ಬಂಟ್ವಾಳ : ಬಂಟ್ವಾಳ ತಾಲೂಕಿನ ಅಜಿಲಮೊಗರು ದೆಚ್ಚಾರ್ ಸದಾನಂದ, ವನಿತ ದಂಪತಿ ಮಗಳು ಶ್ರೀಜಾ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಆರನೇ ಸ್ಥಾನ ಪಡೆದಿದ್ದಾರೆ. ಅವರು ಗಳಿಸಿದ ಅಂಕಗಳು 594.
ತನ್ನ ಅಜ್ಜಿ ಮನೆಯಾದ ನರಿಕೊಂಬು ಗ್ರಾಮದ ಅಬೆರೊಟ್ಟು ಗಂಗಯ್ಯ ಪೂಜಾರಿಯವರ ಮನೆಯಿಂದಲೇ ಪ್ರಾಥಮಿಕ ಶಿಕ್ಷಣವನ್ನು ಪಡೆದಿದ್ದ ಆಕೆ, ಎಸ್ ಎಸ್ ಎಲ್ ಸಿ ಶಿಕ್ಷಣವನ್ನು ಸರಕಾರಿ ಪ್ರೌಢಶಾಲೆ ಬೊಂಡಾಲದಲ್ಲಿ ಪಡೆದು 581 ಅಂಕ ಗಳಿಸಿದ್ದಳು. ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಕಾಲೇಜಿನ ಶಿಕ್ಷಣದ ಮೂಲಕವೇ 594 ಅಂಕ ಪಡೆದಿದ್ದಾಳೆ. ಹಿತೈಷಿಗಳು, ನರಿಕೊಂಬು ಗ್ರಾಮಸ್ಥರು, ಬಿರ್ವೆರ್ ಸೇವಾ ಟ್ರಸ್ಟ್ ನರಿಕೊಂಬು ಆಕೆ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.