Bantwalnews.com report
ಸೋಮವಾರ ಸಂಜೆ ಕಲ್ಪನೆ ಎಂಬಲ್ಲಿ ವಿವಾಹಕ್ಕೆ ತೆರಳಿ ಮರಳುತ್ತಿದ್ದ ಇಬ್ಬರು ಯುವಕರಿಗೆ ಚೂರಿಯಿಂದ ಇರಿದ ಪ್ರಕರಣಕ್ಕೆ ಸಂಬಂಧಿಸಿ ಪರಾರಿಯಾದ ಘಟನೆಗೆ ಸಂಬಂಧಿಸಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಬುಧವಾರ ಮುಂಜಾನೆ ಆರು ಗಂಟೆಗೆ ಕೊಡ್ಮಣ್ ಅಬ್ಬೆಟ್ಟು ಸರಕಾರಿ ಶಾಲೆ ಬಳಿ ದೇವದಾಸ (30), ಪ್ರಶಾಂತ್ (28), ಸತೀಶ್(30), ಉಮೇಶ್(30) ಎಂಬ ಆರೋಪಿಗಳನ್ನು ಎಸ್ಪಿ ಭೂಷಣ್ ಬೊರಸೆ ಮಾರ್ಗದರ್ಶನದಲ್ಲಿ ವೃತ್ತನಿರೀಕ್ಷಕ ಬಿ.ಕೆ.ಮಂಜಯ್ಯ ನೇತೃತ್ವದಲ್ಲಿ ಡಿಸಿಐಬಿ ಇನ್ಸ್‌ಪೆಕ್ಟರ್ ಅಮಾನುಲ್ಲಾ, ಸಿಬಂದಿಗಳಾದ ಸಂಜೀವ ಪುರುಷ, ಲಕ್ಷ್ಮಣ ಕೆ.ಜಿ, ಪಳನಿವೇಲು, ಇಕ್ಬಾಲ್, ಉದಯ ರೈ, ಸತೀಶ್ ವಾಸು ನಾಯ್ಕ, ವಿಜಯ ಗೌಡ ನಾಲ್ವರನ್ನು ಬಂಧಿಸಿತು.
ಬೈಕಿನಲ್ಲಿ ಬರುತ್ತಿದ್ದ ಜುನೈದ್(17) ಮತ್ತು ಸಿನಾನ್ (18) ಕಲ್ಪನೆ ತಲುಪುತ್ತಿದ್ದಂತೆ ಇನ್ನೊಂದು ಬೈಕಿನಲ್ಲಿ ಬಂದ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ಚೂರಿಯಿಂದ ಇರಿದು ಪರಾರಿಯಾಗಿದ್ದಾಗಿ ದೂರು ನೀಡಲಾಗಿತ್ತು.
ಜುನೈದ್ ಮುಲ್ಲೂರು ಬದ್ರಿಯಾನಗರ ನಿವಾಸಿಯಾದರೆ, ಸಿನಾನ್ ಶಾಂತಿಯಂಗಡಿ ನಿವಾಸಿ. ಇಬ್ಬರೂ ಕೈಕಂಬದಲ್ಲಿ ವಿವಾಹ ಸಮಾರಂಭ ಮುಗಿಸಿ ಮರಳುತ್ತಿದ್ದರು.
ಸಿಸಿ ಕ್ಯಾಮರಾ ಅಳವಡಿಸಿ, ಅಪರಿಚಿತರಿಗೆ ಬಾಗಿಲು ತೆಗೆಯಬೇಡಿ – ಪೊಲೀಸರ ಸಲಹೆ (more…)