ಬಂಟ್ವಾಳ : ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯ ವ್ಯಾಪ್ತಿಗೊಳಪಟ್ಟ ಮೆಲ್ಕಾರ್-ಬೋಗೋಡಿ ಕ್ಯಾಂಪಸ್ ವಿಂಗ್ ಇತ್ತೀಚೆಗೆ ರೂಪೀಕರಿಸಲಾಗಿದ್ದು, ಅಧ್ಯಕ್ಷರಾಗಿ ಸುಹೈಲ್ ಗುಡ್ಡೆಅಂಗಡಿ ಆಯ್ಕೆಯಾದರು. ಇತ್ತೀಚೆಗೆ ಪಾಣೆಮಂಗಳೂರು ಎಸ್ಕೆಎಸ್ಸೆಸ್ಸೆಫ್ ಶಾಖಾ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಎಸ್ಕೆಎಸ್ಸೆಸ್ಸೆಫ್ ಕ್ಯಾಂಪಸ್ ವಿಂಗ್ ಜಿಲ್ಲಾಧ್ಯಕ್ಷ ಬಾತಿಷ ಕಲ್ಲಡ್ಕ ಉದ್ಘಾಟಿಸಿದರು. ಇಲ್ಯಾಸ್ ಬೋಗೋಡಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಕನ್ವೀನರ್ ಆಗಿ ಮುಹಮ್ಮದ್ ಕೈಫ್, ಕೋಶಾಧಿಕಾರಿಯಾಗಿ ಮುಹಮ್ಮದ್ ಅಶ್ಫಾಕ್, ಮೇಲ್ವಿಚಾರಕರಾಗಿ ಅಮಾನುಲ್ಲಾ ಗುಡ್ಡೆಅಂಗಡಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶಮೀವುಲ್ಲಾ, ರಿಫಾತ್ ಯೂಸುಫ್, ಮುಹಮ್ಮದ್ ಇರ್ಶಾದ್, ಬಾತಿಷ್, ರಿಝ್ವಾನ್, ಸಜ್ಜಾದ್ ಅಹ್ಮದ್, ತಮೀಝ್ ಇಂತಿಯಾಝ್, ಮುಹಮ್ಮದ್ ಮುಝಮ್ಮಿಲ್, ಮುಜೀಬ್ ಅವರನ್ನು ನೇಮಿಸಲಾಯಿತು.
ಇದೇ ವೇಳೆ ಎಸ್ಕೆಎಸ್ಸೆಸ್ಸೆಫ್ ಕ್ಯಾಂಪಸ್ ವಿಂಗ್ ಕಾರ್ಯ ಸಂಯೋಜಕ ಸಫ್ವಾನ್ ಬಂಟ್ವಾಳ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು. ಎಸ್ಕೆಎಸ್ಸೆಸ್ಸೆಫ್ ಆಲಡ್ಕ ಶಾಖಾಧ್ಯಕ್ಷ ಹನೀಫ್ ಬೋಳಂಗಡಿ, ಕಾರ್ಯದರ್ಶಿ ಮುಹಮ್ಮದ್ ಇರ್ಶಾದ್ ಗುಡ್ಡೆಅಂಗಡಿ, ಕೋಶಾಧಿಕಾರಿ ಹನೀಫ್ ಹಾಸ್ಕೋ ಆಲಡ್ಕ, ಮುಹಮ್ಮದ್ ಹನೀಫ್ ಫಿಶ್, ಶಿಹಾಬ್ ಬೋಗೋಡಿ ಮೊದಲಾದವರು ಉಪಸ್ಥಿತರಿದ್ದರು. ಶಫೀಕ್ ಆಲಡ್ಕ ಸ್ವಾಗತಿಸಿ, ವಂದಿಸಿದರು. ಅಮಾನುಲ್ಲಾ ಕಾರ್ಯಕ್ರಮ ನಿರೂಪಿಸಿದರು.
IFTAAR ORGANISED BY FORMER MINISTER RAMANATHA RAI AT PANEMANGALORE (more…)