ಆಡಳಿತ ಪಕ್ಷವೇ ಆಗಲಿ ವಿರೋಧ ಪಕ್ಷವೇ ಆಗಲಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿ ಇಚ್ಛಾ ಶಕ್ತಿಯಿಂದ ಪ್ರಯತ್ನಿಸಿ , ಪ್ರಚಾರ ರಾಜಕೀಯವನ್ನ ಮಾಡದೆ ಬಡವರ ಕಣ್ಣೀರನ್ನು ಒರೆಸಿ ಬಡವ ಶ್ರೀಮಂತ ಎಂಬ ಕೀಳು ಭಾವನೆಯನ್ನು ನನೆಯದೆ ಸಾಮಾಜಿಕ ಚಿಂತನೆಯನ್ನು ಮಾಡಿ ಎಂದು ಅರಣ್ಯ ಪರಿಸರ ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನುಡಿದರು.
ಕಡೇಶ್ವಾಲ್ಯ ವಲಯ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಕಲ್ಲಾಜೆ ಮೈದಾನದಲ್ಲಿ ಜರಗಿದ ಕಾರ್ಯಕರ್ತರ ಸಭೆ ಮತ್ತು ಕೃತಜ್ಞತಾ ಸಮಾರಂಭ ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನೋಟು ಬದ ಲಾವಣೆಯಿಂದ ಮಧ್ಯಮ ವರ್ಗದ ಜನರಿಗೆ ಮತ್ತು ಬಡವರಿಗೆ ತುಂ ಬಾ ತೊಂದೆರೆಯಾಗುತ್ತಿದೆ ಎಂದು ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ನುಡಿದರು.
ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರಾ, ಉಪಾಧ್ಯಕ್ಷ ಅಬ್ಬಾಸ್ ಆಲಿ, ತಾ.ಪಂ.ಸದಸ್ಯರಾದ ಸಂಜೀವ ಪೂಜಾರಿ ಹಾಗೂ ಪ್ರಗತಿಪರ ಕೃಷಿಕರಾದ ವಾಸು ಪೂಜಾರಿ ಪತ್ತುಕೊಡಂಗೆ, ವಿಠಲ ಶೆಟ್ಟಿ ಮಿತ್ತಿಮಾರು, ಕಡೇಶ್ವಾಲ್ಯ ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಈಶ್ವರ ಪೂಜಾರಿ ಉಪಸ್ಥಿತರಿದ್ದರು.
ವಲಯ ಕಾಂಗ್ರೆಸ್ ಅಧ್ಯಕ್ಷ ನ್ಯಾಯವಾದಿ ಚಿದಾನಂದ ಕಡೇಶ್ವಾಲ್ಯ ಸ್ವಾಗತಿಸಿದರು. ಕಾರ್ಯದರ್ಶಿ ಮೋಹನ್ ಕುಮಾರ್ ವಂದಿಸಿದರು. ಶೀನ ನಾಯ್ಕ ನೆಕ್ಕಿಲಾಡಿ ಮತ್ತು ಯೋಗೀಶ್ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…