ಬಂಟ್ವಾಳ: ದೇಶದ ಸಮಗ್ರ ಅಭಿವೃದ್ಧಿ ಹಾಗೂ ಭಯೋತ್ಪಾದನೆ ಸೇರಿದಂತೆ ಭ್ರಷ್ಟಾಚಾರ ವಿರುದ್ಧ ಸಮರ ಸಾರಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 500, 1000 ನೋಟು ರದ್ಧತಿ ಯೋಜನೆ ಯಶಸ್ವಿಯಾಗುವ ನಿಟ್ಟಿನಲ್ಲಿ ಶುಕ್ರವಾರ ರಾತ್ರಿ ನಡೆದ ಕಾರ್ತಿಕ ದೀಪೋತ್ಸವದಂದು ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಮೋಂತಿಮಾರು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಬಿಜೆಪಿಯಿಂದ ವಿಶೇಷ ಪೂಜೆ ನಡೆಯಿತು.
ದೇಶದಲ್ಲಿ ಹೆಚ್ಚಿರುವ ಕಾಳಧನ, ಭೂ, ಡ್ರಗ್ಸ್ ಇತ್ಯಾದಿ ಮಾಫಿಯಾಗಳು, ಈ ಕಾರ್‍ಯಯೋಜನೆಯ ಸಂದರ್ಭ ಅನಿವಾರ್ಯವಾಗಿ ನಾಗರಿಕರಿಗೆ ಆಗುತ್ತಿರುವ ಅಲ್ಪಪ್ರಮಾಣದ ತೊಂದರೆ ನಿವಾರಣೆಯಾಗಲಿ. ಯೋಜನೆಯ ಮೂಲಕ ಭಾರತ ವಿಶ್ವದಲ್ಲಿ ಅಗ್ರಗಣ್ಯ ಸ್ಥಾನಕ್ಕೆ ತಲುಪಲಿ ಎಂದು ಪ್ರಾರ್ಥಿಸಲಾಯಿತು.
ಭಾರತದ ಅಭಿವೃಧ್ಧಿ ಪರ ಕೈಗೊಳ್ಳುತ್ತಿರುವ ಎಲ್ಲಾ ಕಾರ್‍ಯಕ್ರಮಗಳು ಸಹಜವಾಗಿ ಕಾಳಧನಿಕರನ್ನು ಹಾಗೂ ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರನ್ನು ಕೆರಳಿಸಿರುವುದರಿಂದ, ಪ್ರಧಾನಿಗಳ ಜೀವಕ್ಕೆ ಆತಂಕ ಎದುರಾಗಿದೆ. ಈ ಮೂಲಕ ಶ್ರೀದೇವಿಯೂ ಅವರಿಗೆ ಪೂರ್ಣ ಪ್ರಮಾಣದಲ್ಲಿ ರಕ್ಷಣೆ ಒದಗಿಸಿ ಮೋದಿಯವರಿಗೆ ಮತ್ತುಷ್ಟು ಶಕ್ತಿ ಸಾಮರ್ಥ್ಯ ಕೊಟ್ಟು ಶ್ರೀರಕ್ಷೆಯಾಗಿ ನಿಲ್ಲಲಿ ಎಂದು ಪ್ರಾರ್ಥಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದು ಸಮಾಜದವರ ಮೇಲೆ ಆಕ್ರಮಣಗಳು ಹೆಚ್ಚುತ್ತಿದ್ದು, ಆಡಳಿತ ವರ್ಗಕ್ಕೆ ಹಾಗೂ ಸ್ವಾರ್ಥ ರಾಜಕರಣಿಗಳಿಗೆ ಶ್ರೀ ದೇವಿ ಸದ್ಬುದ್ಧಿ ಪ್ರಾಪ್ತಿಸಲಿ ಎಂದು ಪ್ರಾರ್ಥಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀಕ್ಷೇತ್ರದ ಆಡಳಿತ ಮೋಕ್ತೆಸರರು ಹಾಗೂ ಬಿಜೆಪಿಯ ಜಿಲ್ಲಾ ವಕ್ತಾರರಾದ ವಿಕಾಸ್ ಪುತ್ತೂರು, ಮಾಜಿ ಶಾಸಕರದ ಪದ್ಮನಾಭ ಕೊಟ್ಟಾರಿ, ರಾಜ್ಯ ಬಿಜೆಪಿ ಸಹವಕ್ತಾರೆ ಸುಲೋಚನಾ ಜಿ.ಕೆ.ಭಟ್, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ದೇವದಾಸ ಶೆಟ್ಟಿ, ಮಂಚಿ ಗ್ರಾ.ಪಂ ಅಧ್ಯಕ್ಷೆ ಪ್ರಮೀಳ, ಉಪಾಧ್ಯಕ್ಷ ಮೋಹನ್‌ದಾಸ್ ಶೆಟ್ಟಿ ಹಾಗೂ ಬಿಜೆಪಿ ಬೆಂಬಲಿತ ಪಂಚಾಯತ್ ಸದಸ್ಯರು,ಮಂಚಿ ಬಿಜೆಪಿ ಅಧ್ಯಕ್ಷ ರಮೇಶ್ ರಾವ್,ಕಾರ್‍ಯದರ್ಶಿ ಸಂತೋಷ್ ಗುಂಡಿಮಜಲು ಹಾಗೂ ಹತ್ತಾರು ಬಿಜೆಪಿ ಕಾರ್‍ಯಕರ್ತರು ಉಪಸ್ಥಿತರಿದ್ದರು.