bantwalnews.com report
ಅಳಿಕೆ ಜೆಡ್ಡು ಪದ್ಮಗಿರಿ ಶ್ರೀಆದಿ ಧನ್ವಂತರಿ ಕ್ಷೇತ್ರದ ಶ್ರೀಧನ್ವಂದರಿ ದೇವರ ನಿಧಿಕಲಶ ಡಿ.22ರಂದು ನಡೆಯುವ ಹಿನ್ನಲೆಯಲ್ಲಿ 7ಗ್ರಾಮಗಳ 41 ಕ್ಷೇತ್ರಗಳಿಗೆ ನಿಧಿಕಲಶ ಮೆರವಣಿಗೆ ಬುಧವಾರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಿಂದ ಮುಂದುವರಿಯಿತು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು, ಸಾಧ್ವಿ ಶ್ರೀ ಮಾತಾನಂದಮಯೀ ಅವರು, ಕನ್ಯಾನ ಭಾರತ ಸೇವಾಶ್ರಮದಲ್ಲಿ ಕಾರ್ಯದರ್ಶಿ ಈಶ್ವರ ಭಟ್, ಅಳಿಕೆ ಶ್ರೀ ಸತ್ಯಸಾಯಿ ಲೋಕ ಸೇವಾ ವಿದ್ಯಾ ಸಂಸ್ಥೆಯಲ್ಲಿ ಟ್ರಸ್ಟ್ ಅಧ್ಯಕ್ಷ ಯು. ಗಂಗಾಧರ ಭಟ್, ಆಲಂಗಾರು ಶ್ರೀ ಮೂಕಾಂಬಿಕಾ ಕ್ಷೇತ್ರದಲ್ಲಿ ಪದ್ಮಿನಿ ರಾಮ ಭಟ್ ಅವರಿಂದ ನಿಧಿಕಲಶ ಪೂಜೆ ನಡೆಯಿತು.
ಬನಾರಿ ಶ್ರೀ ಗೋಪಾಕೃಷ್ಣ ದೇವಸ್ಥಾನ. ದೇಲಂತಬೆಟ್ಟುಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಅಳಿಕೆಗುತ್ತು ಮೂಲ ಭಂಡಾರ ಶ್ರೀ ಕಲ್ಲೆಂಚಿತಾಯಿ ದೈವಸ್ಥಾನ, ಎರುಂಬು ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಶ್ರೀ ಶಂಕರನಾರಾಯಣ ದೇವಸ್ಥಾನ, ದೇಲಂತಬೆಟ್ಟು ಶೋಕಮಾತಾ ಇಗರ್ಜಿ, ಬೈರಿಕಟ್ಟೆ ಜಲಾಲಿಯಾ ಜುಮ್ಮಾ ಮಸೀದಿ, ಕೇಪು ಖಂಡಿಗೆ ಶ್ರೀ ಕೈಲಾಸೇಶ್ವರ ದೇವಸನ್ನಿಧಿ, ಮಡಿಯಾಲ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಭಜನಾ ಸೇವೆ ಹಾಗೂ ಶ್ರೀ ದೇವರಿಗೆ ಮಹಾಮಂಗಳಾರತಿ ನಡೆಸಿ, ಶ್ರೀ ಆದಿ ಧನ್ವಂತರಿ ಕ್ಷೇತ್ರದ ಜೆಡ್ಡು ಆಯುರ್ವೇದ ಮೂಲಮನೆಗೆ ಮೆರವಣಿಗೆ ಸಂಚರಿಸಿತು.
ದೇಗುಲ ನಿರ್ಮಾಣ ಸಮಿತಿ ಸಂಚಾಲಕ ಕೋಡಿಜಾಲು ಗೋವಿಂದ ಭಟ್, ಶ್ರೀ ಧನ್ವಂತರ ಸೇವಾ ಸಮಿತಿಯ ಅಧ್ಯಕ್ಷ ಜೆಡ್ಡು ನಾರಾಯಣ ಭಟ್, ಕೊಡಂದೂರು ಸುಬ್ರಹ್ಮಣ್ಯ ಶಾಸ್ತ್ರಿ, ವಿಶ್ವೇಶ್ವರ ಭಟ್ ಒಳಬೈಲು, ಶಿವಪ್ರಕಾಶ್ ಮುಳಿಯಾಲ, ನೀಲಪ್ಪ ಗೌಡ ರೆಂಜಾಡಿ, ಹರೀಶ್ ಶೆಟ್ಟಿ ರೆಂಜಾಡಿ, ಆನಂದ ನಾಯ್ಕ ಜೆಡ್ಡು, ಸದಾಶಿವ ಶೆಟ್ಟಿ ನೆಕ್ಕಿತ್ತಪುಣಿ, ನಾಗರಾಜ ನಾಯ್ಕ ಜೆಡ್ಡು, ಈಶ್ವರ ಗೌಡ ಬೈರಿಕಟ್ಟೆ, ಚಂದ್ರಶೇಖರ ಕುಡಿಯರಮೂಲೆ, ವೆಂಕಟಕೃಷ್ಣ ಅಟ್ಟೆಪ್ಪಿಲ, ಡಾ. ಜೆಡ್ಡು ಗಣಪತಿ ಭಟ್, ಡಾ. ಮನರೋಮಾ ಜಿ. ಭಟ್ ಮತ್ತಿತರರು ಉಪಸ್ಥಿತರಿದ್ದರು.