ಬಂಟ್ವಾಳ: ಪಾಣೆಮಂಗಳೂರು ಗುಡ್ಡೆಯಂಗಡಿಯ ನೂರುದ್ದೀನ್ ಜುಮಾ ಮಸೀದಿ ವತಿಯಿಂದ ಲೋಕಾನುಗ್ರಹಿ ಮಹಮ್ಮದ್ ಮುಸ್ತಫಾ (ಸ.ಅ)ರವರ ಜನ್ಮದಿನಾಚರಣೆ ಪ್ರಯುಕ್ತ ಬೃಹತ್ ಮೀಲಾದ್ ರಾಲಿ ನಡೆಯಿತು
ಹನೀಫ್ ದಾರಿಮಿ ಖತೀಬ್ ಉದ್ಘಾಟಿಸಿದರು. ಮಸೀದಿ ಅಧ್ಯಕ್ಷ ಅಬುಬಕ್ಕರ್ ಮೆಲ್ಕಾರ್, ಪುರಸಭೆ ಮಾಜಿ ಸದಸ್ಯ ಅಬುಬಕ್ಕರ್ ಸಿದ್ದೀಕ್, ಪ್ರಮುಖರಾದ ಮೊಹಮ್ಮದ್ ಹನೀಫ್, ಅಬ್ದುಲ್ ಮಜೀದ್ ಬೋಗೋಡಿ, ಅಬುಬಕರ್ ಮದನಿ, ಫಾರೂಕ್ ಎಬಿಸಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ ಸ್ವಚ್ಛತಾ ಕಾರ್ಯ ನಡೆಸಲಾಯಿತು.