ಫರಂಗಿಪೇಟೆ

17ರಂದು ಹೋಮಿಯೋಪತಿ ಉಚಿತ ಶಿಬಿರ

ಬಂಟ್ವಾಳ: ತುಂಬೆ ಫಾದರ್ ಮುಲ್ಲರ್ ಹೋಮಿಯೋಪಥಿ ಹೊರರೋಗಿ ವಿಭಾಗ ವತಿಯಿಂದ ಉಚಿತ ಹೋಮಿಯೋಪಥಿ ವೈದ್ಯಕೀಯ ತಪಾಸಣಾ ಶಿಬಿರ ಡಿಸೆಂಬರ್ 17ರಂದು ನಡೆಯಲಿದೆ.

ಬೆಳಗ್ಗೆ 9ರಿಂದ 4ಗಂಟೆವರೆಗೆ ನಡೆಯಲಿರುವ ಈ ಶಿಬಿರದಲ್ಲಿ ಮಕ್ಕಳ ಖಾಯಿಲೆಗಳು, ಮಹಿಳೆಯರ ಖಾಯಿಲೆಗಳು, ವೃದ್ಧಾಪ್ಯದ ಸಮಸ್ಯೆಗಳು ಹಾಗೂ ಇತರ ಖಾಯಿಲೆಗಳಿಗೆ ಉಚಿತ ಔಷಧ ಮತ್ತು ಚಿಕಿತ್ಸೆ ನೀಡಲಾಗುತ್ತದೆ. ಶಿಬಿರವನ್ನು ತುಂಬೆ ಗ್ರಾ.ಪಂ.ಮಾಜಿ ಅಧ್ಯಕ್ಷ ಮಹಮ್ಮದ್ ವಳವೂರು, ಸಾಮಾಜಿಕ ಸೇವಾ ಕರ್ತ ಸಿಲ್ವೆಸ್ಟರ್ ಡಿ’ಸೋಜ, ಕೊಡ್ಮಾಣ್ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೊಡ್ಮಾನ್ ಕಾಂತಪ್ಪ ಶೆಟ್ಟಿ , ಹೋಮಿಯೊಪತಿ ಫಾ.ಮುಲ್ಲರ್ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಶಿವಪ್ರಸಾದ್, ವೈದ್ಯಕೀಯ ಅಧೀಕ್ಷಕ  ಡಾ. ಗಿರೀಶ್ ನಾವಡ ಭಾಗವಹಿಸಲಿದ್ದಾರೆ ಎಂದು ಆಡಳಿತಾಧಿಕಾರಿ ರೆ.ಫಾ.ರೋಶನ್ ಕ್ರಾಸ್ತ ತಿಳಿಸಿದ್ದಾರೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts