ವಿಟ್ಲ: ಟಿಪ್ಪರ್ ಹಾಗೂ ಓಮ್ನಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಗಂಬೀರ ಗಾಯಗೊಂಡ ಘಟನೆ ಬೈರಿಕಟ್ಟೆ ಸಮೀಪ ಶನಿವಾರ ನಡೆದಿದೆ.
ಬಾಯರು ಪೊನ್ನಂಗಳ ನಿವಾಸಿ ಮಹಾಬಲೇಶ್ವರ ಭಟ್ (70), ಪತ್ನಿ ಶಂಕರಿ (60)ಅವರು ಗಾಯಾಳುಗಳು. ವಿಟ್ಲದಿಂದ ಕನ್ಯಾನ ಕಡೆಗೆ ಹೋಗುತ್ತಿದ್ದ ಓಮ್ನಿಗೆ ಬೈರಿಕಟ್ಟೆ ಸಮೀಪದ ಕಡಿದಾದ ತಿರುವಿನಲ್ಲಿ ಟಿಪ್ಪರ್ ಡಿಕ್ಕಿಯಾಗಿದೆ. ಇದರಿಂದ ಓಮ್ನಿಯ ಮುಂಭಾಗ ಜಖಂಗೊಂಡಿದ್ದು, ಅದರಲ್ಲಿದ್ದ ಇಬ್ಬರಿಗೆ ಗಂಬೀರ ಗಾಯವಾಗಿದೆ.
ಚಾಲನೆ ಮಾಡುತ್ತಿದ್ದ ಮಹಾಬಲೇಶ್ವರ ಭಟ್ ಅವರು ಕಾಲಿಗೆ ಹಾಗೂ ಶಂಕರಿ ಅವರ ತಲೆಗೆ ಗಂಬೀರವಾದ ಗಾಯವಾಗಿದೆ. ಇಬ್ಬರನ್ನು ವಿಟ್ಲ 108 ವಾಹನದ ಇಎಂಟಿ ನಾಗೇಶ್ ಹಾಗೂ ಪೈಲೆಟ್ ವೀರಭದ್ರ ಮಂಗಳೂರು ಖಾಸಗೀ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸ್ ಉಪನಿರೀಕ್ಷಕ ಪ್ರಕಾಶ್ ದೇವಾಡಿಗ ಮತ್ತು ಸಿಬ್ಬಂದಿ ಬೇಟಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…