ಬೆಂಜನಪದವು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಕ್ಷತ್ರ ವನ
ವಿಶ್ವ ಪರಿಸರ ದಿನದ ಅಂಗವಾಗಿ ಬಂಟ್ವಾಳ ತಾಲೂಕಿನ ಬೆಂಜನಪದವು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಳೆದ ಶೈಕ್ಷಣಿಕ ವರ್ಷದಿಂದ ಆರಂಭಿಸಲಾದ ನಕ್ಷತ್ರ ವನದಲ್ಲಿ ವೈವಿಧ್ಯಮಯ ಔಷಧೀಯ ಗಿಡಮೂಲಿಕೆ ನೆಡಲಾಯಿತು.
ಬಂಟ್ವಾಳ ತಾಲೂಕಿನ ಹಿರಿಯ ವಕೀಲ ಶ್ರೀನಿವಾಸ ದೈಪಲ ಅವರು ಗಿಡಗಳನ್ನು ನೆಟ್ಟು, ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಸಂವಿಧಾನದ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳಲ್ಲಿಯೇ ಉಲ್ಲೇಖಿಸಿರುವ ಪರಿಸರ ಸಂರಕ್ಷಣೆಯ ಪರಿಕಲ್ಪನೆಯನ್ನು ಇಂದಿನ ವಿದ್ಯಾರ್ಥಿಗಳು ಗಂಭೀರವಾಗಿ ಪರಿಗಣಿಸಿ ಸ್ವಸ್ಥ, ಸುಂದರ ಪರಿಸರ ರೂಪಿಸುವಲ್ಲಿ ನಕ್ಷತ್ರ ವನ ನಿರ್ಮಾಣದಲ್ಲಿ ಕೈ ಜೋಡಿಸುವ ಕಾರ್ಯ ಆಗಬೇಕಿದೆ. ಇದು ಒಂದು ವಿನೂತನ, ಶ್ಲಾಘನೀಯ ಕಾರ್ಯಕ್ರಮ ,ಮುಂದಿನ ಪೀಳಿಗೆ ಇದರ ಪ್ರಯೋಜನ ಪಡೆಯುವಂತಾಗಲಿ ಎಂದು ಶುಭ ಹಾರೈಸಿದರು.
ಪ್ರಿನ್ಸಿಪಾಲ್ ಕವಿತಾ ಅಧ್ಯಕ್ಷತೆ ವಹಿಸಿದ್ದರು. ಗಣಿತಶಾಸ್ತ್ರ ಉಪನ್ಯಾಸಕ ರವಿಚಂದ್ರ ಮಯ್ಯ ಸ್ವಾಗತಿಸಿದರು. ಜೀವಶಾಸ್ತ್ರ ಉಪನ್ಯಾಸಕ ಮೇದಪ್ಪ ಜಿ ಆರ್ ವಂದಿಸಿದರು. ಆಂಗ್ಲ ಭಾಷಾ ಉಪನ್ಯಾಸಕ ರಾಧೇಶ ತೋಳ್ಪಾಡಿ ಎಸ್ ಕಾರ್ಯಕ್ರಮ ನಿರೂಪಿಸಿದರು.