ಬಂಟ್ವಾಳ: ಬಿ.ಸಿ.ರೋಡಿನಲ್ಲಿರುವ ರಿಕ್ಷಾ ಭವನದ ಬೆಳ್ಳಿಹಬ್ಬ ಹಾಗೂ ರಿಕ್ಷಾ ಡ್ರೈವರ್ಸ್ ಅಸೋಸಿಯೇಶನ್ ಬಂಟ್ವಾಳದ ಸುವರ್ಣ ಮಹೋತ್ಸವ ಕಾರ್ಯಕ್ರಮಗಳು ಏಪ್ರಿಲ್ 11ರಂದು ರಿಕ್ಷಾ ಭವನದಲ್ಲಿ ಬೆಳಗ್ಗೆ 10.30ರಿಂದ ನಡೆಯಲಿದೆ.
ಅಧ್ಯಕ್ಷ, ನ್ಯಾಯವಾದಿ ಬಿ.ರಾಜೇಶ್ ಬೊಲ್ಲುಕಲ್ಲು ಅವರು ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಬೆಳಗ್ಗೆ ಕಾರ್ಯಕ್ರಮವನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಉದ್ಘಾಟಿಸುವರು. ವಿಧಾನಸಭಾಧ್ಯಕ್ಷ ಯು.ಟಿ.ಕಾದರ್, ಸಂಸದ ಬ್ರಜೇಶ್ ಚೌಟ, ಮಾಜಿ ಸಚಿವ ಬಿ.ರಮಾನಾಥ ರೈ, ಹಿರಿಯ ವಕೀಲ ಬಿ.ನಾರಾಯಣ ಪೂಜಾರಿ, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಎಎಸ್ ಪಿ ಯಶ್ ಕುಮಾರ್ ಶರ್ಮ, ಬುಡಾ ಅಧ್ಯಕ್ಷ ಬೇಬಿ ಕುಂದರ್, ಉಪಸಾರಿಗೆ ಅಧಿಕಾರಿ ಚರಣ್ ಕೆ, ಲಯನ್ಸ್ ಸ್ಥಾಪಕಾಧ್ಯಕ್ಷ ವಸಂತ ಬಾಳಿಗಾ ಭಾಗವಹಿಸುವರು. ಈ ವೇಳೆ ಮಾಜಿ ಅಧ್ಯಕ್ಷ, ನ್ಯಾಯವಾದಿ ಬಿ.ನಾರಾಯಣ ಪೂಜಾರಿ ಅವರನ್ನು ಸನ್ಮಾನಿಸಲಾಗುವುದು. ಸಂಜೆ ಕಥೆ ಎಡ್ಡೆಂಡು ಎಂಬ ನಾಟಕ ಪ್ರದರ್ಶನವಿರಲಿದೆ ಎಂದು ಮಾಹಿತಿ ನೀಡಿದರು. 1975ರಂದು ಡ್ರೈವರ್ಸ್ ಎಸೋಸಿಯೇಶನ್ ಎಂದು ಸ್ಥಾಪನೆಗೊಂಡ ಈ ಸಂಘಟನೆ 2002ರ ಬಳಿಕ ರಿಕ್ಷಾ ಡ್ರೈವರ್ಸ್ ಎಸೋಸಿಯೇಶನ್ ಎಂದು ಪುನರ್ನಾಮಕರಣಗೊಂಡಿತು. ಸುಮಾರು 1 ಸಾವಿರಕ್ಕೂ ಅಧಿಕ ಸದಸ್ಯರು ಇಲ್ಲಿದ್ದಾರೆ. ಹಿರಿಯ ವಕೀಲ ಜಿ.ಎನ್. ಕುಳೂರು, ಮತ್ತೋರ್ವ ಹಿರಿಯ ವಕೀಲ ಇ.ವಿ.ಭಟ್ ಬಳಿಕ ಟಿ.ನಾರಾಯಣ ಪೂಜಾರಿ ಅಧ್ಯಕ್ಷರಾಗಿದ್ದುಕೊಂಡು ಕಾನೂನು ಸಲಹೆಗಾರರಾಗಿಯೂ ಸಂಘವನ್ನು ಮುನ್ನಡೆಸಿದ್ದು, ಈ ಅವಧಿಯಲ್ಲಿ ಸ್ವಂತ ಕಟ್ಟಡ ರಿಕ್ಷಾ ಭವನ ನಿರ್ಮಾಣಗೊಂಡಿದೆ. ಸಾಮಾಜಿಕ ಸೇವಾ ಕಾರ್ಯಗಳನ್ನೂ ಸಂಘ ಕಾಲಕಾಲಕ್ಕೆ ಮಾಡುತ್ತಾ ಬಂದಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಬಿ.ಹುಸೈನ್ ಪರ್ಲ್ಯ, ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಭಂಡಾರಿಬೆಟ್ಟು, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಪೂಜಾರಿ ಪೂಂಜರಕೋಡಿ, ಖಜಾಂಚಿ ಕೃಷ್ಣಪ್ಪ ಮಡಿವಾಳ ಚಿಕ್ಕಯ್ಯಮಠ ಉಪಸ್ಥಿತರಿದ್ದರು.