ಬಂಟ್ವಾಳ: ವಿಕಾಸದತ್ತ ಸಾಗುವ ಜ್ಞಾನ ಮಾನವನಿಗೆ ಮಾತ್ರ ಇದ್ದು, ಮನುಷ್ಯ ಜನ್ಮದಲ್ಲಿ ಮಾನವ ಧರ್ಮದವನ್ನು ಪರಿಪಾಲಿಸಿಕೊಂಡು ಹೋಗುವ ಅಗತ್ಯವಿದೆ. ಪಂಚ ತತ್ವಗಳನ್ನು ಎಲ್ಲರೂ ಸಮಾನವಾಗಿ ಪಾಲ್ಗೊಂಡು ಜೀವನ ನಡೆಸಬೇಕು. ಸಾಮೂಹಿಕ ಪ್ರಾರ್ಥನೆಯಿಂದ ದೇವರ ಅನುಗ್ರಹ ಬೇಗನೇ ಪ್ರಾಪ್ತಿಯಾಗುತ್ತದೆ ಎಂದು ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವೀ ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿ ಹೇಳಿದರು.
ಮಸೀದಿಯನ್ನು ಸಯ್ಯಿದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ಉದ್ಘಾಟಿಸಿದರು. ಸಯ್ಯಿದ್ ಇಬ್ರಾಹಿಂ ಬಾತೀಷ ತಂಙಳ್ ಆನೆಕಲ್ಲು ದುವಾಃ ಆಶೀರ್ವಚನ ನೀಡಿದರು. ನಿಯಾಝ್ ಕಾಮಿಲ್ ಸಖಾಫಿ ಕುಕ್ಕಾಜೆ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್ ಮಹಮ್ಮದ್, ತಾಲ್ಲೂಕು ಪಂಚಾಯಿತಿ ಸದಸ್ಯ ಹಾಜಿ ಉಸ್ಮಾನ್ ಕರೋಪಾಡಿ, ವೆಂಕಟೇಶ್ ಕುಮಾರ್ ಭಟ್ ಬದಿಕೋಡಿ, ಕರೋಪಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎ ಅಬ್ದುಲ್ ಜಲೀಲ್ ಕರೋಪಾಡಿ, ಕಬ್ಬಿನ ಮೂಲೆ ತ್ವಾಹ ಮಸ್ಜಿದ್‌ನ ಅಧ್ಯಕ್ಷ ಕೆ.ಎಂ ಅಬ್ದುಲ್ಲ, ಕೆ.ಎಂ ಮುಹಮ್ಮದ್ ಸಹದ್, ಇಬ್ರಾಹಿಂ ಫೈಝಿ ಕನ್ಯಾನ, ಹಾಜಿ ಕೆ.ಕೆ ಸುಲೈಮಾನ್ ಪೈಝಿ, ಹಕೀಂ ಮದನಿ ಕರೋಪಾಡಿ, ದಾವೂದ್ ಸಅದಿ ಸಮ್ಮಡ್ಕ, ಹಾಜಿ ಹಮೀದ್ ಮುಸ್ಲಿಯಾರ್, ಹಮೀದ್ ಸಖಾಫಿ, ವಿಟ್ಲ ಕೇಂದ್ರ ಜುಮಾ ಮಸೀದಿ ಖತೀಬು ಪಿ.ಎಂ ಮೂಸಲ್ ಫೈಝಿ ಉಪಸ್ಥಿತರಿದ್ದರು.
ಹೈದರ್ ಅಲಿ ನಈಮಿ ಕಬ್ಬಿನಮೂಲೆ ಸ್ವಾಗತಿಸಿದರು. ಅಶ್ರಫ್ ಮದನಿ ಕಬ್ಬಿನಮೂಲೆ ವಂದಿಸಿದರು. ಹಸೈನಾರ್ ಮಾರಾಠಿ ಮೂಲೆ ಸಹಕರಿಸಿದರು.