ಆಳ್ವಾಸ್ ವಿರಾಸತ್ ಅಂಗವಾಗಿ ಜನವರಿ 6ರಿಂದ ಆಳ್ವಾಸ್ ಶಿಲ್ಪ ವಿರಾಸತ್ ಹಾಗೂ 11ರಿಂದ ವರ್ಣವಿರಾಸತ್ ಆರಂಭಗೊಳ್ಳಲಿದೆ.
ಆಳ್ವಾಸ್ ಶಿಲ್ಪಸಿರಿಯಲ್ಲಿ ರಾಷ್ಟ್ರದ ಪ್ರಸಿದ್ಧ 20 ಚಿತ್ರಕಲಾವಿದರು ಹಾಗೂ 15 ಶಿಲ್ಪ ಕಲಾವಿದರು ಭಾಗವಹಿಸಲಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
https://bantwalnews.comreport
ಆಳ್ವಾಸ್‌ನ ನುಡಿಸಿರಿ ಸಭಾಂಗಣದಲ್ಲಿ ಬೆಳಿಗ್ಗೆ 10.30 ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು ನಾಡಿನ ಹಿರಿಯ ಶಿಲ್ಪಕಲಾವಿದ ರಾಮಮೂರ್ತಿ ಶಿಬಿರ ಉದ್ಘಾಟಿಸಲಿದ್ದಾರೆ.
ಆಳ್ವಾಸ್ ಶಿಲ್ಪ ವಿರಾಸತ್‌ನಲ್ಲಿ ಬುಡಕಟ್ಟು ಜನಾಂಗವಾದ ಬಸ್ತರ್‌ನ 5 ಕಲಾವಿದರು ಲೋಹ ಶಿಲ್ಪದಲ್ಲಿ ಕಂಚಿನ ಸ್ಥಳೀಯ ದೈವಗಳ ಮುಖವಾಡಗಳನ್ನು ಹಾಗೂ ವಿವಿಧ ವಿಗ್ರಹಗಳನ್ನು ರಚಿಸಲಿದ್ದಾರೆ. ನಾಡಿನ 10 ಶಿಲ್ಪ ಕಲಾವಿದರು ಮರದ ಕೆತ್ತನೆಯಲ್ಲಿ ಸುಮಾರು 4–6 ಅಡಿ ಎತ್ತರದ ಕೋಟಿ-ಚೆನ್ನಯ ಸೇರಿದಂತೆ ವಿವಿಧ ಕಲಾಕೃತಿಗಳನ್ನು ರಚಿಸಲಿದ್ದಾರೆ. ಮಧ್ಯಪ್ರದೇಶದ ಬನ್ಸಿಲಾಲ್ ಬೈಡ್, ರವೀಂದ್‌ನಾಗ್, ಆಕಾಶ್‌ನಾಗ್, ಅಮೀರ್‌ನಾಗ್, ಬೆಂಗಳೂರಿನ ರಾಮಮೂರ್ತಿ, ಶಿವಶಂಕರ್, ಚಿತ್ರದುರ್ಗದ ಮಂಜುನಾಥ ಆಚಾರ್ಯ, ಬಳ್ಳಾರಿಯ ಸಿದ್ಧರೂಢ, ದಕ್ಷಿಣ ಕನ್ನಡದ ಚಿದಾನಂದ ಹಾಗೂ ಶಶಿಕುಮಾರ್, ಕುಂದಾಪುರದ ಸಾಂಪ್ರಾಯಿಕ ಶಿಲ್ಪ ಕಲಾವಿದರಾದ ಕೃಷ್ಣಗುಡಿಗಾರ್, ಯತೀಶ್, ಗಣೇಶ್ ಆಚಾರ್, ಕುಮಾರ್ ಶಿಲ್ಪ ವಿರಾಸತ್‌ನಲ್ಲಿ ಭಾಗವಹಿಸಲಿದ್ದಾರೆ.
11ರಂದು ಅಳ್ವಾಸ್ ವರ್ಣವಿರಾಸತ್
ಜ.11ರಂದು ಆಳ್ವಾಸ್ ವರ್ಣ ವಿರಾಸತ್ ಆರಂಭಗೊಳ್ಳಲಿದ್ದು, ಆಳ್ವಾಸ್‌ನ ಆಯುರ್ವೇದ ಸೆಮಿನಾರ್ ಸಭಾಂಗಣದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು ಕುಂದಾಪುರ ಗುರುಕುಲ ಪಬ್ಲಿಕ್ ಸ್ಕೂಲ್‌ನ ಜಂಟಿ ಟ್ರಸ್ಟಿ ಅನುಪಮ ಹೆಗ್ಡೆ ಅವರು ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮಿಗಳು ಆಶೀರ್ವಚನ ನೀಡಲಿದ್ದು, ಸಂಸ್ಥೆಯ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಅಧ್ಯಕ್ಷತೆ ವಹಿಸಲಿದ್ದಾರೆ.
ಅಳ್ವಾಸ್ ವರ್ಣವಿರಾಸತ್‌ನಲ್ಲಿ ಮುಂಬಯಿ, ಒರಿಸ್ಸಾ, ಗುಜರಾತ್, ರಾಜಸ್ಥಾನ್, ತ್ರಿಪುರ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಪ್ರಸಿದ್ಧ 20 ಚಿತ್ರಕಲಾವಿದರು ತಲಾ ಎರಡು ಕಲಾಕೃತಿಗಳನ್ನು ರಚಿಸಲಿದ್ದಾರೆ. ಮುಂಬಯಿಯ ನೀಲೇಶ್ ಡಿ. ಭಾರ್ತಿ, ರಮೇಶ್ ಹರಿಪಚ್‌ಪಾಂಡೆ, ಸಾಗರ್ ಬಂದ್ರೂ, ಅಮಿ ಪಠೇಲ್, ದೇವ್‌ದಾಸ್ ಶೆಟ್ಟಿ, ಒಡಿಸ್ಸಾದ ಸಂಗ್ರಾಮ್ ಕುಮಾರ್ ಮಾಂಜಿ, ಕೇರಳದ ಶ್ರೀಜಪಲ್ಲಂ, ದ್ರುವರಾಜ್ ಎನ್.ವಿ., ಸ್ಮಿಜಾವಿಜಯನ್, ವಿಜಯ ಕುಮಾರ್, ತ್ರಿಪುರದ ರವೀಂದೊ ದಾಸ್, ಗುಜರಾತಿನ ಕಿಶೋರ್ ನಾರ್ಖಂಡಿವಾಲಾ, ಹೈದಾರಾಬಾದಿನ ನಿರ್ಮಲಾ ಬಲುಕ, ಪಾಲಕ್‌ದುಬೆ, ತಮಿಳುನಾಡಿನ ಕಣ್ಣನ್, ಗಂಗಾಥರನ್, ಕರ್ನಾಟಕದ ಸಚ್ಚಿದಾನಂದ, ಗಣಪತಿ ಹೆಗ್ಡೆ, ಕಾಂತರಾಜುರವರು ಶಿಬಿರದಲ್ಲಿ ಭಾಗವಹಿಸಲಿದ್ದಾರೆ.
ಜ.15 ರಂದು 12 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಲಲಿತಾಕಲಾ ಅಕಾಡೆಮಿ, ನವದೆಹಲಿ ಇದರ ಮುಖ್ಯಸ್ಥ ಹಾಗೂ ಆಡಳಿತ ಅಧಿಕಾರಿ ಚಿ.ಸು.ಕೃಷ್ಣಸೆಟ್ಟಿ, ಬೆಂಗಳೂರಿನ ಪ್ರಸಿದ್ಧ ಬರಹಗಾರರಾದ ಗೋಪಾಲಕೃಷ್ಣರವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. 2017ನೇ ಸಾಲಿನ ಆಳ್ವಾಸ್ ವರ್ಣವಿರಾಸತ್ ಪ್ರಶಸ್ತಿಗೆ ಆಯ್ಕೆಯಾದ ರಾಜಸ್ಥಾನದ ಹಿರಿಯ ಸಾಂಪ್ರಾದಾಯಿಕ ಕಲಾವಿದ ರೇವ ಶಂಕರ ಶರ್ಮ ಅವರು ಸಮಾರಂಭದಲ್ಲಿ ಉಪಸ್ಥಿತರಿರುವರು ಎಂದು ತಿಳಿಸಿದ್ದಾರೆ.
for more info visit http://alvasvirasat.in/