ಬಂಟ್ವಾಳ

ತುಂಬೆ ಡ್ಯಾಂ ಸಂತ್ರಸ್ತರಿಗೆ ನ್ಯಾಯ ಒದಗಿಸಿ

ಬಂಟ್ವಾಳ: ಮಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸಲು ನೇತ್ರಾವದಿ ನದಿಗೆ ತುಂಬೆಯಲ್ಲಿ ಡ್ಯಾಂ ನಿರ್ಮಾಣಗೊಂಡಿದ್ದು ನೀರು ಶೇಖರಣೆಯಿಂದ ಜಲಾವೃತಗೊಳ್ಳಲಿರುವ ನೇತ್ರಾವತಿ ನದಿಯ ಇಕ್ಕೆಲದ ರೈತಾಪಿ ವರ್ಗಕ್ಕೆ ಅನ್ಯಾಯವಾಗುತ್ತಿದ್ದು ಜಿಲ್ಲಾಡಳಿತದ ವಂಚನೆಯ ಪ್ರವೃತ್ತಿಯನ್ನು ಖಂಡಿಸಿ ಜಿಲ್ಲಾಧಿಕಾರಿಗಳಿಗೆ ಲಿಖಿತ ಮನವಿ ಮಾಡಿ ರೈತರ ಹಿತಾಸಕ್ತಿ ಕಾಪಾಡಿ ರೈತರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವಂತೆ ಮನವಿ ಮಾಡಿದೆ.

ಸಂತ್ರಸ್ತ ರೈತರ ಸಭೆ ಜನಪ್ರತಿನಿಧಿಗಳ ಸಮ್ಮುಖದಲ್ಲಿ ನಡೆಸುವಂತೆ ತುಂಬೆ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ ಅಧ್ಯಕ್ಷ ಎಂ.ಸುಬ್ರಹ್ಮಣ್ಯ ಭಟ್ ಆಗ್ರಹಿಸಿದ್ದಾರೆ.

ಡಿ.12ರಂದು ದ.ಕ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಜರಗಿದ ಸಂತ್ರಸ್ತ ರೈತರ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಸೂಚಿಸಿದ ಪರಿಹಾರೋಪಾಯಕ್ಕೆ ಯಾವುದೇ ಅನುಮತಿ ರೈತರಿಂದ ದೊರೆಯದೆ ಇದ್ದುದರಿಂದ ಪುನಃ ಏಕಾಭಿಪ್ರಾಯ ನೀಡುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದರು. 5 ಮೀ.ಎತ್ತರಕ್ಕೆ ನೀರು ನಿಂತಾಗ ಮುಳುಗಡೆಯಾಗುವ ಭೂಮಿಯ ಲಿಖಿತ ವಿವರ, 1 ಮೀ.ಎತ್ತರ ವೈಜ್ಞಾನಿಕವಾಗಿ ಶಿಫಾರಸ್ಸುಗೊಂಡಂತೆ  ಒರತೆ ಪ್ರದೇಶ ಸೇರಿಸಿ ನ್ಯಾಯಯುತ ಸೂಕ್ತ ಪರಿಹಾರ ನೀಡಿ, ಜಿಲ್ಲಾಧಿಕಾರಿಗಳೇ ನೇಮಿಸಿದ ಗ್ರಾಮ ಪ್ರತಿನಿಽಗಳನ್ನು ಸಭೆಗೆ ಲಿಖಿತವಾಗಿ ಆಹ್ವಾನಿಸಿ,ರೈತರ ಸಭೆಗೆ ರೈತರಿಗೆ ಲಿಖಿತ ಆಹ್ವಾನ ನೀಡಿ ಸಭೆ ನಡೆಸಿ ಜಿಲ್ಲಾಧಿಕಾರಿಗಳು ಹಿಂದೆ ಹೇಳಿದ ಹಾಗೆ ಮುಳುಗಡೆಪ್ರದೇಶದಲ್ಲಿ ರೈತರ ಸಭೆ ನಡೆಸಿ ಎಂಬುದಾಗಿ ಲಿಖಿತ ಮನವಿ ಸಲ್ಲಿಸಲಾಯಿತು.

ಡಿ.1 ರಂದು ಎ.ಸಿ.ಯವರ ನೇತೃತ್ವದಲ್ಲಿ ಗ್ರಾಮೀಣ ಭಾಗಕ್ಕೆ ಎಕರೆಗೆ 3.99 ಲ.ರೂಪರಿಹಾರ ಎಂದು ತಿಳಿಸಿದರೆ ಜಿಲ್ಲಾಧಿಕಾರಿಗಳು ಎಕರೆಗೆ 2.4 ಲ.ರೂ.ಎಂದು ತಿಳಿಸಿದರು. 2011ರಲ್ಲಿ ಆಗಿನ ಜಿಲ್ಲಾಧಿಕಾರಿಗಳು ಎಕರೆಗೆ 50 ಲ.ರೂ.ಪರಿಹಾರ ಎಂದು ತಿಳಿಸಿದ್ದನ್ನು ನೆನಪಿಸಬಹುದು. ಸುಪ್ರಿಂಕೋರ್ಟ್ ನಿರ್ದೇಶನದಂತೆ ನಿಜದಾರಣೆಯ 4 ಪಟ್ಟು ಜಾಸ್ತಿ ಸಿಗಲಿದೆ ಎಂದು ತಿಳಿಸಿದರು. ಇದರಿಂದ ರೈತರು ನಿರಾಶರಾದರು.

ಮುಳುಗಡೆ ಪ್ರದೇಶಕ್ಕೆ ಮಣ್ಣು ತುಂಬಿಸಿ ಭೂಮಿಯನ್ನು ಎತ್ತರಿಸಲು  ಜಿಲ್ಲಾಧಿಕಾರಿಗಳು ಸಲಹೆ ನೀಡಿದರು. ಎಲ್ಲಾ ರೈತರು ಈ ರೀತಿ ಮಾಡಿದರೆ ನಿರೀಕ್ಷಿತ ನೀರು ಸಂಗ್ರಹಕ್ಕೆ ಪೆಟ್ಟು ಬೀಳಲಿದೆ. ರೈತರು ಸಹಮತಕ್ಕೆ ಬಾರದಿದ್ದರೆ ಭೂಸ್ವಾಧೀನ ಕಾನೂನು ಪ್ರಕಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

6 ತಿಂಗಳ ಮಟ್ಟಿಗೆ ಮುಳುಗಡೆ ಭೂಮಿಯನ್ನು ಎಕರೆಗೆ 28 ಸಾವಿರ ರೂ.ನಂತೆ ಬಾಡಿಗೆಗೆ ರೈತರು ನೀಡಬೇಕಾಗಿ ಜಿಲ್ಲಾಧಿಕಾರಿಗಳು ಕೇಳಿಕೊಂಡರು. ಮುಳುಗಡೆ ಭೂಮಿಯನ್ನು ಕ್ರಯಕ್ಕೆ ನೀಡುವುದಾದರೆ ನೇರಾ ನೇರಾ ಮಾತುಕತೆಗೂ ಅವಕಾಶವಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದು ರಾಷ್ಟ್ರೀಯ ಹೆದ್ದಾರಿ ಪಕ್ಕ ಇರುವ ಇರುವ ಕೃಷಿ ಭೂಮಿಗೆ ರಾಷ್ಟ್ರೀಯ ಹೆದ್ದಾರಿಗೆ ನೀಡುವ ಪರಿಹಾರ ದರ ನೀಡಲಾಗುವುದೆಂದು ತಿಳಿಸಿದರು.

8 ಮೀ.ಎತ್ತರಕ್ಕೆ ಸಭೆ ನಡೆಸಿ ಎಲ್ಲಾ ಸಂತ್ರಸ್ತ ರೈತರಿಗೆ ಏಕಕಾಲದಲ್ಲಿ ಪರಿಹಾರ ಒದಗಿಸಲು ಸರಕಾರಕ್ಕೆ ಪ್ರಸ್ತಾವನೆ ಕಳಿಸಲಾಗುವುದು ಎಂದು ಮಾಹಿತಿ ನೀಡಿದರು. ರೈತರಿಗೆ ಈ ತನಕ ನೀಡಿದ ಅಂಕಿ ಅಂಶಗಳಿಂದ ಗೊಂದಲ ಉಂಟಾಯಿತೆ ಹೊರತು ನ್ಯಾಯ ದೊರೆಯದೆ ಇರುವುದರಿಂದ ಜನಪ್ರತಿನಿಧಿಗಳು ನ್ಯಾಯ ಒದಗಿಸುವಂತೆ ರೈತರು ಆಗ್ರಹಿಸಿದ್ದಾರೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts