ಬಂಟ್ವಾಳ: ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ರಾಯಿಯಲ್ಲಿ ನಡೆದ ಶ್ರೀ ವೆಂಕಟರಮಣ ಸ್ವಾಮಿ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಸಮಾರೋಪ ನಡೆಯಿತು.
ಜಿಪಂ ಸದಸ್ಯ ತುಂಗಪ್ಪ ಬಂಗೇರ ಮಾತನಾಡಿ ವಿದ್ಯಾರ್ಥಿಗಳು ಶಿಬಿರದ ಅನುಭವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಪ್ರಾಂಶುಪಾಲ ಡಾ. ಪಾಂಡುರಂಗ ನಾಯಕ್ ವಾರ್ಷಿಕ ವಿಶೇಷ ಶಿಬಿರದ ಮಹತ್ವವನ್ನು ವಿವರಿಸಿದರು.
ತಾಲೂಕು ಪಂಚಾಯತ್‌ನ ಮಾಜಿ ಸದಸ್ಯ ವಸಂತ್ ಕುಮಾರ್ ಅಣ್ಣಳಿಕೆ, ರಾಯಿ ಗ್ರಾಮಪಂಚಾಯತ್‌ನ ಉಪಾಧ್ಯಕ್ಷರಾದ ಪುಷ್ಪಲತಾ, ಗ್ರಾಮ ಪಂಚಾಯತ್‌ನ ಮಾಜಿ ಸದಸ್ಯರಾದ ರಾಮ ಸುಂದರ ಗೌಡ, ಹಳೆವಿದ್ಯಾಥಿ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ರಾಯಿಬೆಟ್ಟು, ರಾಯಿ ಶಾಲಾ ಮುಖ್ಯೋಪಾಧ್ಯಾಯರಾದ ಡಿ.ಜಯರಾಮ್ ಪಡ್ರೆ, ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸದಾನಂದ ಸಪಲ್ಯ, ಎಸ್.ವಿ.ಎಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶಶಿಕಲಾ, ಎಸ್.ವಿ.ಎಸ್ ಕಾಲೇಜಿನ ಪ್ರಾಣಿ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಭಾರತಿ ಎಸ್ ಭಟ್ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಶಿಬಿರದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಹರೀಶ್ ಆಚಾರ್ಯ ರಾಯಿ, ಯೋಜನಾಘಟಕದ ನಾಯಕರಾದ ಸುದರ್ಶನ್ ಡಿ ಸುವರ್ಣ, ಕು. ವಿದ್ಯಾಲಕ್ಷ್ಮೀ, ದೀಪಕ್ ಶೆಟ್ಟಿಗಾರ್, ರಶ್ಮಿ ಎಂ.ಪಿ ಉಪಸ್ಥಿತರಿದ್ದರು.
ಯೋಜನಾಧಿಕಾರಿ ಕಿಟ್ಟು ರಾಮಕುಂಜ ಸ್ವಾಗತಿಸಿ, ಶಿಬಿರಾರ್ಥಿ ಮೇಧಾ ರಾಮಕುಂಜ ವರದಿ ವಾಚಿಸಿದರು. ಶಿಬಿರಾರ್ಥಿಗಳಾದ ಭವ್ಯಾ, ಶ್ಯಾಮಲಾ, ಮೇಘರಾಜ್ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು. ಯೋಜನಾಧಿಕಾರಿ ಪ್ರೊ. ನಾರಾಯಣ ಭಂಡಾರಿ ವಂದಿಸಿ, ಶಿಬಿರಾರ್ಥಿ ಮಧುರ ಕಾರ್ಯಕ್ರಮ ನಿರೂಪಿಸಿದರು. ಸಹಶಿಬಿರಾಧಿಕಾರಿಗಳಾದ ಪ್ರದೀಪ್ ಪೂಜಾರಿ, ಕು. ಅಶ್ವಿತಾ, ಕು. ಸ್ವಾತಿ, ರೂಪಾ, ಕು. ಪ್ರತಿಭಾ ವಿ ಕೆ ಮತ್ತು ಕು. ವಿಜೇತಾ ನಾಯಕ್ ಸಹಕರಿಸಿದರು.