bantwalnews.com
ತುಂಬೆ ಅಣೆಕಟ್ಟು ಎತ್ತರಿಸಿದ್ದರಿಂದ ಪ್ರಸ್ತುತ 4 ಗ್ರಾಮಗಳಲ್ಲಿ 18-20 ಎಕರೆ ಭೂಪ್ರದೇಶ ಮುಳುಗಡೆಯಾಗಲಿದ್ದು ಭೂಮಾಲಿಕರಿಗೆ ಒಟ್ಟು 16,25,080 ರೂ.ನ್ನು 2 ಕಂತಿನಲ್ಲಿ ನೀಡಲಾಗುವುದು ಎಂದು ಮನಪಾ ಆಯುಕ್ತ ಮೊಹಮ್ಮದ್ ನಜೀರ್ ತಿಳಿಸಿದ್ದಾರೆ.
ತುಂಬೆ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ ಮನಪಾ ಕಾರ್ಪೋರೇಟರ್ ವಿಶ್ವನಾಥ ಪೂಜಾರಿ ನೇತೃತ್ವದಲ್ಲಿ ನಗರ ಪಾಲಿಕೆ ಕಮಿಷನರ್ ಮೊಹಮ್ಮದ್ ನಝೀರ್ ಅವರನ್ನು ಭೇಟಿ ಮಾಡಿ ನೂತನ ಡ್ಯಾಂ ನೀರು ಸಂಗ್ರಹಿಸಿ ರೈತರಿಗಾದ ಅನ್ಯಾಯ ಸರಿಪಡಿಸುವಂತೆ ಮನವಿ ಸಲ್ಲಿಸಿತು.
ಮನವಿಗೆ ಸ್ಪಂದಿಸಿದ ಆಯುಕ್ತರು 5 ಮೀ. ಎತ್ತರದ ಮುಳುಗಡೆ ಪ್ರದೇಶದ ಲಿಖಿತ ಮಾಹಿತಿ ನೀಡಿದರು. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಮುಳುಗಡೆಗೊಳಗಾಗುವ ಸಂತ್ರಸ್ತ ರೈತರ ಸಭೆಗೆ ಅಹ್ವಾನಿಸಿ ಬಾರದ ಸಂತ್ರಸ್ತ ರೈತರ ಜಮೀನು ಜಲಾವೃತಗೊಂಡಲ್ಲಿ ಅಂತಹ ರೈತರು ತಹಶೀಲ್ದಾರ್ ಮತ್ತು ಆಯುಕ್ತರಿಗೆ ಲಿಖಿತ ಅರ್ಜಿ ನೀಡಿದ್ದಲ್ಲಿ ಅವರಿಗೂ ಮುಳುಗಡೆ ಭೂಮಿಗೆ ಪರಿಹಾರ ಬಾಡಿಗೆ ರೂಪದಲ್ಲಿ ನೀಡಲಾಗುವುದೆಂದು ತಿಳಿಸಿದರು.
ನಿಯೋಗದಲ್ಲಿ ಸಮಿತಿ ಪದಾಧಿಕಾರಿಗಳಾದ ಎಂ.ಸುಬ್ರಹ್ಮಣ್ಯ ಭಟ್, ಎನ್.ಕೆ.ಇದಿನಬ್ಬ, ಪಿ.ಸುದೇಶ ಮಯ್ಯ, ಬಾಲಕೃಷ್ಣ ಗಟ್ಟಿ ಮೊದಲಾದವರಿದ್ದರು.