ಬಂಟ್ವಾಳ

ಗುಡ್ಡೆಅಂಗಡಿ ಉರೂಸ್ ಫೆಬ್ರವರಿ 5ರಂದು

bantwalnews.com report

ಪಾಣೆಮಂಗಳೂರು ಸಮೀಪದ ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿ ವಠಾರದಲ್ಲಿ ಅಂತ್ಯ ವಿಶ್ರಮ ಹೊಂದುತ್ತಿರುವ ಹಝ್ರತ್ ಶೈಖ್ ಮೌಲವಿ ಅವರ ಹೆಸರಿನಲ್ಲಿ ಪ್ರತಿ ವರ್ಷ ಆಚರಿಸಿಕೊಂಡು ಬರುತ್ತಿರುವ ಉರೂಸ್ (ಹಗಲು) ಕಾರ್ಯಕ್ರಮವು ಫೆಬ್ರವರಿ 5 ರಂದು ನಡೆಯಲಿದೆ.

ಜಾಹೀರಾತು

ಫೆ 4 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಸಯ್ಯಿದ್ ಕೆ.ಎಸ್. ಅಲೀ ತಂಙಳ್ ಕುಂಬೋಳ್ ದುವಾಶಿರ್ವಚನಗೈಯಲಿದ್ದು, ಬಂಟ್ವಾಳ ಕೇಂದ್ರ ಜುಮಾ ಮಸೀದಿ ಖತೀಬ್ ಸಿ.ಎಂ. ಅನ್ಸಾರ್ ಬುರ್‌ಹಾನಿ ಮುಖ್ಯ ಭಾಷಣಗೈಯುವರು. ಮಸೀದಿ ಅಧ್ಯಕ್ಷ ಎಚ್.ಪಿ. ಮೊದಿನ್ ಹಾಜಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖಾ ಸಚಿವ ಯು.ಟಿ. ಖಾದರ್, ರಾಜ್ಯ ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷ ಹಾಜಿ ಬಿ.ಎಚ್. ಖಾದರ್ ಬಂಟ್ವಾಳ, ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಉದ್ಯಮಿ ಬಿ.ಎ. ಮುಹಮ್ಮದ್ ನೀಮಾ, ಸ್ಥಳೀಯ ಖತೀಬ್ ಸಿ.ಎಚ್. ಮುಹಮ್ಮದ್ ಲತೀಫಿ ಭಾಗವಹಿಸುವರು.

ಫೆ 5 ರಂದು ಲುಹ್‌ರ್ ನಮಾಜ್ ಬಳಿಕ ಎ.ವಿ. ಇಬ್ರಾಹಿಂ ಮುಸ್ಲಿಯಾರ್ ಬೋಗೋಡಿ ಅವರ ನೇತೃತ್ವದಲ್ಲಿ ಮೌಲಿದ್ ಪಾರಾಯಣ ನಡೆಯಲಿದ್ದು, ಬಳಿಕ ಸಾರ್ವಜನಿಕ ಅನ್ನದಾನ ಜರುಗಲಿದೆ.

ಈ ಪ್ರಯುಕ್ತ ನಡೆಯುವ ಮೂರು ದಿನಗಳ ಧಾರ್ಮಿಕ ಉಪನ್ಯಾಸಕ ಕಾರ್ಯಕ್ರಮವನ್ನು ಸಯ್ಯಿದ್ ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ ಉದ್ಘಾಟಿಸಲಿದ್ದು, ಫೆ 1 ರಂದು ಸ್ಥಳೀಯ ಖತೀಬ್ ಸಿ.ಎಚ್. ಮುಹಮ್ಮದ್ ಲತೀಫಿ ಅವರು ಕುರ್‌ಆನ್ ಮನುಷ್ಯ ನಿರ್ಮಿತವಲ್ಲ ಎಂಬ ವಿಷಯದಲ್ಲಿ, ಫೆ ೨ ರಂದು ನಂದಾವರ ಕೇಂದ್ರ ಜುಮಾ ಮಸೀದಿ ಖತೀಬ್ ಹಾಜಿ ಎನ್.ಎಚ್. ಆದಂ ಫೈಝಿ ಅವರು ಔಲಿಯಾಗಳು ಮತ್ತು ಕರಾಮತ್ ಎಂಬ ವಿಷಯದಲ್ಲಿ, ಫೆ 3 ರಂದು ಸಜಿಪನಡು ಕೇಂದ್ರ ಜುಮಾ ಮಸೀದಿ ಖತೀಬ್ ಎನ್.ಎಂ. ಅಶ್ಫಾಕ್ ಫೈಝಿ ಅವರು ಇಸ್ಲಾಮಿನಲ್ಲಿ ದುಂದು ವೆಚ್ಚ ಎಂಬ ವಿಷಯದಲ್ಲಿ ಧಾರ್ಮಿಕ ಉಪನ್ಯಾಸಗೈಯುವರು. ಪ್ರತಿ ದಿನ ಮಗ್ರಿಬ್ ನಮಾಝ್ ಬಳಿಕ ಬಿ.ಕೆ. ಅಬೂಬಕ್ಕರ್ ಮುಸ್ಲಿಯಾರ್ ನೇತೃತ್ವದಲ್ಲಿ ದಫ್ ಪ್ರದರ್ಶನ ನಡೆಯಲಿದೆ ಎಂದು ಮಸೀದಿ ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಪಿ.ಎಂ. ಮುಹಮ್ಮದ್ ಮುಸ್ತಫಾ ಪಕ್ರಟಣೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ