ಬಿ.ಸಿ ರೋಡಿನಲ್ಲಿ ದಾರುಣವಾಗಿ ಹತ್ಯೆಯಾದ ಲಾವಣ್ಯ ಮೃತದೇಹದ ಅಂತಿಮ ದರ್ಶನವನ್ನು ಮುಖಂಡ ಅರುಣ್ ಕುಮಾರ್ ಪುತ್ತಿಲ ಪಡೆದರು. ಈ ಸಂದರ್ಭ ಅವರು ಕುಟುಂಬದವರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಂಟ್ವಾಳದಲ್ಲಿ ನಡೆದ ಲಾವಣ್ಯಳ ಬರ್ಬರ ಹತ್ಯೆಯು ಇಡೀ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿದೆ. ಈ ಘಟನೆಯನ್ನು ನಾವು ಅತ್ಯಂತ ಉಗ್ರವಾಗಿ ಖಂಡಿಸುತ್ತೇವೆ ಆರೋಪಿಯನ್ನು ತಕ್ಷಣ ಬಂಧಿಸಿ ಸಾರ್ವಜನಿಕರ ಆಗ್ರಹದಂತೆ ಕ್ರಮ ಕೈಗೊಳ್ಳಬೇಕುಮುಂದಿನ ದಿನದಲ್ಲಿ ಯಾರು ಇಂತಹ ಕುಕೃತ್ಯವನ್ನು ಎಸಗದಂತೆ ಕಠಿಣ ಕ್ರಮ ಕೈಗೊಳ್ಳಬೇಕು. ಮೃತ ಯುವತಿಯ ಕುಟುಂಬದವರಿಗೆ ರಾಜ್ಯ ಸರ್ಕಾರ ತಕ್ಷಣ ಪರಿಹಾರ ಘೋಷಿಸಬೇಕು ಎಂದರು
(more…)