ವಿಶೇಷ ವರದಿ

ಎಂಡೋ ಪೀಡಿತರ ಬದುಕಿಗೆ ಬೆಲೆಯೇ ಇಲ್ವೇ?

ಎಂಡೋಸಲ್ಫಾನ್ ಪೀಡಿತರು ಪ್ರದರ್ಶನದ ವಸ್ತುವಾದರೇ? ಅವರ ಜೀವಕ್ಕೆ ಬೆಲೆಯೇ ಇಲ್ಲವೇ? ಬದುಕೋದೂ ತಪ್ಪೇ? ಈ ಪ್ರಶ್ನೆಗಳಿಗೆ ಉತ್ತರಿಸಲು ಕಷ್ಟವಾಗಿ ಇಂದು ನಾಲ್ವರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದರು. ಅವರ ಸಾವಿಗೆ ಯಾರು ಹೊಣೆ? ಎಂಡೋ ದುಷ್ಪರಿಣಾಮ ಹೊಂದಿದ ಮಕ್ಕಳು ಕಣ್ಣೆದುರೇ ಬೆಳೆದು ನಿಂತಿರುವ ಸಂಕಟ ಸಹಿಸಲಾರದೆ ಇನ್ನಷ್ಟು ಕುಟುಂಬಗಳು ಕಠಿಣ ನಿರ್ಧಾರ ಮೊದಲು ಶಾಶ್ವತ ಪಾಲನಾ ಕೇಂದ್ರ ತೆರೆಯಬೇಕು ಎಂಬ ಕೂಗು ಕೇಳಿ ಬಂದಿದೆ.

 

ಜಾಹೀರಾತು

ಆಳುವವರಿಗೆ, ಆಳಿಸುವವರಿಗೆ ಜೀವನದ ಮೌಲ್ಯಗಳು ಗೊತ್ತಿದ್ದರೆ ಇಂಥ ದುರ್ಘಟನೆ ನಡೆಯುತ್ತಿರಲಿಲ್ಲವೋ ಏನೋ? ಆದರೆ ನಾಲ್ಕು ಅಮೂಲ್ಯ ಜೀವಗಳು ಇಂದು ಹೋಗಿದ್ದರೆ ಅದಕ್ಕೆ ಎಂಡೋಸಲ್ಫಾನ್ ಎಂಬ ಮಾರಕ ವಿಷ ಎಷ್ಟು ಕಾರಣವೋ, ಅಷ್ಟೇ ಕಾರಣ ಎಂಡೋ ದುಷ್ಪರಿಣಾಮದಿಂದ ವಿವಿಧ ರೀತಿಯಲ್ಲಿ ತೊಂದರೆ ಅನುಭವಿಸುತ್ತಿರುವವರಿಗೆ ಸೂಕ್ತ ಪುನರ್ವಸತಿ, ಪಾಲನೆಗೆ ಇನ್ನು ಸುಸಜ್ಜಿತ ವ್ಯವಸ್ಥೆ ಕಲ್ಪಿಸದೇ ಇರುವ ನಮ್ಮ ಇಡೀ ವ್ಯವಸ್ಥೆಯ ನಿಷ್ಕ್ರಿಯತೆ.

 ಗುರವಾರ ಅಷ್ಟೇನೂ ಬಡವರಲ್ಲದ ತಕ್ಕಮಟ್ಟಿಗೆ ಆರ್ಥಿಕವಾಗಿ ಅನುಕೂಲಸ್ಥರೇ ಆಗಿರುವ ಬಾಬು ಗೌಡರು ಕಠಿಣ ನಿರ್ಧಾರ ಕೈಗೊಳ್ಳಲು ಪರಿಸ್ಥಿತಿ ಹೀಗೆ ನಿರ್ಮಾಣವಾಗಿತ್ತು.

ಎಂಡೋ ಸಮಸ್ಯೆ ಎಂದರೆ ಕೇವಲ ಅಂಗವೈಕಲ್ಯವಲ್ಲ. ವಿವಿಧ ಅನಾರೋಗ್ಯಗಳೂ ಇದರಿಂದ ಉಂಟಾಗಬಹುದು. ಮನೆಯಲ್ಲೊಬ್ಬರು ಬೆಳೆದ ಮಕ್ಕಳು ಬುದ್ಧಿಭ್ರಮಣೆಯವರು ಇದ್ದಾರೆ ಎಂದಾದರೆ, ಮನೆಯಲ್ಲೊಬ್ಬರು ಶಾಶ್ವತವಾಗಿ ಅಂಗವೈಕಲ್ಯ ಹೊಂದಿದವರು ಇದ್ದಾರೆ ಎಂದಾದರೆ, ಏನು ಮಾಡಬೇಕು?

ಜಾಹೀರಾತು

ರಾಜಕಾರಣಿಗಳು ಎಂಡೋಸಲ್ಫಾನ್ ವಿಷಯವನ್ನೇ ಮುಂದಿಟ್ಟುಕೊಂಡು ಅಧಿಕಾರಕ್ಕೆ ಬಂದಾಗ ಮತ್ತೆ ಇತ್ತ ಕಣ್ಣು ಹಾಯಿಸಲಿಲ್ಲ, ಎಂಡೋ ಪೀಡಿತರು ಓಟ್ ಬ್ಯಾಂಕ್ ಅಲ್ಲದ ಕಾರಣ, ಯಾರಿಗೂ ಇದು ದೊಡ್ಡ ವಿಷಯವೇ ಆಗಲಿಲ್ಲ. ಹೆಚ್ಚೇಗೆ ಯಾವ ರಾಜಕಾರಣಿಗಳೂ, ಅಧಿಕಾರಸ್ಥರೂ ಎಂಡೋ ಸಲ್ಫಾನ್ ಸಂತ್ರಸ್ತರ ವಿಷಯಕ್ಕೆ ಪ್ರಥಮ ಆದ್ಯತೆ ನೀಡೋದಿಲ್ಲ. ಕೇವಲ ಮಾಧ್ಯಮಗಳು ಹಾಗೂ ಹೋರಾಟಗಾರರಿಗೆ ಎಂಡೋ ಪುನರ್ವಸತಿ ಕುರಿತ ಕಾಳಜಿ ಇತ್ತು ಎಂಬ ಮಾತುಗಳು ಕೇಳಿಬರುತ್ತಿರುವುದು ಇಂದು ನಿನ್ನೆಯಲ್ಲ.

ಬಾಬು ಗೌಡರ ಹಿರಿ ಮಗ ಸದಾನಂದ ನಿಯಂತ್ರಣಕ್ಕೆ ಬಾರದಿರುವುದು ಎಂಡೋ ಅಡ್ಡ ಪರಿಣಾಮದಿಂದ ಎಂಬುದು ಅವರಿಗೆ ಗೊತ್ತಾದಾಗ ಕಾಲ ಮಿಂಚಿತ್ತು. ಕಿರಿಯ ಮಗ ತೃತೀಯ ಲಿಂಗಿಯಾದಾಗ ತಲೆ ಮೇಲೆ ಕೈ ಹೊತ್ತುಕೊಂಡರು.  ಎಂಡೋ ಪೀಡಿತರರಿಗೆ ಶಾಶ್ವತ ಪುನರ್ವಸತಿ ಕೇಂದ್ರ ನಿರ್ಮಾಣವಾಗುತ್ತದೆ ಎಂದು ಬಾಬು ಗೌಡರು ಕಾದದ್ದೇ ಬಂತು. ಪುನರ್ವಸತಿ ಕೇಂದ್ರ ಮರೀಚಿಕೆಯಾಯಿತು. ಬಾಬು ಗೌಡರ ಕುಟುಂಬ ಕೆರೆಗೆ ಹಾರಿದರು.

ನಾಲ್ವರ ಸಾವು ಸಂಭವಿಸಿದೆ. ಇನ್ನಾದರೂ ಸರಕಾರ ಕಣ್ತೆರೆದೀತೇ?

ಜಾಹೀರಾತು

ಸರಕಾರ ಏನು ಮಾಡಬೇಕು?

ಇಲ್ಲಿವೆ ಮುಖ್ಯ ಬೇಡಿಕೆ.

  1. ಗ್ರಾಮೀಣ ಆರೋಗ್ಯ ಕೇಂದ್ರಗಳ ಖಾಲಿ ಹುದ್ದೆಗಳಿಗೆ ವೈದ್ಯರ ನೇಮಕಾತಿ.
  2. ಎಂಡೋ ಸಂತ್ರಸ್ಥರಿಗೆ ನ್ಯಾಯವಾಗಿ ಲಭಿಸಬೇಕಾಗಿದ್ದ ವ್ಯವಸ್ಥೆ.
  3. ಎಂಡೋ ಸಂತ್ರಸ್ತರಿಗೆ ಶಾಶ್ವತ ಪುನರ್ವಸತಿ ವ್ಯವಸ್ಥೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.