ತುಳುನಾಡಿನಲ್ಲಿರುವವರು ಎಲ್ಲರೂ ತುಳುವರು. ಅದರಲ್ಲೂ ತುಳು ಭಾಷೆಗೆ ತನ್ನದೇ ಆದ ಹಿರಿಮೆ ಇದೆ. ನಮ್ಮ ಭಾಷೆ ಉಳಿವಿಗೆ ಪಣ ತೊಡದಿದ್ದರೆ ತುಳು ಇತಿಹಾಸ ಪುಟ ಸೇರಬಹುದು. ಹಾಗಾಗಬಾರದು.
www.bantwalnews.com ಅಂಕಣ – ನಮ್ಮ ಭಾಷೆ
ಭಾಷೆಯ ಆಧಾರದಲ್ಲಿ ರಾಜ್ಯಗಳು 1956ರಲ್ಲಿ ರಚನೆಯಾದ ಕಾನೂನಿನಲ್ಲಿ ಈ ಅಂಶ ವ್ಯಕ್ತವಾಗಿತ್ತು.
ಯಾವುದೇ ಭಾಷೆ ಮೂರು ಜಿಲ್ಲೆಗಳಲ್ಲಿ ಶೇ.70ರಿಂದ ಹೆಚ್ಚು ಮಾತನಾಡುತ್ತಾರೋ, ಆ ನಾಡನ್ನು ರಾಜ್ಯ ಎಂದು ಪರಿಗಣಿಸಬೇಕು. ಆದರೆ ಇಲ್ಲಿ ತುಳುವಿಗೆ ಅನ್ಯಾಯವಾಗಿದೆ. ಈಗ ಕರ್ನಾಟಕ ರಾಜ್ಯ ಸರಕಾರ ತುಳುವಿಗಾಗಿ ತುಳು ಸಾಹಿತ್ಯ ಅಕಾಡಮಿ ಸ್ಥಾಪಿಸಿದೆ. ತುಳುವನ್ನು ಮೂರನೇ ಭಾಷೆಯಾಗಿ ಕಲಿಯುವ ಅವಕಾಶ ನೀಡಿದೆ. ಒಂದು ಭಾಷೆಗೆ ಒಂದು ಸಂಸ್ಕೃತಿ, ಒಂದು ಲಿಪಿ ಇರಬೇಕು. ಅದೆಲ್ಲ ಇದ್ದರೂ ನಮ್ಮ ತುಳು ಅನಾದರಕ್ಕೆ ಒಳಗಾಗಿರುವುದು ನೋವಿನ ವಿಚಾರ.
ಇತ್ತೀಚೆಗೆ ಜರ್ಮನಿಯವರು ಜಗತ್ತಿನ ಭಾಷೆಗಳಲ್ಲಿ ಹಿರಿಯ ಹತ್ತು ಭಾಷೆಗಳನ್ನು ಸಂಶೋಧನೆ ಮೂಲಕ ಪತ್ತೆ ಮಾಡಿದರು. ಅವುಗಳ ವಿವರ ಹೀಗಿದೆ.
10 ಲ್ಯಾಟಿನ್ ಭಾಷೆ 75 (ಕ್ರಿ.ಪೂ.)
9 ಅಮೆನಿಯನ್ ಭಾಷೆ 450 (ಕ್ರಿ.ಪೂ.)
8 ಕೊರಿಯನ್ ಭಾಷೆ 600 (ಕ್ರಿ.ಪೂ.)
7 ಹೆಬ್ರು ಭಾಷೆ 1000 (ಕ್ರಿ.ಪೂ.)
6 ಅರಮಾನಿಯನ್ ಭಾಷೆ 1000 (ಕ್ರಿ.ಪೂ.)
5 ಚೈನೀಸ್ ಭಾಷೆ 1200 (ಕ್ರಿ.ಪೂ.)
4 ಗ್ರೀಕ್ ಭಾಷೆ 1450 (ಕ್ರಿ.ಪೂ.)
3 ಈಜಿಪ್ಶಿಯನ್ ಭಾಷೆ 2000 (ಕ್ರಿ.ಪೂ.)
2 ಸಂಸ್ಕೃತ ಭಾಷೆ 3000 (ಕ್ರಿ.ಪೂ.)
1 ತಮಿಳುಮೂಲ ಭಾಷೆ 5000 (ಕ್ರಿ.ಪೂ.)
ಇಲ್ಲಿ ತಮಿಳುಮೂಲ ಭಾಷೆ ಎಂದರೆ ತುಳು. ಆದುದರಿಂದ ಜಗತ್ತಿಗೇ ತುಳು ಮೊದಲ ಭಾಷೆ. ಇಂಥ ಭಾಷೆಯ ಬಗ್ಗೆ ನಮಗೆ ಪ್ರೀತಿ, ಅಭಿಮಾನ, ಹೆಮ್ಮೆ ಇರಬೇಡವೇ, ಇವತ್ತು ಜಗತ್ತಿನ ಭಾಷೆ ಇಂಗ್ಲೀಷನ್ನು ಬರೆಯುವುದು ರೋಮನ್ ಲಿಪಿಯಲ್ಲಿ. ದೇವಭಾಷೆ ಎನಲಾದ ಸಂಸ್ಕೃತವನ್ನು ಬರೆಯುವುದು ದೇವನಾಗರಿ ಲಿಪಿಯಲ್ಲಿ. ಆದರೆ ಎಲ್ಲವೂ ಇದ್ದು ಇಲ್ಲವಾದ ಅನಾಥವಾದ ತುಳುವಿನ ಬಗ್ಗೆ ತುಳುವಿನವರಿಗೇ ಕನಿಕರ ಬೇಡವೇ, ತುಳುವನ್ನು ಉಳಿಸಬೇಕಾದರೆ ಯಾರೋ ಮನಸ್ಸು ಮಾಡಬೇಕಾದ ಅಗತ್ಯ ಇಲ್ಲ. ಅದನ್ನು ತುಳುವರೇ ಉಳಿಸಬೇಕಾಗಿದೆ.
ಅದಕ್ಕಾಗಿ ತುಳುವರು ಟೊಂಕ ಕಟ್ಟಿ ನಿಲ್ಲಬೇಕಾದ ಅನಿವಾರ್ಯತೆ ಇದೆ.
(ಮುಂದಿನ ಭಾಗದಲ್ಲಿ: ಹೊರರಾಜ್ಯ, ದೇಶಗಳಲ್ಲಿ ತುಳುವಿನ ಅಸ್ತಿತ್ವ)
ಈ ವಿಷಯದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ನಿಮಗೆ ಬಂಟ್ವಾಳ ನ್ಯೂಸ್ ವೇದಿಕೆ ಕಲ್ಪಿಸುತ್ತದೆ. ನಿಮ್ಮ ಅಭಿಪ್ರಾಯವನ್ನು 50 ಶಬ್ದಗಳ ಮಿತಿಯಲ್ಲಿ ಬರೆದು, ಹೆಸರು, ವಿಳಾಸ, ದೂರವಾಣಿ ಸಂಖ್ಯೆಯೊಂದಿಗೆ ಈ ವಾಟ್ಸಾಪ್ ನಂಬರ್ ಗೆ ಕಳುಹಿಸಿ: 9448548127 ಅಥವಾ ಈ ಮೈಲ್ ವಿಳಾಸ: bantwalnews@gmail.com