲಿನ ಹಿಮ್ಮಡಿ ನೋವು ಇದ್ದಾಗ ಕಾಲಿಗೆ ಎಳ್ಳೆಣ್ಣೆ ಹಚ್ಹಿ ಬಿಸಿಯಾದ ನೀರಿಗೆ ಉಪ್ಪು ಹಾಕಿ ಕಾಲನ್ನು ದಿನಾ  ಮುಳುಗಿಸಿ ಇಟ್ಟರೆ  ನೋವು ಶಮನವಾಗುತ್ತದೆ.
  7. ಗಂಟಲು ನೋವು ಅಥವಾ ಟಾನ್ಸಿಲ್ ನ  ಬಾಧೆ ಇದ್ದಾಗ  ಬಿಸಿಯಾದ ನೀರಿಗೆ ಉಪ್ಪು ಹಾಕಿ ದಿನಕ್ಕೆ 2 ರಿಂದ 3 ಬಾರಿ   ಬಾಯಿ ಮುಕ್ಕಳಿಸಿದಲ್ಲಿ  ನೋವು ಕಡಿಮೆ ಆಗುತ್ತದೆ.
  8. ಕುರಗಳು ಹಣ್ಣಾಗಿಯೂ ಸೋರದಿದ್ದರೆ ಕುರದ ಮೇಲೆ ಉಪ್ಪನ್ನು ಚಿಮುಕಿಸಬೇಕು ಅಥವಾ ಉಪ್ಪನ್ನು ತೆಳ್ಳಗಿನ ಬಟ್ಟೆಯಲ್ಲಿ ಇಟ್ಟು ಕುರದ ಮೇಲೆ ಕಟ್ಟಬೇಕು .ಆಗ ಶೀಗ್ರವಾಗಿ ಕುರ ಒಡೆದು ಕೀವು ಹೊರಬಂದು ಸಿಡಿತ ಹಾಗು ನೋವು ಕಡಿಮೆಯಾಗುತ್ತದೆ.
  9. ಮೈಯಲ್ಲಿ ಕಜ್ಜಿಗಳಾಗಿ ಅವುಗಳಿಂದ ಕೀವು ಬರುತ್ತಿದ್ದರೆ ಅಥವಾ ಕೊಳೆತ ಚರ್ಮದಿಂದ (slough) ಕೂಡಿದ್ದರೆ ಅವುಗಳನ್ನು ಉಪ್ಪುನೀರಿನಲ್ಲಿ ತೊಳೆಯ ಬೇಕು .ಆವಾಗ ಕಜ್ಜಿಗಳು ಶುಚಿಯಾಗಿ ಬೇಗನೆ ವಾಸಿಯಾಗುತ್ತವೆ.
  10. ಎಳೆ ಮಕ್ಕಳಲ್ಲಿ ಹೊಕ್ಕುಳವು ದೊಡ್ಡದಾಗಿದ್ದರೆ ಅದರಮೇಲೆ ದಿನಕ್ಕೆರಡು ಬಾರಿ ಉಪ್ಪನ್ನು ಚಿಮುಕಿಸಿದಲ್ಲಿ , ಹೊಕ್ಕುಳಿನ ಗಾತ್ರವು  ಚಿಕ್ಕದಾಗುತ್ತದೆ.
  11. ರಕ್ತದೊತ್ತಡ ಕಡಿಮೆಯಾಗಿ ನಿತ್ರಾಣ ಅಥವಾ ತಲೆಸುತ್ತು ಬಂದಾಗ ಉಪ್ಪು ಹಾಗು ನಿಂಬೆಯ ಶರಬತ್ತು ಮಾಡಿ ಕುಡಿಯ ಬೇಕು.
  12. ಹಲ್ಲು ನೋವಿಗಂತು ಉಪ್ಪು ರಾಮ ಬಾಣ.ಸ್ವಲ್ಪ ಉಪ್ಪು ಹಾಗು ಲವಂಗವನ್ನು ಜಜ್ಜಿ ನೋವಿರುವ ಹಲ್ಲಿನ ಮೇಲೆ ಇಟ್ಟು ಬಿಗಿಯಾಗಿ ಕಚ್ಚಿ ಹಿಡಿದಲ್ಲಿ ನೋವು ಶಮನವಾಗುತ್ತದೆ.(ಕೇವಲ ಉಪ್ಪೂ ಸಾಕಾಗುತ್ತದೆ)
  13. ಬಿಸಿ ನೀರಿಗೆ ಸ್ವಲ್ಪ ಉಪ್ಪು ಹಾಕಿ ಶರೀರವನ್ನು ತೊಳೆದರೆ ದೇಹದ ಮಲಿನತೆ ಹಾಗು ಚರ್ಮದ ಸತ್ತ ಪದರಗಳು ನಿವಾರೆಣೆಯಾಗಿ ಶರೀರಕ್ಕೆ ಕಾಂತಿಯನ್ನು ನೀಡುತ್ತದೆ.
  14. ತಲೆಯಲ್ಲಿ ಹೊಟ್ಟು (Dandruff) ಇದ್ದಾಗ, ವಾರಕ್ಕೆ 2 ಬಾರಿ  ಸ್ವಲ್ಪ ಉಪ್ಪನ್ನು ಮೊಸರಿನಲ್ಲಿ ಕಲಸಿ ತಲೆಗೆ ಹಚ್ಹಿ 30 ನಿಮಿಷ ಬಿಟ್ಟು ಸ್ನಾನ ಮಾಡಿದಲ್ಲಿ ತಲೆ ಹೊಟ್ಟು ನಿವಾರಣೆಯಾಗುತ್ತದೆ .
  15. ವಿಷಮ ಆಹಾರ ಅಥವಾ ಅಜೀರ್ಣದಿಂದಾಗಿ ವಾಂತಿ ಬರುವಂತಾಗಿ ಸಂಕಟ ಪಡುತ್ತಿದ್ದರೆ ಉಪ್ಪು ನೀರನ್ನು ಸ್ವಲ್ಪ ಕುಡಿಸಿದರೆ ವಾಂತಿ ಸುಲಭವಾಗಿ ಆಗುತ್ತದೆ ಮತ್ತು ಹೊಟ್ಟೆ ಶುಚಿಯಾಗಿ ನಿರಾಳವಾಗುತ್ತದೆ
  16. ಉಪ್ಪು ಆಹಾರದ ಜೀರ್ಣ ಕ್ರಿಯೆಯಲ್ಲಿ ಅತ್ಯಂತ ಸಹಕಾರಿಯಾಗಿದೆ. ಸಾಧಾರಣವಾಗಿ ಅಜೀರ್ಣವಿದ್ದಾಗ ಉಪ್ಪಿನೊಂದಿಗೆ ಹಿಂಗು, ಓಮ ಹಿಪ್ಪಿಲಿ, ಕಾಳುಮೆಣಸು ಇತ್ಯಾದಿಗಳನ್ನು ಬಳಸುತ್ತಾರೆ.

ಈ ಲೇಖನದ ಕುರಿತು ತಮ್ಮ ಅಭಿಪ್ರಾಯವನ್ನು ಬಂಟ್ವಾಳನ್ಯೂಸ್ ಜೊತೆ ಹಂಚಿಕೊಳ್ಳಿ. bantwalnews@gmail.com ಗೆ ಮೈಲ್ ಮಾಡಿ.

ಜಾಹೀರಾತು

(Dr. Ravishankar Phone: 9448260242)

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Dr. Ravishankar A G

ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಎಂ.ಎಸ್. (ಸ್ನಾತಕೋತ್ತರ) ಪದವೀಧರರಾಗಿರುವ ಡಾ.ರವಿಶಂಕರ ಎ.ಜಿ, ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮಹಾವಿದ್ಯಾಲಯ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕರು. ವಿಟ್ಲದಲ್ಲಿ ಚಿಕಿತ್ಸಾಲಯವನ್ನೂ ಹೊಂದಿದ್ದಾರೆ. ಮೂಲವ್ಯಾಧಿ, ಭಗಂಧರ, ಸೊಂಟನೋವು, ವಾತರೋಗ, ಶಿರಶೂಲ ಇತ್ಯಾದಿಗಳಲ್ಲಿ ಕ್ಷಾರಕರ್ಮ, ಅಗ್ನಿಕರ್ಮ, ರಕ್ತಮೋಕ್ಷಣ ಮೊದಲಾದ ವಿಶೇಷ ಚಿಕಿತ್ಸೆ ನೀಡುವುದರಲ್ಲಿ ಪರಿಣತರು.