ಬಂಟ್ವಾಳ: ಮಹಿಳೆಯರ ಸರ್ವತೋಮುಖ ಅಭಿವೃದ್ದಿಗಾಗಿ, ಮಹಿಳೆಯರನ್ನು ಸಂಘಟಿಸಿ ಉದ್ಯಮದ ಮೂಲಕ ಆರ್ಥಿಕವಾಗಿ ಸದೃಡವಾಗುವಂತೆ ಮಾಡುವ ಸರಕಾರದ ವಿವಿಧ ಯೋಜನೆಗಳನ್ನು ಉಪಯೋಗಿಸಿಕೊಳ್ಳಿ ಎಂದು ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ಹೇಳಿದರು .
ತೋಟಗಾರಿಕೆ ಇಲಾಖೆ, ಜಿಲ್ಲಾ ಪಂ.ಬಂಟ್ವಾಳ, ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಬಂಟ್ವಾಳ ಇವರ ಸಹಯೋಗದಲ್ಲಿ ತಾ.ಪಂ. ಯೋಜನೆಯಡಿ ರೈತ ಮಹಿಳೆಯರಿಗೆ ಹಣ್ಣು ಸಂಸ್ಕರಣೆ ತರಬೇತಿ ಹಾಗೂ ಉಚಿತ ಮಲ್ಲಿಗೆ ಗಿಡ ವಿತರಣೆ ಕಾರ್‍ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಬೇರೆ ಬೇರೆ ವೃತ್ತಿಗಳಲ್ಲಿ ಮಹಿಳೆಯರನ್ನು ತೊಡಗಿಸಿಳ್ಳುವಂತೆ ಮಾಡಿ ಸ್ವಾವಲಂಬಿ ಜೀವನ ನಡೆಸುವ ಇಲಾಖೆಯ ಯೋಜನೆ ಮತ್ತು ಯೋಚನೆಗೆ ಮಹಿಳೆರು ಸಹಕಾರ ನೀಡುವುದರ ಜೊತೆಗೆ ಇಚ್ಚಾಶಕ್ತಿಯನ್ನು ಮೈಗೂಡಿಸಿಕೊಳ್ಳಿ ಎಂದರು.
ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಮಾತನಾಡಿ ಹಣ್ಣು ಹಂಪಲುಗಳನ್ನು ತರಕಾರಿಗಳನ್ನು ತಿನ್ನುವುದರ ಜೊತೆಗೆ ಬೆಳೆಸುವ ಹವ್ಯಾಸವನ್ನು ಮೈಗೂಡಿಸಿಕೊಂಡಾಗ ಉತ್ತಮ ಆರೋಗ್ಯ ಸಿಗಬಹುದು, ಆರ್ಥಿಕವಾಗಿಯೂ ಸದೃಡರಾಗಬಹುದು. ಸಮಯವನ್ನು ವ್ಯರ್ಥಮಾಡಿಕೊಳ್ಳದೆ ಕೃಷಿಗೆ ಹೆಚ್ಚು ಉತ್ತು ಕೊಡಿ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ ಮಹಿಳೆಯರು ಆರ್ಥಿಕವಾಗಿ ಮುಂದೆ ಬಂದಾಗ ಗ್ರಾಮ ಅಭಿವೃದ್ದಿ ಯಾಗುತ್ತದೆ ಎಂದರು. ವೇದಿಕೆಯಲ್ಲಿ ತಾ.ಪಂ.ಸದಸ್ಯೆ ಮಲ್ಲಿಕಾ ಶೆಟ್ಟಿ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಮಲ್ಲಿಕಾ, ಸಂಪನ್ಮೂಲ ವ್ಯಕ್ತಿ ಸುಮನ ಮೂರ್ತಿ ಮತ್ತು ಸ್ತ್ರಿ ಶಕ್ತಿ ಬ್ಲಾಕ್ ಸೋಸೈಟಿ ಅಧ್ಯಕ್ಷೆ ಶರತಿ ಶೆಟ್ಟಿ ಉಪಸಿತರಿದ್ದರು. ತೋಟಗಾರಿಕಾ ಉಪನಿರ್ದೇಶಕ ಯೋಗೇಶ್ ಹೆಚ್ ಆರ್ ಪ್ರಸ್ತಾವಿಕವಾಗಿ ಮಾತನಾಡಿದರು. ತೋಟಗಾರಿಕಾ ಸಹಾಯಕ ನಿರ್ದೇಶಕ ದಿನೇಶ್ ಸ್ವಾಗತಿಸಿದರು. ಹಿರಿಯ ಮೇಲ್ವಿಚಾರಕಿ ಗಾಯತ್ರಿ ಕಂಬಳಿ ವಂದಿಸಿದರು. ಕೃಷಿ ಇಲಾಖೆಯ ಅಧಿಕಾರಿ ಬಾಲಕೃಷ್ಣ ಕಾರ್‍ಯಕ್ರಮ ನಿರೂಪಿಸಿದರು.