ಇಂದು ಭಾರತವು ಬಂಡವಾಳಶಾಹಿ ವ್ಯವಸ್ಥೆ ಯ ಕಾರಣದಿಂದಾಗಿ ಅಧೋಗತಿಗೆ ತಲುಪಿದ್ದು ಯುವಜನತೆ ಇದರ ವಿರುದ್ಧ ಜಾಗೃತರಾಗಬೇಕಿದೆ ಎಂದು ಸಿ.ಪಿ.ಐ.ಎಂ.ಎಲ್. ಲಿಬರೇಶನ್ ರಾಜ್ಯ ಕಾರ್ಯದರ್ಶಿ ಕ್ಲಿಪ್ಟನ್ ಡಿ ರೊಜಾರಿಯೋ ಹೇಳಿದರು
ಭಾನುವಾರ ಬಿ.ಸಿ.ರೋಡ್ ನ ಅಂಬೇಡ್ಕರ್ ಭವನದಲ್ಲಿ ನಡೆದ ಕ್ರಾಂತಿಕಾರಿ ಯುವಜನ ಸಂಘಟನೆ (ಆರ್.ವೈ.ಎ) ರಾಜ್ಯ ಸಮಾವೇಶ ಹಾಗೂ ಪ್ರಸ್ತುತ ದೇಶದ ಮುಂದಿರುವ ಸವಾಲುಗಳಲ್ಲಿ ವಿದ್ಯಾರ್ಥಿ ಯುವಜನತೆಯ ಪಾತ್ರ ಎಂಬ ವಿಚಾರದಲ್ಲಿ ನಡೆದ ವಿಚಾರ ಸಂಕಿರಣವನ್ನು ಉದ್ದೇಶಿಸಿ ಮಾತನಾಡಿದರು,
ಭಗತ್ ಸಿಂಗ್ ರವರ ವಿಚಾರದಾರೆಯಿಂದ ದೇಶಪ್ರೇಮ ಮತ್ತು ಸಮಾಜವಾದದ ಚಿಂತನೆ ,ಅಂಬೇಡ್ಕರ್ ರವರಿಂದ ಸಾಮಾಜಿಕ ನ್ಯಾಯ ಹಾಗೂ ಕುವೆಂಪುರವರಿಂದ ವಿಶ್ವ ಮಾನವ ಸಂದೇಶವನ್ನು ಪಡೆಯಬೇಕು ಎಂದು ಕರೆ ನೀಡಿದರು.
ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ರವಿಕಿರಣ್ ಪುಣಚ ಯುವ ಭಾರತದಲ್ಲಿ ಯುವಕರೇ ದೇಶವನ್ನು ಮುನ್ನಡೆಸುವವರಾಗಬೇಕು ಆದರೆ ಇದು ಯುವಜನತೆ ದೇಶದ ಬಗ್ಗೆ ನಿಜವಾದ ಕಾಳಜಿ ವಹಿಸದೇ ಮೌನವಾಗಿದ್ದಾರೆ. ಯುವಜನತೆ ಒಂದು ಸ್ಪಷ್ಟ ಉದ್ದೇಶದಿಂದ ಸಂಘಟಿತರಾಗಬೇಕು ಹಾಗೂ ಈ ದೇಶದ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ಕರೆ ನೀಡಿದರು,
ಮುಖ್ಯ ಅತಿಥಿಯಾಗಿ ನಿವೃತ್ತ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಬದರುದ್ದೀನ್.ಎಂ.ಎನ್ ಕಾರ್ಯಕ್ರಮಕ್ಕೆ ಶುಭಕೋರಿ ಮಾತನಾಡಿದರು.ಸಿ.ಪಿ.ಐ.ಎಂ.ಎಲ್ ಲಿಬರೇಶನ್ ದ.ಕ ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ, ನಮ್ಮ ಮತ ನಮ್ಮ ಹಕ್ಕು ಸಂಘಟನೆಯ ಪಾದರ್ ವಿನೋದ್, ಸಿ.ಪಿ.ಐ.ಎಂ.ಎಲ್ ಕೊಡಗು ಜಿಲ್ಲಾ ಕಾರ್ಯದರ್ಶಿ ಮೋಹನ್.ಎಂ.ಕೆ, ಎ.ಐ.ಸಿ.ಸಿ.ಟಿ.ಯು ರಾಜ್ಯ ಗೌರವಾಧ್ಯಕ್ಷರಾದ ಮೋಹನ್ .ಕೆ.ಇ, ಅಟೋ ರಿಕ್ಷಾ ಚಾಲಕರ ಸಂಘದ ಜಿಲ್ಲಾದ್ಯಕ್ಷರಾದ ಅನ್ಸಾರ್ ಬಜಾಲ್, ಐಸಾ ರಾಜ್ಯ ಮುಖಂಡರಾದ ಸತ್ಯಂ ಪಾಂಡೆ, ಹೇಮಂತ್ ಬೆಂಗಳೂರು ಲಿಯೋನ್ ಬೆಂಗಳೂರು ಮತ್ತಿತರರು ಮಾತನಾಡಿದರು ಮಹಮ್ಮದ್ ಲುಕ್ಮಾನ್ ಕೆ.ಎಂ ಸ್ವಾಗತಿಸಿ ಪ್ರಾಸ್ತಾವಿಕ ವಾಗಿ ಮಾತನಾಡಿದರು, ಸಭೆಯ ಅಧ್ಯಕ್ಷತೆಯನ್ನು ತುಳಸೀದಾಸ್. ಆರ್ ವಹಿಸಿದ್ದರು.ನೂತನ ಸಂಚಾಲಕ ಸಮಿತಿ ರಚಿಸಲಾಯಿತು ಸಂಚಾಲಕರುಗಳಾಗಿ ತುಳಸೀದಾಸ್ .ಆರ್, ಚೆನ್ನಯ್ಯ ಬೆಂಗಳೂರು, ಸಹ ಸಂಚಾಲಕರುಗಳಾಗಿ ಮಹಮ್ಮದ್ ಲುಕ್ಮಾನ್. ಕೆ.ಎಂ, ಹೇಮಂತ್ ಬೆಂಗಳೂರು, ರಮೇಶ್ ಗಂಗಾವತಿ ಹಾಗೂ ಹನ್ನೆರಡು ಜನ ಸದಸ್ಯರ ಸಮಿತಿ ರಚಿಸಲಾಯಿತು
Rs.5 ಲಕ್ಷ ಬಡ್ಡಿರಹಿತ ಬೆಳೆ ಸಾಲ | ಅಡಿಕೆಯ ಪರ್ಯಾಯ ಬಳಕೆ ಸಂಶೋಧನೆಗೆ ಒತ್ತು | ‘ಅಡಿಕೆ ಜೈವಿಕ ಆರ್ಥಿಕತೆ…