ಧಾರ್ಮಿಕ ನಾಯಕರ ಆದರ್ಶ ಪರಂಪರೆಯನ್ನು ಉಳಿಸಿ ಬೆಳೆಸುವ ಜವಾಬ್ಧಾರಿ ಧಾರ್ಮಿಕ ಶಿಕ್ಷಣ ಕೇಂದ್ರದ ಮೇಲಿದೆ ಎಂದು ಹಿರಿಯ ಧಾರ್ಮಿಕ ವಿದ್ವಾಂಸರಾದ ಶೈಖುನಾ ಎಂ ಆಲೀ ಕುಂಞ ಉಸ್ತಾದ್ ಇರಾ ಪರಪ್ಪು ನೂತನ ಮದ್ರಸಾ ಕಟ್ಟಡದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಧಾರ್ಮಿಕ ಪ್ರಭಾಷನ ಗೈದರು.
ಈ ಸಮಾರಂಭದಲ್ಲಿ ಬಂಟ್ವಾಳ ತಾಲೂಕು ಅದ್ಯಕ್ಷ ಚಂದ್ರಹಾಸ ಕರ್ಕೇರ,ಇರಾ ಗ್ರಾಮ ಪಂಚಾಯತ್ ಅದ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಉದ್ಯಮಿಗಳಾದ ಎಸ್ ಕೆ ಖಾದರ್ ಹಾಜಿ ಮುಡಿಪು,ಇಬ್ರಾಹಿಂ ಹಾಜಿ ತಪಶಿಯಾ, ಧಾರ್ಮಿಕ ನಾಯಕರಾದ ಅಲ್ಹಾಜ್ ಮುಹಮ್ಮದ್ ಅಲೀ ಫೈಝಿ ಬಾಳೆಪುಣಿ, ಟಿ.ಎ ಉಮರ್ ಸಖಾಫಿ ತಲಕ್ಕಿ ಕೊಂಡಗೇರಿ ಕೊಡಗು, ಪಿ.ಯಂ ಮುಹಮ್ಮದ್ ಮದನಿ ಅದ್ಯಕ್ಷ ಪರಪ್ಪು ಜುಮ್ಮಾ ಮಸೀದಿ, ಮಹಮ್ಮದ್ ಮೂಲೆ ಅದ್ಯಕ್ಷರು ಇರಾ ಮೂಲೆ ಮಸೀದಿ, ಅಬ್ದುಲ್ ಲತೀಫ್ ಸಖಾಫಿ ಪರಪ್ಪು ಸೈಟ್, ಎನ್.ಡಿ.ಅಬೂಬಕ್ಕರ್ ಮದನಿ ಇರಾ ಮೂಲೆ, ಇಬ್ರಾಯಿಂ ಸಹದಿ ಇರಾ ಸಂಪಿಲ, ಹೈದರ್ ಹಿಮಾಮಿ ಮುದುಂಗಾರು ಕಟ್ಟೆ,ಅಬ್ದುಲ್ ರಹಿಮಾನ್ ಲತೀಫಿ, ಪರಪ್ಪು, ಯಂ.ಕೆ ಮಹಮ್ಮದ್ ಅಶ್ರಫ್ ಸಖಾಫಿ ಮುರ, ಮಹಮ್ಮದ್ ರಫೀಖ್ ಮಿಸ್ಬಾಹಿ, ಯಂ ಯಸ್ ಇಬ್ರಾಯಿಂ ಪರಪ್ಪು, ಯಂ.ಬ್ಥ್ಭಿ ಉಮ್ಮರ್ ಪರಪ್ಪು ಇರಾ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
ಮದ್ರಸ ಕಟ್ಟಡ ನಿರ್ಮಾಣಕ್ಕಾಗಿ ಶ್ರಮಿಸಿದ ಪಿ ಮಹಮ್ಮದ್ ಹಾಜಿ ಪರ್ಲಡ್ಕ ಹಾಗೂ ಗುತ್ತಿಗೆದಾರರಾದ ಮಹಮ್ಮದ್ ಅಲಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಪರಪ್ಪು ಮಸೀದಿಯ ಧರ್ಮ ಗುರುಗಳಾದ ಕೆ.ಯಂ ಅಬ್ದುಲ್ ಹಮೀದ್ ಸಖಾಫಿ ಕೊಡುಂಗಾಯಿ ಸ್ವಾಗತಿಸಿ ಪ್ರಾಸ್ಥಾವಿಕ ಮಾತುಗಳನ್ನಾಡಿದರು.ಪರಪ್ಪು ಮಸೀದಿಯ ಕಾರ್ಯದರ್ಶಿ ಧನ್ಯವಾದ ಸಲ್ಲಿಸಿ ಮುಸ್ತಾಫ ಮುಸ್ಲಿಯಾರ್ ಇರಾ ಕಾರ್ಯಕ್ರಮ ನಿರೂಪಿಸಿದರು.