ತಾಲೂಕು ಮಟ್ಟದ ಯುವಜನ ಮೇಳ ಭಾನುವಾರ ಪುಣಚದಲ್ಲಿ ನಡೆಯಿತು.ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಬಂಟ್ವಾಳ ತಾಲೂಕು ಪಂಚಾಯಿತಿ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪುಣಚ ಗ್ರಾಮ ಪಂಚಾಯಿತಿ, ಯುವಜನ ಒಕ್ಕೂಟ ಬಂಟ್ವಾಳ, ಪುಣಚ ಯುವಕ ಮಂಡಲದ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ ಉದ್ಘಾಟಿಸಿದರು.
ಯುವ ಸಂಘಟನೆಗಳನ್ನು ಬೆಳೆಸಲು ಯುವಜನ ಮೇಳಗಳು ಪೂರಕವಾಗಿದೆ ಎಂದು ಚಂದ್ರಹಾಸ ಕರ್ಕೇರ ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಜಯಶ್ರೀ ಕೋಡಂದೂರು ಮಾತನಾಡಿ ಸಾಮಾಜಿಕ ಚಟುವಟಿಕೆಯಲ್ಲಿ ಯುವ ಜನತೆಯನ್ನು ಹೆಚ್ಚು ಭಾಗವಹಿಸಿಕೊಳ್ಳುವಂತೆ ನೋಡಿಕೊಳ್ಳಬೇಕಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಎಂ. ಎಸ್. ಮಹಮ್ಮದ್ ಮಾತನಾಡಿ ಯುವಕ ಮಂಡಲದಲ್ಲಿ ಕಾರ್ಯನಿರ್ವಹಿಸುವುದರಿಂದ ಜಾತ್ಯಾತೀತ ಮನೋಭಾವ ಬೆಳೆಯುತ್ತದೆ ಎಂದರು.
ಸ್ಥಾಪಕ ಅಧ್ಯಕ್ಷ ಮಾರಪ್ಪ ಶೆಟ್ಟಿ ಬೈಲುಗುತ್ತು, ಸ್ಥಾಪಕ ಕಾರ್ಯದರ್ಶಿ ಮಹಮ್ಮದ್ ಬಿಕಾಂ, ರಾಘವ ಪೂಜಾರಿ ಹಿತ್ತಿಲು, ಎಂ ಎಸ್ ಮಹಮ್ಮದ್, ಮುರಳೀಧರ ರೈ, ಮಾದೋಡಿ, ಸುರೇಶ್ ಗೌಡ ಓಟೆತ್ತಟ್ಟ, ದಿನಕರ ರೈ ಬೈಲುಗುತ್ತು, ತೀರ್ಥಾನಂದ ಗೌಡ ಬಾಳೆಕುಮೇರಿ ಅವರನ್ನು ಸನ್ಮಾನಿಸಲಾಯಿತು. ನಿಕಟ ಪೂರ್ವ ಅಧಕ್ಷರಾದ ಲಲಿತ ಎನ್ ನಾಯ್ಕ ಅಜ್ಜಿನಡ್ಕ, ನಯನ, ರಾಮಕೃಷ್ಣ ಭಟ್ ಬಳಂತಿಮೊಗೆರು, ಪವಿತ್ರ, ಉದಯಕುಮಾರ್ ದಂಬೆ, ಯುವಜನ ಒಕ್ಕೂಟದ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುಣಚ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರತಿಭಾ ಶ್ರೀಧರ ಶೆಟ್ಟಿ ವಹಿಸಿದ್ದರು.
ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಆಲಿ, ಸದಸ್ಯರಾದ ಕವಿತಾ ಎನ್ ನಾಕ್, ವೆಂಕಟೇಶ್ ಕುಮಾರ್ ಬದಿಕೋಡಿ, ಅಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ ಅಳಿಕೆ, ಪುಣಚ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಹೇಶ್ ಶೆಟ್ಟಿ, ಅಭಿವೃದ್ಧಿ ಅಧಿಕಾರಿ ಪ್ರೇಮಲತಾ, ತಾಲೂಕು ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯನ್ ಮಿರಾಂದ, ಬಂಟ್ವಾಳ ಯುವಜನ ಒಕ್ಕೂಟದ ಗೌರವಾಧ್ಯಕ್ಷ ತಿಮ್ಮಪ್ಪ ಪೂಜಾರಿ ಉಪಸ್ಥಿತರಿದ್ದರು.
ರೇಶ್ಮಾ ಎಚ್ ಪ್ರಾರ್ಥಿಸಿದರು. ಬಂಟ್ವಾಳ ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ನವೀನ್ ಪಿ. ಎಸ್. ಸ್ವಾಗತಿಸಿದರು. ಬಂಟ್ವಾಳ ಯುವಜನ ಒಕ್ಕೂಟದ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಪ್ರಸ್ತಾವನೆಗೈದರು. ಪುಣಚ ಯುವಕ ಮಂಡಲ ಅಧ್ಯಕ್ಷ ರೋಶನ್ ಟೆಲ್ಲಿಸ್ ವಂದಿಸಿದರು. ಶಫಿಕ್ ಎಂ. ಎಸ್., ರಾಮಕೃಷ್ಣ ಮೂಡಂಬೈಲು ಕಾರ್ಯಕ್ರಮ ನಿರೂಪಿಸಿದರು.