bantwalnews.com report
ಬಂಟ್ವಾಳದ ಅಭಿವೃದ್ಧಿಗಾಗಿ ರಘುರಾಮ ಮುಕುಂದ ಪ್ರಭುಗಳು ಕಟಿಬದ್ಧರಾಗಿ ನಿಂತವರು. ಅವರು ಜೀವನದಲ್ಲಿ ಹೊಂದಿದ್ದ ದೂರದರ್ಶಿತ್ವ, ಕರ್ತವ್ಯ ನಿಷ್ಠೆಗಳೇ ಅವರನ್ನು ಎತ್ತರಕ್ಕೇರಿಸಿತು. ವಿದ್ಯಾರ್ಥಿಗಳು ಆದರ್ಶ ವ್ಯಕ್ತಿಗಳ ಸಂದೇಶಗಳನ್ನು ಪಾಲಿಸಿಕೊಂಡು ಜೀವನದಲ್ಲಿ ಯಶಸ್ಸನ್ನು ಕಾಣಬೇಕು ಎಂದು ಎಸ್.ವಿ.ಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ.ಶಂಕರ್ ಭಟ್ ಹೇಳಿದರು.
ಇಲ್ಲಿನ ವಿದ್ಯಾಗಿರಿಯ ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಶಾಲೆಯಲ್ಲಿ ನಡೆದ ಬಂಟ್ವಾಳ ರಘುರಾಮ ಮುಕುಂದ ಪ್ರಭುಗಳ 110ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಅವರು ಶಾಲೆಯಲ್ಲಿ ಜರುಗಿದ ’ದರ್ಪಣ’ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದರು.
ಶ್ರೀ ವೆಂಕಟರಮಣ ಸ್ವಾಮಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೂಡಿಗೆ ರಘುನಾಥ ಶೆಣೈ, ಎಸ್.ವಿ.ಎಸ್ ಕಾಲೇಜಿನ ಸಂಚಾಲಕ ಕೂಡಿಗೆ ಪ್ರಕಾಶ ಶೆಣೈ, ಶಾಲಾ ಸಂಚಾಲಕ ಭಾಮೀ ವಿಠ್ಠಲದಾಸ ಶೆಣೈ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ಮಲ್ಯ, ಪ್ರಾಂಶುಪಾಲೆ ರಮಾಶಂಕರ್ ಸಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಘುರಾಮ ಮುಕುಂದ ಪ್ರಭುಗಳ ಜೀವನ ಘಟನೆಯನ್ನು ಆಧರಿಸಿದ ವಿವಿಧ ಕಾರ್‍ಯಕ್ರಮಗಳು ಜರಗಿದವು. ವಿವಿಧ ಪಠ್ಯೇತರ ಚಟುವಟಿಕೆಯನ್ನು ಆಧರಿಸಿ ನಡೆದ ಸ್ಪರ್ಧೆಗಳ ಬಹುಮಾನ ವಿತರಣಾ ಸಮಾರಂಭವೂ ನಡೆಯಿತು. 10ನೇ ತರಗತಿಯ ಅನೂಷ್ ಶೆಟ್ಟಿ, ಫಾತಿಮ ನಿಹಾ ಕಾರ್‍ಯಕ್ರಮ ನಿರ್ವಹಿಸಿದರು.