ಹೆತ್ತವರು ತಮ್ಮ ಮಕ್ಕಳೊಡನೆ ಸಮಯ ಕಳೆಯಲು ಸಿದ್ಧರಿರಬೇಕು. ಅವರನ್ನು ಪ್ರೀತಿ ವಾತ್ಸಲ್ಯಗಳಿಂದ ಪೋಷಿಸಿ, ಆದರೆ ನಿಮ್ಮ ಅತಿಯಾದ ಪ್ರೀತಿಯೇ ಅವರಿಗೆ ಮುಳುವಾಗಬಾರದು ಎಂದು ಕಣಚ್ಚೂರು ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲ ಸಿ.ಹೆಚ್.ರಾಮಚಂದ್ರ ಭಟ್ ಹೇಳಿದರು.
ಬಂಟ್ವಾಳ ವಿದ್ಯಾಗಿರಿಯ ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಶಾಲೆಯ ದಶಮಾನೋತ್ಸವ ಸಮಾರಂಭ ’ಸಂಭ್ರಮ’ದ ಸಭಾ ಕಾರ್‍ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಶಾಲಾ ಸಂಚಾಲಕ ಭಾಮಿ ವಿಠಲ್‌ದಾಸ್ ಶೆಣೈ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ಮಲ್ಯ, ಪ್ರಾಂಶುಪಾಲೆ ಶ್ರೀಮತಿ ರಮಾಶಂಕರ್ ಸಿ ಉಪಸ್ಥಿತರಿದ್ದರು. ಕಳೆದ ಶೈಕ್ಷಣಿಕ ಸಾಲಿನ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಭಾ ಕಾರ್‍ಯಕ್ರಮದ ನಂತರ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಂದ ಶಾಂತಿ ಮತ್ತು ಸಾಮರಸ್ಯದ ಧ್ಯೇಯವನ್ನು ಪ್ರತಿಬಿಂಬಿಸುವ ಹಲವು ಸಾಂಸ್ಕೃತಿಕ ಕಾರ್‍ಯಕ್ರಮಗಳು ಜರುಗಿದವು. ಶಾಲಾನಾಯಕಿ ಆತ್ಮಿ ಪಿ ಭಂಡಾರಿ, ಉಪನಾಯಕ ಅನಂತ್ ರಾಹುಲ್ ಸೋಮಯಾಜಿ ಕಾರ್‍ಯಕ್ರಮ ನಿರ್ವಹಿಸಿದರು. ಶಿಕ್ಷಕಿ ಜೂಲಿ ಟಿ ಜೆ ಸ್ವಾಗತಿಸಿ, ಉಷಾ ಬಿ ವಂದಿಸಿದರು.